ಶಾರುಖ್ ರೀತಿಯ ಸಿನಿಮಾ ಮಾಡಿ ಎಂದು ಆಮಿರ್ಗೆ ಕಿವಿಮಾತು; ನಟನ ಉತ್ತರ ಏನು?
ಶಾರುಖ್ ಖಾನ್ ಕೂಡ ಬ್ಯಾಕ್ ಟು ಬ್ಯಾಕ್ ಸೋಲು ಕಂಡರು. ‘ಪಠಾಣ್’, ‘ಜವಾನ್’ ಅಂಥ ಆ್ಯಕ್ಷನ್ ಸಿನಿಮಾ ಮಾಡಿ ಗಮನ ಸೆಳೆದರು. ಈ ಬಗ್ಗೆ ಆಮಿರ್ಗೆ ಪ್ರಶ್ನೆ ಎದುರಾಗಿದೆ. ‘ಪಠಾಣ್ ರೀತಿಯ ಸಿನಿಮಾ ಮಾಡಬೇಕು’ ಎಂದು ಅವರಿಗೆ ಕೇಳಲಾಗಿದೆ. ಇದಕ್ಕೆ ಆಮಿರ್ ತಮ್ಮದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ದಾರೆ.

ಆಮಿರ್ ಖಾನ್ (Aamir Khan) ಅವರು ‘ಲಾಲ್ ಸಿಂಗ್ ಚಡ್ಡಾ’ ಸೋಲಿನ ಬಳಿಕ ಬ್ರೇಕ್ ಪಡೆದಿದ್ದಾರೆ. ಅವರು ಸಿನಿಮಾ ನಿರ್ಮಾಣದತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆ್ಯಕ್ಷನ್ ಚಿತ್ರಗಳ ಜೊತೆ ಅವರು ಪ್ರಯೋಗಾತ್ಮಕ ಸಿನಿಮಾಗಳನ್ನು ಕೂಡ ಮಾಡಿದ್ದಾರೆ. ಅವರ ನಿರ್ಮಾಣದ ‘ಲಾಪತಾ ಲೇಡಿಸ್’ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ವೇಳೆ ಅವರಿಗೆ ಆ್ಯಕ್ಷನ್ ಸಿನಿಮಾಗಳನ್ನು ಮಾಡುವಂತೆ ಕೋರಿದ್ದಾರೆ.
ಶಾರುಖ್ ಖಾನ್ ಕೂಡ ಬ್ಯಾಕ್ ಟು ಬ್ಯಾಕ್ ಸೋಲು ಕಂಡರು. ‘ಪಠಾಣ್’, ‘ಜವಾನ್’ ಅಂಥ ಆ್ಯಕ್ಷನ್ ಸಿನಿಮಾ ಮಾಡಿ ಗಮನ ಸೆಳೆದರು. ಈ ಬಗ್ಗೆ ಆಮಿರ್ಗೆ ಪ್ರಶ್ನೆ ಎದುರಾಗಿದೆ. ‘ಪಠಾಣ್ ರೀತಿಯ ಸಿನಿಮಾ ಮಾಡಬೇಕು’ ಎಂದು ಅವರಿಗೆ ಕೇಳಲಾಗಿದೆ. ಇದಕ್ಕೆ ಆಮಿರ್ ತಮ್ಮದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ದಾರೆ. ‘ಶಾರುಖ್ ಖಾನ್ ಅವರು ಪಠಾಣ್ ರೀತಿ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ನಾನು ಲಾಪತಾ ಲೇಡಿಸ್ ರೀತಿಯ ಸಿನಿಮಾ ಮಾಡುತ್ತೇನೆ. ನೀವು ಇದನ್ನು ನೋಡಬೇಕು’ ಎಂದಿದ್ದಾರೆ ಆಮಿರ್.
‘ಲಾಪತಾ ಲೇಡಿಸ್’ ಸಿನಿಮಾ ಮಾರ್ಚ್ 1ರಂದು ಬಿಡುಗಡೆ ಆಯಿತು. ಕಿರಣ್ ರಾವ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರತಿಭಾ ರತ್ನ, ಸ್ಪರ್ಶ್ ಶ್ರೀವಾತ್ಸವ್, ನಿತಾಂಶಿ ಗೋಯಲ್ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ಮುಂದಿನ ಹತ್ತು ವರ್ಷಗಳ ಯೋಜನೆ ತಿಳಿಸಿದ ಆಮಿರ್ ಖಾನ್
ಆಮಿರ್ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಕಳೆದ ವಾರ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ‘ಆಮಿರ್ ಖಾನ್ ಅವರು ಅನಂತ್ ಅಂಬಾನಿ ಮನೆಯ ಮದುವೆಯಲ್ಲಿ ಡ್ಯಾನ್ಸ್ ಮಾಡಿದರು. ಆದರೆ ತಮ್ಮದೇ ಮಗಳ ಮದುವೆಯಲ್ಲಿ ಅವರು ಹೆಜ್ಜೆ ಹಾಕಿಲ್ಲ’’ ಎಂದು ಅನೇಕರು ಹೇಳಿದ್ದರು. ಆದರೆ, ಮಗಳ ಜೊತೆ ಡ್ಯಾನ್ಸ್ ಮಾಡಿದ್ದಾಗಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ