ಕನ್ನಡಿಗರು ‘ರೇಸಿಸ್ಟ್’ ಎಂದ ಯೂಟ್ಯೂಬರ್, ಹಾಕಿದ್ದಾನೆ ಸವಾಲು

Shrinkhal: ಹಿಂದಿ ಯೂಟ್ಯೂಬರ್ ಶ್ರೀಂಕಾಲ್​ ಎಂಬಾತ ಕನ್ನಡಿಗರನ್ನು ಜನಾಂಗೀಯ ನಿಂದಕರೆಂದು ಕರೆದಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೆ ಯೂಟ್ಯೂಬರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೆಲ್ಲದರ ನಡುವೆ ಆ ಯೂಟ್ಯೂಬರ್ ಕನ್ನಡಿಗರಿಗೆ ಸವಾಲು ಸಹ ಹಾಕಿದ್ದಾನೆ.

ಕನ್ನಡಿಗರು ‘ರೇಸಿಸ್ಟ್’ ಎಂದ ಯೂಟ್ಯೂಬರ್, ಹಾಕಿದ್ದಾನೆ ಸವಾಲು
Follow us
|

Updated on: Mar 14, 2024 | 12:56 PM

ಕನ್ನಡಿಗರು (Kannadiga) ಸಹಿಷ್ಣುಗಳು, ಗೌರವ ಕೊಟ್ಟು ಪಡೆಯುವರು, ಅತಿಥಿಗಳ ಸತ್ಕರಿಸುವವರು, ಬೆಂಗಳೂರಿನಲ್ಲಿ ಬದುಕುತ್ತಿರುವ ವಿವಿಧ ರಾಜ್ಯದ, ದೇಶಗಳ ಲಕ್ಷಾಂತರ ಜನರೇ ಇದಕ್ಕೆ ಸಾಕ್ಷಿ. ಆದರೆ ಇಲ್ಲೊಬ್ಬ ಯೂಟ್ಯೂಬರ್ ಕನ್ನಡಿಗರನ್ನು ಜನಾಂಗೀಯ ನಿಂದಕರು (ರೇಸಿಸ್ಟ್​) ಎಂದು ನಾಲಗೆ ಹರಿಬಿಟ್ಟಿದ್ದಾರೆ. ಹಿಂದಿ ಯೂಟ್ಯೂಬರ್​ನ ಈ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಕನ್ನಡದ ಕೆಲವು ಯೂಟ್ಯೂಬರ್​ಗಳು, ಹಿಂದಿ ಯೂಟ್ಯೂಬರ್​ ವಿರುದ್ಧ ಮುಗಿಬಿದ್ದಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಹ ಯೂಟ್ಯೂಬರ್ ನ ಹೇಳಿಕೆ ಖಂಡಿಸಿದ್ದಾರೆ. ಇದರ ನಡುವೆ ಹಿಂದಿ ಯೂಟ್ಯೂಬರ್ ಸಹ ಕನ್ನಡಿಗರಿಗೆ ಸವಾಲು ಹಾಕಿದ್ದಾನೆ.

ಎಸ್​ಆರ್​ಪೆ ಹೆಸರಿನ ಚಾನೆಲ್​ ಹೊಂದಿರುವ ಹಿಂದಿ ಯೂಟ್ಯೂಬರ್ ಶ್ರಿಂಕಾಲ್ ಕೆಲ ತಿಂಗಳ ಹಿಂದೆ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದರು. ಆ ವಿಡಿಯೋನಲ್ಲಿ ಇತರೆ ಕೆಲವರೊಟ್ಟಿಗೆ ಸೇರಿಕೊಂಡು ವಿಡಿಯೋ ಕಾಲ್ ಮೂಲಕ ತಮಾಷೆಯ ಮಾತುಗಳನ್ನಾಡುತ್ತಿದ್ದರು. ವಿಡಿಯೋನಲ್ಲಿ ಯುವತಿಯೊಬ್ಬರು, ಮುಂಬೈನಲ್ಲಿ ನೆಲೆಸಿರುವವರನ್ನು ‘ಮುಂಬೈಕರ್’ ಎಂದು ಕರೆಯುವುದಾದರೆ ಕರ್ನಾಟಕದಲ್ಲಿ ನೆಲೆಸಿರುವವರನ್ನು ಏನೆಂದು ಕರೆಯುತ್ತಾರೆ? ಎಂದು ಪ್ರಶ್ನಿಸಿದ್ದರು, ಅದಕ್ಕೆ ಉತ್ತರಿಸಿದ್ದ ಶ್ರೀಂಕಾಲ್ ‘ರೇಸಿಸ್ಟ್’ ಎಂದಿದ್ದರು. ಶ್ರೀಂಕಾಲ್​ನ ಈ ಮಾತಿಗೆ ವಿಡಿಯೋ ಕಾಲ್​ನಲ್ಲಿರುವ ಅವನ ಗೆಳೆಯರು ಜೋರಾಗಿ ನಕ್ಕಿದ್ದರು.

ಇದನ್ನೂ ಓದಿ:ಮುಗಿಯುತ್ತಿಲ್ಲ ಬಿಗ್ ಬಾಸ್ ವಿನ್ನರ್ ರಂಪಾಟ; ಯೂಟ್ಯೂಬರ್​ ಮೇಲೆ ಹಲ್ಲೆ, ವಿಡಿಯೋ ವೈರಲ್

ಆ ವಿಡಿಯೋ ಇದೀಗ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು, ಕನ್ನಡಿಗರ ಬಗ್ಗೆ ನಾಲಗೆ ಹರಿಬಿಟ್ಟ ಯೂಟ್ಯೂಬರ್​ನ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬೆನ್ನಲ್ಲೆ ‘ಅಪಾಲಜೀಸ್ ಟು ಕನ್ನಡಿಗಾಸ್’ ಹೆಸರಿನ ಥಂಬ್​ನೈಲ್​ ನಲ್ಲಿ ವಿಡಿಯೋ ಒಂದನ್ನು ಯೂಟ್ಯೂಬರ್ ಶ್ರೀಂಕಾಲ್ ಅಪ್​ಲೋಡ್ ಮಾಡಿದ್ದರು. ಆದರೆ ಆ ವಿಡಿಯೋನಲ್ಲಿಯೂ ಸಹ ಅಹಂಕಾರದಿಂದ ಮಾತನಾಡಿದ್ದ, ಅಲ್ಲದೆ ಮಾರ್ಚ್ 15ರಂದು ಬೆಂಗಳೂರಿನ ಒರಾಯಿನ್ ಮಾಲ್​ಗೆ ಬರುತ್ತೀನೆಂದು ಸವಾಲು ಸಹ ಹಾಕಿದ್ದಾನೆ.

ಯೂಟ್ಯೂಬರ್ ಶ್ರೀಂಕಾಲ್​ನ ದುರಹಂಕಾರದ ವರ್ತನೆ ಹಾಗೂ ಕನ್ನಡಿಗರ ಬಗ್ಗೆ ಆತನಿಗಿರುವ ನಂಜನ್ನು ಕನ್ನಡಿಗರು ತೀವ್ರವಾಗಿ ಖಂಡಿಸಿದ್ದಾರೆ. ಸಿನಿಮಾ ನಿರ್ದೇಶಕ ಸಂತೋಷ್ ಆನಂದ್​ರಾಮ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಕನ್ನಡಿಗರು ಎಲ್ಲರನ್ನು ಸ್ವಾಗತಿಸೊ ಸಹೃದಯಿಗಳು racist ಗಳಲ್ಲ…!ಕನ್ನಡಿಗರ ಹೊರತುಪಡಿಸು ಪರಭಾಷಿಕರನ್ನು ಸ್ನೇಹಿತರಂತೆ ನೋಡುವ ಮತ್ತೊಬ್ಬ ಭಾಷಿಕ ಭಾರತದಲ್ಲಿಲ್ಲ. ನೀನು ಬದುಕುತ್ತಿರುವ ನಗರ ಹಾಗೂ ಜನಗಳ ಬಗ್ಗೆ ಗೌರವ ಇರಲಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ