Shaitaan Twitter Review: ಯುವತಿಯ ವಶೀಕರಣದ ಕಥೆ ಇರುವ ‘ಶೈತಾನ್​’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟರ್​ ವಿಮರ್ಶೆ

ಹಾರರ್​ ಕಥಾಹಂದರ ಹೊಂದಿರುವ ‘ಶೈತಾನ್​’ ಸಿನಿಮಾದಲ್ಲಿ ಆರ್​. ಮಾಧವನ್​ ಒಂದು ಡಿಫರೆಂಟ್​ ಪಾತ್ರ ಮಾಡಿದ್ದಾರೆ. ಅಜಯ್​ ದೇವಗನ್​, ಜ್ಯೋತಿಕಾ ಅವರ ನಟನೆಯೂ ಮೆಚ್ಚುಗೆ ಆಗುತ್ತಿದೆ. ಸಿನಿಮಾದ ಕೇಂದ್ರವಾಗಿರುವ ಪಾತ್ರದಲ್ಲಿ ಜಾನಕಿ ಬೋಡಿವಾಲಾ ಅಭಿನಯಿಸಿದ್ದಾರೆ. ಮೊದಲ ದಿನ ‘ಶೈತಾನ್​’ ನೋಡಿದ ಪ್ರೇಕ್ಷಕರು ‘ಎಕ್ಸ್​’ (ಟ್ವಿಟರ್​) ಮೂಲಕ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

Shaitaan Twitter Review: ಯುವತಿಯ ವಶೀಕರಣದ ಕಥೆ ಇರುವ ‘ಶೈತಾನ್​’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟರ್​ ವಿಮರ್ಶೆ
ಶೈತಾನ್​ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Mar 08, 2024 | 4:06 PM

ಟ್ರೇಲರ್​ ಮೂಲಕ ಭಾರಿ ಕ್ರೇಜ್​ ಸೃಷ್ಟಿಸಿದ್ದ ‘ಶೈತಾನ್​’ ಸಿನಿಮಾ (Shaitaan) ಒಂದು (ಮಾರ್ಚ್​ 8) ಬಿಡುಗಡೆ ಆಗಿದೆ. ಅಜಯ್​ ದೇವಗನ್​ (Ajay Devgn), ಜ್ಯೋತಿಕಾ, ಜಾನಕಿ ಬೋಡಿವಾಲಾ, ಆರ್​. ಮಾಧವನ್​ ಮುಂತಾದವರು ನಟಿಸಿದ ಈ ಸಿನಿಮಾಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾರರ್​ ಕಥಾಹಂದರ ಈ ಸಿನಿಮಾದಲ್ಲಿ ವಶೀಕರಣದ ಬಗ್ಗೆ ತೋರಿಸಲಾಗಿದೆ. ಒಂದು ಡಿಫರೆಂಟ್​ ಪಾತ್ರದಲ್ಲಿ ಆರ್​. ಮಾಧವನ್​ (R. Madhavan) ನಟಿಸಿದ್ದಾರೆ. ‘ಶೈತಾನ್​’ ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ.

ವಿಕಾಸ್​ ಬಹ್ಲ್​ ಅವರು ‘ಶೈತಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಇದು ಗುಜರಾತಿ ಭಾಷೆಯ ‘ವಶ್​’ ಚಿತ್ರದ ಹಿಂದಿ ರಿಮೇಕ್​. ಇದು ರಿಮೇಕ್​ ಆಗಿದ್ದರೂ ಕೂಡ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಕಲಾವಿದರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಟ್ವಿಟರ್​ನಲ್ಲಿ ವಿಮರ್ಶೆ ಹಂಚಿಕೊಂಡವರು ಪಾಸಿಟಿವ್​ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಸಿನಿಮಾದ ಕಲೆಕ್ಷನ್​ ಹೆಚ್ಚಲು ಅನುಕೂಲ ಆಗಲಿದೆ.

ಇದನ್ನೂ ಓದಿ: Karataka Damanaka review: ಹುಟ್ಟಿದೂರಿನ ಮಹತ್ವ ಸಾರುವ ಸಿನಿಮಾದಲ್ಲಿ ಏನಿದೆ? ಏನಿಲ್ಲ?

‘ಈ ಸಿನಿಮಾದಲ್ಲಿ ಊಹಿಸಲಾಗದ ಟ್ವಿಸ್ಟ್​ಗಳು ಇವೆ. ಡ್ರಾಮಾ, ಥ್ರಿಲ್​ ಎಲ್ಲವೂ ಈ ಚಿತ್ರದಲ್ಲಿದೆ. ಬಹುತೇಕ ಕಥೆ ಒಂದೇ ಲೊಕೇಷನ್​ನಲ್ಲಿ ನಡೆದರೂ ಕೂಡ ಚಿತ್ರಕಥೆ ಬಿಗಿಯಾಗಿದೆ. ವಿಲನ್​ ಪಾತ್ರದಲ್ಲಿ ಆರ್​. ಮಾಧವನ್ ಚೆನ್ನಾಗಿ ನಟಿಸಿದ್ದಾರೆ’ ಎಂದು ನೆಟ್ಟಿಗರೊಬ್ಬರು ಎಕ್ಸ್​ ಖಾತೆಯಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಹಾರರ್​ ಇಷ್ಟಪಡುವ ಪ್ರೇಕ್ಷಕರಿಗೆ ‘ಶೈತಾನ್​’ ಸಿನಿಮಾ ಹೇಳಿಮಾಡಿಸಿದಂತಿದೆ.

‘ಶೈತಾನ್​ ಸಿನಿಮಾದ ಕಥೆ ಇಂಟರೆಸ್ಟಿಂಗ್​ ಆಗಿದೆ. ಆರ್. ಮಾಧವನ್​ ಅವರ ನಟನೆಯ ಬ್ರಿಲಿಯಂಟ್​ ಆಗಿದೆ. ಜ್ಯೋತಿಕಾ ಮತ್ತು ಅಜಯ್​ ದೇವಗನ್​ ಅವರು ಅಸಹಾಯಕ ಪಾಲಕರಾಗಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಚಿತ್ರಮಂದಿರದಲ್ಲಿ ಸಂಪೂರ್ಣ ಮನರಂಜನೆ ನೀಡುವ ಸಿನಿಮಾ ಇದು’ ಎಂದು ಪ್ರೇಕ್ಷಕರೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಹಲವು ಮಂದಿ ಹೊಗಳಿದಿದ್ದಾರೆ.

ವಶೀಕರಣಕ್ಕೆ ಒಳಗಾದ ಯುವತಿಯ ಪಾತ್ರದಲ್ಲಿ ಜಾನಕಿ ಬೋಡಿವಾಲಾ ಅವರು ನಟಿಸಿದ್ದಾರೆ. ಇಡೀ ಕಥೆಯಲ್ಲಿ ಅವರ ಪಾತ್ರವೇ ಜೀವಾಳವಾಗಿದೆ. ಸಿನಿಮಾ ನೋಡಿದ ಎಲ್ಲರೂ ಜಾನಕಿ ಅವರ ಅಭಿನಯವನ್ನು ಕೊಂಡಾಡುತ್ತಿದ್ದಾರೆ. ‘ಅವರ ನಟನೆ ನೋಡಿದ ಬಳಿಕ ನಿಮಗೆ ಖಂಡಿತಾ ಖುಷಿಯಾಗುತ್ತದೆ’ ಎಂದು ಪ್ರೇಕ್ಷಕರು ಶ್ಲಾಘಿಸಿದ್ದಾರೆ. ಮೊದಲ ದಿನದ ಕಲೆಕ್ಷನ್​ ಎಷ್ಟಾಗಲಿದೆ ಎಂದು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.