AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ರಾತ್ರಿ 10 ಗಂಟೆ ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ವಿವರಿಸಿದ ತಾಪ್ಸಿ ಪನ್ನು

ಜಾಮ್​ನಗರದಲ್ಲಿ ನಡೆದ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲೂ ಅವರು ಭಾಗಿ ಆಗಿರಲಿಲ್ಲ. ಬರ್ತ್​ಡೇ ಪಾರ್ಟಿಗಳಿದ್ದರೆ ಅದರಿಂದ ದೂರವೇ ಇರುತ್ತಾರೆ. ಹೀಗೇಕೆ ಎನ್ನುವ ಪ್ರಶ್ನೆಗೆ ಅವರು ಇತ್ತೀಚೆಗೆ ಉತ್ತರ ನೀಡಿದ್ದಾರೆ. ‘ನಾನು ಸಿಗರೇಟ್ ಸೇದುವುದಿಲ್ಲ. ಹೀಗಾಗಿ ಪಾರ್ಟಿಗಳಲ್ಲಿ ಇದ್ದು ಏನು ಮಾಡಬೇಕು ಎಂಬುದು ನನಗೆ ಗೊತ್ತಿಲ್ಲ’ ಎಂದಿದ್ದಾರೆ ಅವರು.

ಬಾಲಿವುಡ್​ನಲ್ಲಿ ರಾತ್ರಿ 10 ಗಂಟೆ ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ವಿವರಿಸಿದ ತಾಪ್ಸಿ ಪನ್ನು
ತಾಪ್ಸೀ
ರಾಜೇಶ್ ದುಗ್ಗುಮನೆ
|

Updated on: Mar 12, 2024 | 8:46 AM

Share

ನಟಿ ತಾಪ್ಸಿ ಪನ್ನು (Tapsee Pannu) ಅವರು ಯಾವುದೇ ವಿಚಾರ ಇದ್ದರೂ ನೇರ ಮಾತುಗಳಲ್ಲಿ ಹೇಳುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ತಾಪ್ಸಿ ಪನ್ನು ಅವರು ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಜಾಮ್​ನಗರದಲ್ಲಿ ನಡೆದ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲೂ ಅವರು ಭಾಗಿ ಆಗಿರಲಿಲ್ಲ. ಬರ್ತ್​ಡೇ ಪಾರ್ಟಿಗಳಿದ್ದರೆ ಅದರಿಂದ ದೂರವೇ ಇರುತ್ತಾರೆ. ಹೀಗೇಕೆ ಎನ್ನುವ ಪ್ರಶ್ನೆಗೆ ಅವರು ಇತ್ತೀಚೆಗೆ ಉತ್ತರ ನೀಡಿದ್ದಾರೆ.

‘ದೊಡ್ಡ ದೊಡ್ಡ ಸ್ಟಾರ್​ಗಳಿಗೆ ಮೆಸೇಜ್ ಮಾಡುವಂತೆ ನನಗೆ ಕೆಲವರು ಹೇಳಿದ್ದರು. ಹಾಗೆ ಮಾಡಿದರೆ ನನ್ನನ್ನು ಅವರು ಬರ್ತ್​ಡೇ ಪಾರ್ಟಿಗಳಿಗೆ ಆಹ್ವಾನಿಸುತ್ತಾರೆ. ನಾನು ಆ ರೀತಿ ಮಾಡಿಲ್ಲ. ನಾನು ಮುಂಜಾನೆ ಬೇಗ ಏಳುತ್ತೇನೆ, ಹೀಗಾಗಿ ನಾನು ಬೇಗ ಮಲಗಲೇಬೇಕಾದ ಅನಿವಾರ್ಯತೆ ಇದೆ. ನಾನು ಸಿಗರೇಟ್ ಸೇದುವುದಿಲ್ಲ. ಹೀಗಾಗಿ ಪಾರ್ಟಿಗಳಲ್ಲಿ ಇದ್ದು ಏನು ಮಾಡಬೇಕು ಎಂಬುದು ನನಗೆ ಗೊತ್ತಿಲ್ಲ’ ಎಂದಿದ್ದಾರೆ ಅವರು.

‘ನನಗೆ ಅಷ್ಟಾಗಿ ಪರಿಚಯ ಇಲ್ಲದವರ ಜೊತೆ ನಾನು ಪಾರ್ಟಿ ಮಾಡಲು ಸಾಧ್ಯವಿಲ್ಲ. ಅವರ ಜೊತೆ ನಾನು ಏನು ಮಾತನಾಡಲಿ? ನಾನು ಪಾರ್ಟಿ ಮಾಡದಿದ್ದರೆ ನನಗೆ ಯಾವುದೇ ಕೆಲಸ ಸಿಗುವುದಿಲ್ಲ ಎಂದು ಅರ್ಥವಲ್ಲ’ ಎಂದು ಅವರು ಹೇಳಿದ್ದಾರೆ.

‘ಈ ರೀತಿ ಪಾರ್ಟಿಗಳನ್ನು ಮಾಡಿದರೆ ಬಾಲಿವುಡ್​​ನಲ್ಲಿ ಸುಲಭವಾಗಿ ಮುನ್ನುಗ್ಗಬಹುದು. ಆದರೆ, 10 ಗಂಟೆ ಮೇಲೆ ಪಾರ್ಟಿ ಮಾಡೋದು ನನಗೆ ಭಾರ ಎನಿಸುತ್ತದೆ. ಅದು ನಾನಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಅವರು. ಈ ಮೂಲಕ ಅವರು ಹಾರ್ಡ್ ವರ್ಕ್ ಮಾಡಿ ಇಲ್ಲಿಯವರೆಗೆ ಬಂದಿರುವುದಾಗಿ ಹೇಳಿದ್ದಾರೆ.

‘ದೀಪಿಕಾ ಪಡುಕೋಣೆಯನ್ನು ವಿವಾದಗಳನ್ನು ಎದುರಿಸಿದ್ದಾರೆ. ಇದರ ಜೊತೆ ಅದನ್ನು ಸೊಗಸಾಗಿ ನಿಭಾಯಿಸುತ್ತಾರೆ. ಆಲಿಯಾ ಭಟ್‌ಗೆ ಸುಲಭದಲ್ಲಿ ಅವಕಾಶ ಸಿಕ್ಕಿದೆ ಎಂದು ಎಲ್ಲರೂ ಹೇಳಬಹುದು. ಈ ರೀತಿಯ ಅವಕಾಶಗಳನ್ನು ಅವರು ಬಳಸಿಕೊಂಡಿದ್ದಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ವೈಯಕ್ತಿಕ ವಿಚಾರಕ್ಕೆ ಸ್ಪಷ್ಟನೆ ನೀಡಲ್ಲ’; ಮದುವೆ ಗಾಸಿಪ್​ಗೆ ಉತ್ತರಿಸಿದ ತಾಪ್ಸಿ

ತಾಪ್ಸಿ ಪನ್ನು ಈ ತಿಂಗಳಲ್ಲಿ ಮಥಾಯಸ್​ ಬೋ ಅವರನ್ನು ಮದುವೆ ಆಗಲಿದ್ದಾರೆ ಎಂದು ವರದಿ ಆಗಿತ್ತು. ಅಷ್ಟೇ ಅಲ್ಲ, ಸಿಖ್ ಹಾಗೂ ಕ್ರೈಸ್ತ ಸಮುದಾಯದ ಸಂಪ್ರದಾಯದಂತೆ ಈ ವಿವಾಹ ನೆರವೇರಲಿದೆ ಎಂದು ವರದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್