AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯರೊಡನೆ ಮಲಗಲು ಪೀಡಿಸುತ್ತಿದ್ದ: ಪತಿಯ ಬಗ್ಗೆ ಶಾಕಿಂಗ್ ವಿಷಯ ಬಿಚ್ಚಿಟ್ಟ ಸ್ಟಾರ್ ನಟಿ

Karisma Kapoor: ಒಂದು ದಶಕದ ಕಾಲ ಬಾಲಿವುಡ್ ಅನ್ನು ಆಳಿದ್ದ ನಟಿ ಕರಿಷ್ಮಾ ಕಪೂರ್ ಮದುವೆಯ ಬಳಿಕ ನರಕ ನೋಡಿದ್ದರು. ತಮ್ಮ ಪತಿಯ ಕ್ರೂರ ವ್ಯಕ್ತಿತ್ವದ ಬಗ್ಗೆ ಹೀಗೆ ಹೇಳಿದ್ದರು ಕರಿಷ್ಮಾ.

ಗೆಳೆಯರೊಡನೆ ಮಲಗಲು ಪೀಡಿಸುತ್ತಿದ್ದ: ಪತಿಯ ಬಗ್ಗೆ ಶಾಕಿಂಗ್ ವಿಷಯ ಬಿಚ್ಚಿಟ್ಟ ಸ್ಟಾರ್ ನಟಿ
ಮಂಜುನಾಥ ಸಿ.
|

Updated on: Mar 13, 2024 | 5:48 PM

Share

ಬಾಲಿವುಡ್ (Bollywood)​ ಕಟ್ಟಿದ ಕುಟುಂಬವೆಂದರೆ ಅದು ಕಪೂರ್ ಕುಟುಂಬ. ಕಪೂರ್ ಕುಟುಂಬದ ಮೂರನೇ ತಲೆಮಾರು ಈಗ ಬಾಲಿವುಡ್ ಅನ್ನು ಆಳುತ್ತಿದೆ. ಕಪೂರ್ ಕುಟುಂಬ ಬಾಲಿವುಡ್​ನ ಅತ್ಯಂತ ಐಶಾರಾಮಿ, ಶ್ರೀಮಂತ ಕುಟುಂಬವೂ ಸಹ ಹೌದು. ಈ ಕುಟುಂಬದಲ್ಲಿ ಹಲವು ಸ್ಟಾರ್ ನಟ, ನಟಿಯರಿದ್ದಾರೆ. ಇವರ ಸಿನಿಮಾಗಳ ಜೊತೆಗೆ ಖಾಸಗಿ ಜೀವನದ ಬಗ್ಗೆಯೂ ಆಗಾಗ್ಗೆ ಸದ್ದು, ಸುದ್ದಿಗಳು ಆಗುತ್ತಿರುತ್ತವೆ. ಇದೇ ಕುಟುಂಬಕ್ಕೆ ಸೇರಿದ, 90-2000 ಸಮಯದಲ್ಲಿ ಬಾಲಿವುಡ್ ಅನ್ನು ಆಳಿದ ಕರಿಷ್ಮಾ ಕಪೂರ್ ಚಿತ್ರರಂಗದಿಂದ ಬಹುತೇಕ ದೂರಾಗಿದ್ದರು, ಇದೀಗ ಬಾಲಿವುಡ್​ಗೆ ಮರಳಿದ್ದಾರೆ. ನಟಿಯಾಗಿದ್ದಾಗ ಚಿನ್ನದಂಥಹಾ ದಿನಗಳನ್ನು ಕಂಡಿದ್ದ ಕರಿಷ್ಮಾ ಕಪೂರ್, ಮದುವೆಯಾದ ಬಳಿಕ ನರಕವನ್ನೇ ನೋಡಿದ್ದರು. ತಮ್ಮ ದಾಂಪತ್ಯದ ಬಗ್ಗೆ ಕರಿಷ್ಮಾ ಹಿಂದೊಮ್ಮೆ ಮಾತನಾಡಿದ್ದರು.

ಕರೀಷ್ಮಾ ಕಪೂರ್, ಸಂಜಯ್ ಕಪೂರ್ ಎಂಬುವರನ್ನು 2003 ರಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಿಗೆ ಸಂಜಯ್​ನ ವ್ಯಕ್ತಿತ್ವದ ಪರಿಚಯ ಕರಿಷ್ಮಾಗೆ ಆಗಿಬಿಟ್ಟಿತು. ಕರಿಷ್ಮಾ ಹೇಳಿಕೊಂಡಿರುವಂತೆ ಅವರ ಪತಿ ಸಂಜಯ್ ಕಪೂರ್, ಕರೀಷ್ಮಾರನ್ನು ತಮ್ಮ ಗೆಳೆಯರೊಟ್ಟಿಗೆ ಮಲಗುವಂತೆ ಪೀಡಿಸುತ್ತಿದ್ದರಂತೆ. ಕರೀನಾರನ್ನು ತನ್ನ ಗೆಳೆಯರಿಗೆ ಹರಾಜು ಹಾಕಿದ್ದರಂತೆ ಸಂಜಯ್ ಕಪೂರ್. ಕರಿಷ್ಮಾ ವಿರೋಧಿಸಿದಾಗ ಅವರ ಮೇಲೆ ಹಲ್ಲೆ ಸಹ ಮಾಡುತ್ತಿದ್ದರಂತೆ.

ಇದನ್ನೂ ಓದಿ:ಸೋನಂ ಕಪೂರ್ ಧರಿಸಿರುವ ಈ ತಿಳಿ ಹಸಿರು ಬಣ್ಣದ ಉಡುಗೆಯ ಬೆಲೆ ಎಷ್ಟು ಲಕ್ಷ?

ಕರೀಷ್ಮಾ ಕಪೂರ್, ಗರ್ಭಿಣಿ ಆಗಿದ್ದಾಗ ಅವರ ಅತ್ತೆ, ಕರಿಷ್ಮಾಗೆ ಬಟ್ಟೆಯೊಂದನ್ನು ನೀಡಿದ್ದರಂತೆ. ಆದರೆ ಆ ಬಟ್ಟೆ ಚಿಕ್ಕದಾದ ಕಾರಣ ಧರಿಸಲು ಆಗಿರಲಿಲ್ಲವಂತೆ, ಅದಕ್ಕೆ ಜಗಳ ಮಾಡಿದ್ದ ಸಂಜಯ್, ತಾಯಿಯ ಮೂಲಕ ಕರಿಷ್ಮಾಗೆ ಹೊಡೆಸಿದ್ದರಂತೆ. ಈ ಬಗ್ಗೆ ತಾವು ಮುಂಬೈ ಪೊಲೀಸರಿಗೆ ದೂರು ಸಹ ನೀಡಿದ್ದಾಗಿ ಕರಿಷ್ಮಾ ಕಪೂರ್ ಹೇಳಿಕೊಂಡಿದ್ದಾರೆ. ಕರಿಷ್ಮಾ, ತಮ್ಮ ವಿಚ್ಛೇಧನ ಅರ್ಜಿಯಲ್ಲಿಯೂ ಸಹ ಈ ಎಲ್ಲ ಅಂಶಗಳನ್ನು ನಮೂದಿಸಿದ್ದಾರೆ. ಕರಿಷ್ಮಾರಿಂದ ದೂರು ಸ್ವೀಕರಿಸಿದ್ದ ಪೊಲೀಸ್ ಅಧಿಕಾರಿಯೂ ಸಹ ನ್ಯಾಯಾಲಯದಲ್ಲಿ ಸಂಜಯ್ ವಿರುದ್ಧ ಹೇಳಿಕೆ ದಾಖಲಿಸಿದ್ದರು.

ಕರೀನಾ ಕಪೂರ್ ಹಾಗೂ ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿದ್ದರು. ಇಬ್ಬರಿಗೂ ನಿಶ್ಚಿತಾರ್ಥ ಸಹ ನಡೆದಿತ್ತು. ಆದರೆ ಆ ಬಳಿಕ ನಿಶ್ಚಿತಾರ್ಥ ಮುರಿದು ಬಿತ್ತು. ಬಳಿಕ 2003 ರಲ್ಲಿ ಕರಿಷ್ಮಾ, ಸಂಜಯ್ ಜೊತೆ ವಿವಾಹವಾದರು. 2014ರಲ್ಲಿ ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರಿಗೂ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ವಿಚ್ಛೇದನದ ಬಳಿಕ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಕರಿಷ್ಮಾ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ರಿಯಾಲಿಟಿ ಶೋಗಳ ಭಾಗವೂ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ