‘ಅನಿಮಲ್’ ಸಿನಿಮಾಗೆ ತೃಪ್ತಿ ದಿಮ್ರಿ ಪಡೆದ ಸಂಭಾವನೆ ಎಷ್ಟು ಗೊತ್ತಾ?
ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಅವರು ಅತಿಥಿ ಪಾತ್ರ ಮಾಡಿದರು. ಹೀರೋಯಿನ್ಗಿಂತಲೂ ಹೆಚ್ಚು ಶೈನ್ ಆದ ಆ ಪಾತ್ರದಿಂದ ತೃಪ್ತಿ ಅವರ ಚಾರ್ಮ್ ಬದಲಾಗಿದೆ. ಈಗ ಅವರನ್ನು ಹುಡುಕಿಕೊಂಡು ದೊಡ್ಡ ದೊಡ್ಡ ಆಫರ್ಗಳು ಬರುತ್ತಿವೆ. ‘ಅನಿಮಲ್’ ಸಿನಿಮಾ ಗೆಲುವಿನ ಬಳಿಕ ತೃಪ್ತಿ ಅವರು ಸ್ಟಾರ್ ನಟಿಯಾಗಿದ್ದಾರೆ.
2023ರಲ್ಲಿ ಸೂಪರ್ ಹಿಟ್ ಆದ ‘ಅನಿಮಲ್’ (Animal) ಸಿನಿಮಾದಿಂದ ನಟಿ ತೃಪ್ತಿ ದಿಮ್ರಿ (Tripti Dimri) ಅವರು ಪಡೆದ ಜನಪ್ರಿಯತೆ ಅಷ್ಟಿಷ್ಟಲ್ಲ. ಆ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರೂ ಕೂಡ ಅವರಿಗಿಂತಲೂ ಹೆಚ್ಚು ಸುದ್ದಿ ಆಗಿದ್ದು ತೃಪ್ತಿ ದಿಮ್ರಿ. ಯಾಕೆಂದರೆ ಅವರು ಮಾಡಿದ ಪಾತ್ರ ಆ ರೀತಿ ಇತ್ತು. ಅದು ಅತಿಥಿ ಪಾತ್ರ ಆಗಿದ್ದರೂ ಕೂಡ ಸಿಕ್ಕಾಪಟ್ಟೆ ಟಾಕ್ ಸೃಷ್ಟಿ ಮಾಡಿತು. ಹಾಗಾದರೆ ತೃಪ್ತಿ ದಿಮ್ರಿ ಅವರು ‘ಅನಿಮಲ್’ ಸಿನಿಮಾದಲ್ಲಿ ನಟಿಸಲು ಪಡೆದ ಸಂಭಾವನೆ (Tripti Dimri Remuneration) ಎಷ್ಟು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ. ವರದಿಗಳ ಪ್ರಕಾರ, ತೃಪ್ತಿ ದಿಮ್ರಿ ಅವರು 40 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಮುಂತಾದವರು ನಟಿಸಿದರು. ತೃಪ್ತಿ ದಿಮ್ರಿ ಅವರ ಪಾತ್ರ ತುಂಬ ಹಾಟ್ ಆಗಿತ್ತು. ಅವರು ತೆರೆಮೇಲೆ ಕಾಣಿಸಿಕೊಳ್ಳುವುದು ಕೆಲವೇ ದೃಶ್ಯಗಳಲ್ಲಿ ಆದರೂ ಕೂಡ ಅವರ ಜನಪ್ರಿಯತೆ ಸಖತ್ ಹೆಚ್ಚಾಯಿತು. ಅವರ ಅಭಿಮಾನಿ ಬಳಗ ಕೂಡ ಹಿರಿದಾಗಿದೆ.
ಇದನ್ನೂ ಓದಿ: ‘ಅನಿಮಲ್’ ಸಿನಿಮಾದ ನಟಿ ತೃಪ್ತಿ ದಿಮ್ರಿ ಬಾಯ್ಫ್ರೆಂಡ್ ಫೋಟೋ ವೈರಲ್
ತೃಪ್ತಿ ದಿಮ್ರಿ ಅವರು ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ ಬಳಿಕ ಅವರ ಚಾರ್ಮ್ ಬದಲಾಗಿದೆ. ಬಾಲಿವುಡ್ನಲ್ಲಿ ಅನೇಕ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅವರಿಗೆ ಪಾತ್ರ ಸಿಗುತ್ತಿದೆ. ‘ಭೂಲ್ ಭುಲಯ್ಯ 3’, ‘ಆಶಿಕಿ 3’ ಮುಂತಾದ ಸಿನಿಮಾಗಳಿಗೆ ಅವರು ಆಯ್ಕೆ ಆಗಿದ್ದಾರೆ. ಅವರನ್ನು ಮತ್ತೆ ಮತ್ತೆ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಇದನ್ನೂ ಓದಿ: ‘ಅನಿಮಲ್’ ಸಿನಿಮಾದ ಸುಂದರಿ ತೃಪ್ತಿ ದಿಮ್ರಿಗೆ ಈಗ 30ರ ಪ್ರಾಯ
ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇರುವ ತೃಪ್ತಿ ದಿಮ್ರಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬುಲ್ ಬುಲ್’, ‘ಕಲಾ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದರೂ ಕೂಡ ಭಾರಿ ಫೇಮಸ್ ಆಗಿದ್ದು ‘ಅನಿಮಲ್’ ಸಿನಿಮಾದಿಂದ. ಈಗ ಇನ್ಸ್ಟಾಗ್ರಾಮ್ನಲ್ಲಿ ಅವರ ಫಾಲೋವರ್ಸ್ ಸಂಖ್ಯೆ 50 ಲಕ್ಷಕ್ಕೆ ಏರಿದೆ. ‘ಅನಿಮಲ್’ ಸಿನಿಮಾ ಮಾರ್ಚ್ 17ರಂದು ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಆಗಲಿದೆ. ‘ಸೋನಿ ಮ್ಯಾಕ್ಸ್’ ವಾಹಿನಿಯಲ್ಲಿ ಅಂದು ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ. ಆ ಬಳಿಕ ತೃಪ್ತಿ ದಿಮ್ರಿ ಅವರ ಫಾಲೋವರ್ಸ್ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.