ಏರುತ್ತಲೇ ಇದೆ ‘ಶೈತಾನ್’ ಕಲೆಕ್ಷನ್; 50 ಕೋಟಿ ರೂ. ದಾಟಿದ ಅಜಯ್ ದೇವಗನ್ ಸಿನಿಮಾ
‘ಶೈತಾನ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ನಿಂದ ಹಿಂದಿ ಚಿತ್ರರಂಗದಲ್ಲಿ ಹೊಸ ಚೈತನ್ಯ ಮೂಡಿದೆ. ಹಾರರ್ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರು ‘ಶೈತಾನ್’ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಅಜಯ್ ದೇವಗನ್, ಆರ್. ಮಾಧವನ್ ಅವರು ಈ ಸಿನಿಮಾದಲ್ಲಿ ಮುಖಾಮುಖಿ ಆಗಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.
ಸೂಪರ್ ನ್ಯಾಚುರಲ್ ಕಹಾನಿ ಇರುವ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ಶೈತಾನ್’ ಸಿನಿಮಾ (Shaitan Movie) ಹೇಳಿ ಮಾಡಿಸಿದಂತಿದೆ. ವಶೀಕರಣದ ಕಥೆ ಈ ಸಿನಿಮಾದಲ್ಲಿದೆ. ಮಾರ್ಚ್ 8ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ಮೂರು ದಿನಕ್ಕೆ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ದಿನದಿಂದ ದಿನಕ್ಕೆ ‘ಶೈತಾನ್’ ಕಲೆಕ್ಷನ್ (Shaitan Box Office Collection) ಏರಿಕೆ ಆಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅಜಯ್ ದೇವಗನ್ (Ajay Devgn), ಜ್ಯೋತಿಕಾ, ಜಾನಕಿ ಬೋಡಿವಾಲಾ, ಆರ್. ಮಾಧವನ್ ಮುಂತಾದವರು ‘ಶೈತಾನ್’ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.
ವಶೀಕರಣಕ್ಕೆ ಒಳಗಾದ ಮಗಳನ್ನು ಕಾಪಾಡಿಕೊಳ್ಳಲು ಕಷ್ಟಪಡುವ ತಂದೆ-ತಾಯಿಯ ಕಥೆಯನ್ನು ‘ಶೈತಾನ್’ ಸಿನಿಮಾದಲ್ಲಿ ತೋರಿಸಲಾಗಿದೆ. ಆರ್. ಮಾಧವನ್ ಅವರು ಈ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಅಜಯ್ ದೇವಗನ್ ಹಾಗೂ ಜ್ಯೋತಿಕಾ ಅವರು ಗಂಡ-ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಪುತ್ರಿಯ ಪಾತ್ರದಲ್ಲಿ ಜಾನಕಿ ಬೋಡಿವಾಲಾ ನಟಿಸಿದ್ದು, ಈ ಸಿನಿಮಾದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ವಿಕಾಸ್ ಬಹ್ಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಮಿತ್ ತ್ರಿವೇದಿ ಅವರು ಸಂಗೀತ ನೀಡಿದ್ದಾರೆ.
The audience has spoken loud and clear: #Shaitaan wins HEARTS, conquers BOXOFFICE… A ₹ 55 cr+ *opening weekend* for a supernatural-thriller is an eye-opener and case study for those who undermine this genre… Fri 15.21 cr, Sat 19.18 cr, Sun 20.74 cr. Total: ₹ 55.13 cr. #India… pic.twitter.com/MZBlMzgfVo
— taran adarsh (@taran_adarsh) March 11, 2024
ಮೊದಲ ಸಿನಿಮಾ ‘ಶೈತಾನ್’ ಸಿನಿಮಾಗೆ 15.21 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಉತ್ತಮ ವಿಮರ್ಶೆ ನೀಡಿದರು. ಇದರಿಂದ ಎರಡನೇ ದಿನ ಸಿನಿಮಾದ ಕಲೆಕ್ಷನ್ ಹೆಚ್ಚಿತು. 2ನೇ ದಿನವಾದ ಮಾರ್ಚ್ 9ರಂದು ಈ ಸಿನಿಮಾ 19.18 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ ಕೂಡ ಕಲೆಕ್ಷನ್ನಲ್ಲಿ ಏರಿಕೆ ಆಗಿದೆ. ಭಾನುವಾರ (ಮಾರ್ಚ್ 10) ‘ಶೈತಾನ್’ ಚಿತ್ರ 20.74 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಿಂದ ಚಿತ್ರದ ಟೋಟಲ್ ಕಲೆಕ್ಷನ್ 55.13 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: Shaitaan Twitter Review: ಯುವತಿಯ ವಶೀಕರಣದ ಕಥೆ ಇರುವ ‘ಶೈತಾನ್’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟರ್ ವಿಮರ್ಶೆ
ಅನೇಕ ಕಡೆಗಳಲ್ಲಿ ‘ಶೈತಾನ್’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಸೋಮವಾರದ ಕಲೆಕ್ಷನ್ ಎಷ್ಟಾಗಿದೆ ಎಂಬುದರ ಆಧಾರದ ಮೇಲೆ ಮುಂದಿನ ದಿನಗಳ ಭವಿಷ್ಯ ನಿರ್ಧಾರ ಆಗಲಿದೆ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದರಿಂದ ಉತ್ತಮ ಕಲೆಕ್ಷನ್ ಆಗಲು ಸಹಕಾರಿ ಆಯಿತು. ಇದು ಗುಜರಾತಿ ಭಾಷೆಯ ‘ವಶ್’ ಸಿನಿಮಾದ ಹಿಂದಿ ರಿಮೇಕ್. ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಕ್ಲೈಮ್ಯಾಕ್ಸ್ ನೋಡಿದ ಪ್ರೇಕ್ಷಕರು ವಾವ್ ಎನ್ನುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬಾಕ್ಸ್ ಆಫೀಸ್ನಲ್ಲಿ ‘ಶೈತಾನ್’ ಆಬ್ಬರಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.