ಸಲ್ಮಾನ್ ಖಾನ್ ದಿನದ ಸಂಪಾದನೆ ಕೋಟಿ ಕೋಟಿ; ಇದರಲ್ಲಿ ದಾನ ಮಾಡೋದು ಎಷ್ಟು?
ನಟ, ಸಲ್ಮಾನ್ ಖಾನ್ ಆಪ್ತ ವಿಂದು ದಾರಾ ಸಿಂಗ್ ‘ಟೈಗರ್ 3’ ನಟನನ್ನು ಹೊಗಳಿದ್ದಾರೆ. ಇದಲ್ಲದೇ ಸಲ್ಮಾನ್ ಖಾನ್ ಸಂಪತ್ತು ಕೂಡ ಬಯಲಾಗಿದೆ. ವಿಂದು ಬಹಿರಂಗಪಡಿಸಿರುವ ವಿಚಾರ ಅನೇಕ ಜನರಿಗೆ ತಿಳಿದಿಲ್ಲ. ವಿಂದು ಹಾಗೂ ಸಲ್ಮಾನ್ ಖಾನ್ ನಡುವೆ ಆಪ್ತತೆ ಇದೆ.

ನಟ ಸಲ್ಮಾನ್ ಖಾನ್ (Salman Khan) ಅವರನ್ನು ಇಂದು ಪರಿಚಯಿಸುವ ಅಗತ್ಯವಿಲ್ಲ. ಅವರ ಹೆಸರು ಎಲ್ಲರಿಗೂ ಗೊತ್ತಿದೆ. ಸಲ್ಮಾನ್ ಖಾನ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಹಲವು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ದಿನಕ್ಕೆ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುವ ಸಲ್ಮಾನ್ ಖಾನ್ ಅನೇಕರ ಸಹಾಯಕ್ಕೆ ನಿಲ್ಲುತ್ತಾರೆ. ಅಗತ್ಯ ಬಿದ್ದಾಗ ಸಲ್ಮಾನ್ ಅಭಿಮಾನಿಗಳಿಗಾಗಿ ಧಾವಿಸುತ್ತಾರೆ. ಈ ವಿಚಾರದಲ್ಲಿ ಅನೇಕ ಸೆಲೆಬ್ರಿಟಿಗಳು ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ. ಸಲ್ಮಾನ್ ಖಾನ್ ದಾನದ ವಿಚಾರವನ್ನು ಎಲ್ಲಿಯೂ ಹೇಳಿಲ್ಲ.
ನಟ, ಸಲ್ಮಾನ್ ಖಾನ್ ಆಪ್ತ ವಿಂದು ದಾರಾ ಸಿಂಗ್ ‘ಟೈಗರ್ 3’ ನಟನನ್ನು ಹೊಗಳಿದ್ದಾರೆ. ಇದಲ್ಲದೇ ಸಲ್ಮಾನ್ ಖಾನ್ ಸಂಪತ್ತು ಕೂಡ ಬಯಲಾಗಿದೆ. ವಿಂದು ಬಹಿರಂಗಪಡಿಸಿರುವ ವಿಚಾರ ಅನೇಕ ಜನರಿಗೆ ತಿಳಿದಿಲ್ಲ. ವಿಂದು ಹಾಗೂ ಸಲ್ಮಾನ್ ಖಾನ್ ನಡುವೆ ಆಪ್ತತೆ ಇದೆ.
ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ ವಿಂದು, ‘ಸಲೀಂ ಅಂಕಲ್ ಸಲ್ಮಾನ್ಗೆ ಪ್ರತಿದಿನ 50 ಸಾವಿರ ಅಥವಾ 1 ಲಕ್ಷ ರೂಪಾಯಿಗಳನ್ನು ಪಾಕೆಟ್ ಮನಿ ಆಗಿ ನೀಡುತ್ತಿದ್ದರು. ಇದನ್ನು ಅವರು ಖರ್ಚು ಮಾಡದೆ ಅದನ್ನು ಒಳ್ಳೆಯ ಕೆಲಸಕ್ಕೆ ಬಳಸುತ್ತಿದ್ದರು. ಸಲ್ಮಾನ್ ತಂದೆ ಕೊಟ್ಟಷ್ಟು ಹಣ ಬಡವರಿಗೆ ಕೊಡುತ್ತಿದ್ದರು’ ಎಂದಿದ್ದಾರೆ ವಿಂದು.
‘ಸಲ್ಮಾನ್ ಕೆಲಸ ಒಳ್ಳೆಯ ಇಂದಿಗೂ ನಡೆಯುತ್ತಿದೆ. ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಶೂಟಿಂಗ್ ಮಾಡುವಾಗ ಸಲ್ಮಾನ್ ಅವರನ್ನು ಭೇಟಿಯಾಗಲು ಅನೇಕರು ಬರುತ್ತಿದ್ದರು. ಕೆಲವರು ಪೇಪರ್ ತೋರಿಸಿದರೆ, ಕೆಲವರು ಕಾರಣ ಕೊಡುತ್ತಿದ್ದರು. ನಂತರ ನದೀಮ್ ಮತ್ತು ಶೇರಾ ಜನರಿಂದ ಮಾಹಿತಿ ಪಡೆದು ಸಲ್ಮಾನ್ಗೆ ಕಳುಹಿಸುತ್ತಿದ್ದರು. ಸಲ್ಮಾನ್ ಖಾನ್ ಸಹಾಯ ಮಾಡಲು ಧಾವಿಸುತ್ತಿದ್ದರು. ಹೀಗೆ 25-30 ಲಕ್ಷ ರೂ. ಇಂದಿಗೂ ಅವರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅನೇಕ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಿದ್ದಾರೆ’ ಎಂದು ಹೇಳಿದ್ದಾರೆ ವಿಂದು.
ಇಷ್ಟೆಲ್ಲ ಸಹಾಯ ಮಾಡುವ ಸಲ್ಮಾನ್ ಖಾನ್ ಅವರು ಆಗಾಗ ಬೇರೆ ಕಾರಣಕ್ಕೂ ಸುದ್ದಿ ಆಗುತ್ತಾರೆ. ಅವರು ಅಭಿಮಾನಿಗಳ ವಿರುದ್ಧ ಸಿಟ್ಟಿಗೇಳುತ್ತಾರೆ. ಸೆಲ್ಫಿ ಕೇಳಲು ಬಂದ ಫ್ಯಾನ್ಸ್ ವಿರುದ್ಧ ಅವರು ಕೋಪಗೊಂಡಿದ್ದೂ ಇದೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ನಡೆದು ಹೋಗುವಾಗ ವ್ಯಕ್ತಿಯೋರ್ವ ಸೆಲ್ಫಿ ಕೇಳಿದ್ದ. ಈ ವೇಳೆ ಸಲ್ಮಾನ್ ಖಾನ್ ಸಿಟ್ಟಾಗಿದ್ದರು. ಇನ್ನು ಸಲ್ಮಾನ್ ಖಾನ್ ಅವರು ಕೃಷ್ಣಮೃಗ ಹತ್ಯೆ ಹಾಗೂ ಹಿಟ್ ಆ್ಯಂಡ್ ರನ್ ಕೇಸ್ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದರು.
ಇದನ್ನೂ ಓದಿ: ‘ದೂರದಿಂದ ಸೆಲ್ಫಿ ತೆಗೆದುಕೊಳ್ಳೋದು ತಪ್ಪಾ?’; ಸಲ್ಮಾನ್ ಖಾನ್ ನಡೆಗೆ ಫ್ಯಾನ್ಸ್ ಆಕ್ರೋಶ
ಸಲ್ಮಾನ್ ಖಾನ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ಟೈಗರ್ 3’ ಸಿನಿಮಾ ಕೂಡ ಸಾಧಾರಣ ಗಳಿಕೆ ಮಾಡಿದೆ. ಇದು ಅವರ ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಅವರಿಗೆ ದೊಡ್ಡ ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ