‘ಅವು ಮುಗಿದು ಹೋದ ದಿನಗಳು, ಆ ಬಗ್ಗೆ ಯೋಚಿಸಲ್ಲ’; ನೇರ ಮಾತಲ್ಲಿ ಹೇಳಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಲ್ಮಾನ್ ನಿಮಾಗಳು ಭರ್ಜರಿ ಬಿಸ್ನೆಸ್ ಮಾಡುತ್ತವೆ. ಅವರನ್ನು ಎದುರು ಹಾಕಿಕೊಂಡು ಇಂಡಸ್ಟ್ರಿಯಲ್ಲಿ ಮುಂದುವರಿಯೋದು ಅಷ್ಟು ಸುಲಭವಿಲ್ಲ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಈ ಮೊದಲು ಸಿನಿಮಾ ಜೊತೆ ಕ್ರಿಕೆಟ್ ಕೂಡ ಆಡುತ್ತಿದ್ದರು. ಆದರೆ, ಈಗ ಅವರು ಕ್ರಿಕೆಟ್ ಆಡುವುದರಿಂದ ದೂರವೇ ಇದ್ದಾರೆ. ಸದ್ಯ ಅವರು ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ನಲ್ಲಿ ಸಹೋದರ ಸೋಹೈಲ್ ಖಾನ್ ತಂಡ ‘ಮುಂಬೈ ಹೀರೋಸ್’ನ ಬೆಂಬಲಿಸುತ್ತಿದ್ದಾರೆ. ಈಗ ಸಲ್ಮಾನ್ ಮತ್ತೆ ಕ್ರಿಕೆಟ್ ಆಡುವ ವಿಚಾರದ ಕುರಿತು ಮಾತನಾಡಿದ್ದಾರೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕಳೆದ ತಿಂಗಳು ದುಬೈನಲ್ಲಿ ಆರಂಭ ಆಗಿದೆ. ಹೈದರಾಬಾದ್ನಲ್ಲಿ ಸದ್ಯ ಮ್ಯಾಚ್ಗಳು ನಡೆಯುತ್ತಿವೆ. ಕನ್ನಡ, ಹಿಂದಿ, ತಮಿಳು ಮೊದಲಾದ ಚಿತ್ರರಂಗದ ಕಲಾವಿದರು ಆಟ ಆಡುತ್ತಿದ್ದಾರೆ. ಕನ್ನಡದ ‘ಕರ್ನಾಟಕ ಬುಲ್ಡೋಜರ್ಸ್’ ಉತ್ತಮ ಪ್ರದರ್ಶನ ನೀಡುತ್ತಿದೆ. ಸಲ್ಮಾನ್ ಖಾನ್ ಅವರು ಕ್ರಿಕೆಟ್ ಆಡುವುದರಿಂದ ದೂರವೇ ಇದ್ದಾರೆ. ಹೀಗೇಕೆ ಎಂಬ ಬಗ್ಗೆ ಅವರು ಮಾತನಾಡಿದ್ದಾರೆ. ‘ಕ್ರಿಕೆಟ್ ಆಡುವ ದಿನಗಳು ಮುಗಿದು ಹೋಗಿವೆ. ನಾನು ಕ್ರಿಕೆಟ್ ಆಡುತ್ತಿದ್ದೇ ಹೌದಾದರೆ ಕಾಮೆಂಟರಿ ಕೂಡ ಮಾಡುತ್ತಿರಲಿಲ್ಲ. ಆ ವಯಸ್ಸು ಕೂಡ ಮುಗಿದಿದೆ. ನಿಮ್ಮ ಆಶೀರ್ವಾದದಿಂದ ಸಿನಿಮಾ ರಂಗದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಅಭಿಮಾನಿಗಳಿಗೆ ಧನ್ಯವಾದ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಕತ್ರಿನಾ ಮೇಲಿರೋ ಪ್ರೀತಿ ಎಂಥದ್ದು? ಈ ಘಟನೆಯೇ ಸಾಕ್ಷಿ
ಸಲ್ಮಾನ್ ಖಾನ್ ಅವರು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಸಿನಿಮಾಗಳು ಭರ್ಜರಿ ಬಿಸ್ನೆಸ್ ಮಾಡುತ್ತವೆ. ಅವರನ್ನು ಎದುರು ಹಾಕಿಕೊಂಡು ಇಂಡಸ್ಟ್ರಿಯಲ್ಲಿ ಮುಂದುವರಿಯೋದು ಅಷ್ಟು ಸುಲಭವಿಲ್ಲ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಆದರೆ, ಸಿನಿಮಾ ದೊಡ್ಡಮಟ್ಟದಲ್ಲಿ ಕಮಾಯಿ ಮಾಡಿಲ್ಲ.
ಇದನ್ನೂ ಓದಿ: ಸಲ್ಮಾನ್ ಖಾನ್ ದಿನದ ಸಂಪಾದನೆ ಕೋಟಿ ಕೋಟಿ; ಇದರಲ್ಲಿ ದಾನ ಮಾಡೋದು ಎಷ್ಟು?
ಸಲ್ಮಾನ್ ಖಾನ್ ಅವರ ಕೈಯಲ್ಲಿ ಕೆಲವು ಸಿನಿಮಾಗಳಿವೆ. ಅವರು ಮುಂದಿನ ವರ್ಷ ‘ಶೇರ್ ಖಾನ್’ ಸಿನಿಮಾ ಮಾಡಲಿದ್ದಾರಂತೆ. ‘ಟೈಗರ್ vs ಪಠಾಣ್’ ಚಿತ್ರದ ಸ್ಕ್ರಿಪ್ಟ್ ಕೆಲಸ ಕೂಡ ನಡೆಯುತ್ತಿದೆ. 2027ರಲ್ಲಿ ಈ ಚಿತ್ರ ರಿಲೀಸ್ ಆಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ