AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೌಡ, ಕನ್ನಡಿಗ, ದೇಸಿ ಹುಡುಗ’: ಪತಿ ಬಗ್ಗೆ ಪರಿಚಯ ಹೇಳಿದ ದೀಪಿಕಾ ದಾಸ್​

ಇದೇ ಮೊದಲ ಬಾರಿಗೆ ದೀಪಿಕಾ ದಾಸ್​ ಮತ್ತು ದೀಪಕ್​ ಅವರು ಮಾಧ್ಯಮಗಳ ಎದುರು ಬಂದು ಮಾತನಾಡಿದ್ದಾರೆ. ಆರತಕ್ಷತೆ ಸಮಾರಂಭದಲ್ಲಿ ಪತಿಯ ಹಿನ್ನೆಲೆ ಏನು ಎಂಬುದನ್ನು ದೀಪಿಕಾ ಅವರು ವಿವರಿಸಿದ್ದಾರೆ. ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ದೀಪಿಕಾ ದಾಸ್​ ಹಾಗೂ ದೀಪಕ್​ ಅವರು ಈಗ ಸತಿ-ಪತಿ ಆಗಿದ್ದಾರೆ. ದೀಪಕ್​ ಬಗ್ಗೆ ಇಲ್ಲಿದೆ ಮಾಹಿತಿ..

‘ಗೌಡ, ಕನ್ನಡಿಗ, ದೇಸಿ ಹುಡುಗ’: ಪತಿ ಬಗ್ಗೆ ಪರಿಚಯ ಹೇಳಿದ ದೀಪಿಕಾ ದಾಸ್​
ದೀಪಕ್​, ದೀಪಿಕಾ ದಾಸ್​
Follow us
ಮದನ್​ ಕುಮಾರ್​
|

Updated on: Mar 10, 2024 | 10:50 PM

ರಿಯಲ್​ ಎಸ್ಟೇಟ್​ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್​ ಜೊತೆ ನಟಿ ದೀಪಿಕಾ ದಾಸ್​ (Deepika Das) ಅವರು ಮದುವೆ ಆಗಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಅವರ ಮದುವೆ (Deepika Das Marriage) ನಡೆಯಿತು. ಈಗ ಸ್ನೇಹಿತರು ಮತ್ತು ಆಪ್ತರಿಗಾಗಿ ರಿಸೆಪ್ಷನ್​ ಮಾಡಲಾಗಿದೆ. ಈ ಸಂದರ್ಭದಲ್ಲಿ ದೀಪಕ್​ ಮತ್ತು ದೀಪಿಕಾ ದಾಸ್​ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪತಿಯನ್ನು ದೀಪಿಕಾ ದಾಸ್​ ಅವರು ಪರಿಚಯಿಸಿದ್ದಾರೆ. ಗಂಡನ (Deepika Das Husband) ಹಿನ್ನೆಲೆ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಕಳೆದ ಒಂದು ವರ್ಷದಿಂದ ದೀಪಿಕಾ ದಾಸ್​ ಮತ್ತು ದೀಪಕ್​ ಅವರು ಡೇಟಿಂಗ್​ ಮಾಡುತ್ತಿದ್ದರು. ಈಗ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಮೊದಲ ಬಾರಿಗೆ ದೀಪಕ್​ ಅವರು ಮಾಧ್ಯಮಗಳ ಎದುರು ತಮ್ಮ ಲವ್​ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ‘ನಾಲ್ಕು ವರ್ಷಗಳ ಮುಂಚೆ ನಾವು ಭೇಟಿ ಆದೆವು. ಕಳೆದೊಂದು ವರ್ಷದಿಂದ ಕಮಿಟೆಡ್​ ರಿಲೇಷನ್​ಶಿಪ್​ನಲ್ಲಿ ಇದ್ದೆವು. ಮನೆಯವರಿಗೆಲ್ಲ ಗೊತ್ತಿತ್ತು. ಇದರಲ್ಲಿ ಏನೂ ಸಸ್ಪೆನ್ಸ್​ ಇಲ್ಲ. ನಾನು ರಿಯಲ್​ ಎಸ್ಟೇಟ್​ ಡೆವೆಲಪರ್​. ಇಲ್ಲಿಯೇ ಇರುವುದು. ದುಬೈನಲ್ಲಿ ಅಲ್ಲ. ಯುಕೆ ಮತ್ತು ದುಬೈನಲ್ಲಿ ಸ್ಟಾರ್ಟಪ್​ ಇದೆ. ಆದರೆ ನಾನು ಇಲ್ಲಿಯೇ ಇರುವ ಗೌಡ’ ಎಂದು ದೀಪಕ್​ ಹೇಳಿದ್ದಾರೆ.

ಪತಿಯ ಮಾತು ಕೇಳಿ ದೀಪಿಕಾ ದಾಸ್​ ಅವರು ಮುಗುಳು ನಕ್ಕಿದ್ದಾರೆ. ‘ಪಕ್ಕಾ ಗೌಡ, ಪಕ್ಕಾ ಕನ್ನಡಿಗ, ಪಕ್ಕಾ ದೇಸಿ ಹುಡುಗ. ನಮಗೆ ಅವರೇ ಬೇಕಾಗಿದ್ದು. ಫಾರಿನರ್ಸ್​ ಆಗಲ್ಲ ನಮಗೆ. ದೀಪಕ್​ ಧ್ವನಿ ಜೋರಾಗಿ ಬರಲ್ಲ. ಅವರನ್ನು ಮಾತಾಡಿಸಬೇಕು ಎಂದರೆ ನಾನೇ ಹತ್ತು ಸಲ ಕೇಳಬೇಕು’ ಎಂದು ದೀಪಿಕಾ ದಾಸ್​ ಹೇಳಿದ್ದಾರೆ. ‘ಮುಂದಿನ ದಿನಗಳಲ್ಲೂ ದೀಪಕಾ ಅವರ ನಟನಾ ವೃತ್ತಿಗೆ ನನ್ನ ಸಹಕಾರ ಖಂಡಿತಾ ಇರುತ್ತದೆ’ ಎಂದಿದ್ದಾರೆ ದೀಪಕ್​.

ಇದನ್ನೂ ಓದಿ: ‘ನಮ್ಮದು ಗೌಪ್ಯ ಮದುವೆ ಅಲ್ಲ’: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ದೀಪಿಕಾ ದಾಸ್​

‘ನಾವು ನಾವಾಗಿಯೇ ಇರಬೇಕು ಅಂತ ದೀಪಕ್​ ನನಗೆ ಹೇಳುತ್ತಾ ಇರುತ್ತಾರೆ. ನನ್ನ ಬೆಳವಣಿಗೆಯಲ್ಲಿ ಅವರ ಬೆಂಬಲ ಇದ್ದೇ ಇರುತ್ತದೆ ಎಂಬ ನಂಬಿಕೆ ನನಗೆ ಇದೆ. ಅದು ಮಾಡಬೇಡ, ಇದು ಮಾಡಬೇಡ ಅಂತ ಅವರು ಯಾವತ್ತೂ ನನಗೆ ಹೇಳಿಲ್ಲ. ಡೇಟ್​ ಮಾಡುವಾಗಲೂ ಹೇಳಿಲ್ಲ. ಮುಂದೆಯೂ ಹೇಳಲ್ಲ ಎಂಬ ನಂಬಿಕೆಯಿದೆ. ಪರ್ಸನಲ್​ ಬೇರೆ, ಪ್ರೊಫೆಷನಲ್​ ಬೇರೆ ಅಂತ ನಾವು ಇಟ್ಟುಕೊಂಡಿದ್ದೇವೆ. ಅವರ ವೃತ್ತಿಗೂ ನಮಗೂ ಸಂಬಂಧ ಇಲ್ಲ. ಅದು ಏನೆಂಬುದೇ ನನಗೆ ಗೊತ್ತಾಗುವುದಿಲ್ಲ. ಅದೇ ರೀತಿ ನಮ್ಮ ಪ್ರೊಫೆಷನ್​ ಬಗ್ಗೆ ಅವರಿಗೆ ಜ್ಞಾನ ಇಲ್ಲ’ ಎಂದು ದೀಪಿಕಾ ದಾಸ್​ ಹೇಳಿದ್ದಾರೆ.

ದೀಪಕ್​ ಅವರಿಗೆ ಚಿತ್ರರಂಗದಲ್ಲಿ ಕೆಲವು ಮಂದಿ ಸ್ನೇಹಿತರು ಇದ್ದಾರೆ. ‘ಮುಂದಿನ ದಿನಗಳಲ್ಲಿ ನಾವು ಅವರನ್ನು ನಮ್ಮ ದಾರಿಗೆ ಎಳೆದುಕೊಳ್ಳಬೇಕು ಎಂದುಕೊಂಡಿದ್ದೇವೆ. ಪ್ರೊಡಕ್ಷನ್​ ಮಾಡೋಣ ಎಂಬ ಆಲೋಚನೆ ಇದೆ. ಏನಾಗತ್ತೋ ನೋಡೋಣ. ನಿಮ್ಮೆಲ್ಲರ ಬೆಂಬಲ ಇರಲಿ’ ಎಂದು ದೀಪಿಕಾ ದಾಸ್​ ಹೇಳಿದ್ದಾರೆ. ಪತ್ನಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ‘ಮುಂದೆ ನೋಡೋಣ’ ಎಂದು ದೀಪಕ್​ ಅವರು ನಗು ಬೀರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ