‘ಲಾಲ್ ಸಿಂಗ್ ಚಡ್ಡಾ’ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಆಮಿರ್​ ಖಾನ್​ಗೆ ಈಗ ಮತ್ತೆ ಸಿನಿಮಾ ಮಾಡುವ ಬಯಕೆ

ನಟ ಆಮಿರ್​ ಖಾನ್​ ಅವರು ನಟನೆಯಿಂದ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡಿದ್ದರು. ಒಂದು ವರ್ಷದ ಗ್ಯಾಪ್ ನಂತರ ಅವರು ಮತ್ತೆ ನಟನೆಗೆ ಮರಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಾರಿ ಅವರು ಮತ್ತೆ ಬಯೋಪಿಕ್ ಮೊರೆ ಹೋಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಾರೆ ಈ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ಕೌತುಕ ಮೂಡಿದೆ.

‘ಲಾಲ್ ಸಿಂಗ್ ಚಡ್ಡಾ’ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಆಮಿರ್​ ಖಾನ್​ಗೆ ಈಗ ಮತ್ತೆ ಸಿನಿಮಾ ಮಾಡುವ ಬಯಕೆ
ಆಮಿರ್ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 29, 2023 | 5:10 PM

ಬಾಲಿವುಡ್​ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಆಮಿರ್ ಖಾನ್ (Aamir Khan) ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆದ ನಂತರ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. 2018ರಲ್ಲಿ ತೆರೆಕಂಡ ‘ಥಗ್ಸ್ ಆಫ್ ಹಿಂದುಸ್ಥಾನ್’ ಸಿನಿಮಾ 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಆದರೆ, ಈ ಚಿತ್ರ ಕೇವಲ 150 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲು ಸಾಧ್ಯವಾಗಿತ್ತು. ಇನ್ನು, ಕಳೆದ ವರ್ಷ ಆಮಿರ್ ಖಾನ್-ಕರೀನಾ ಕಪೂರ್ ಒಟ್ಟಿಗೆ ನಟಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಬಿಡುಗಡೆಯಾಗಿತ್ತು. ಇಂಗ್ಲಿಷ್​ನ ‘ಫಾರೆಸ್ಟ್ ಗಂಪ್’ ಸಿನಿಮಾದ ಹಿಂದಿ ರಿಮೇಕ್ ಆಗಿರುವ ಈ ಚಿತ್ರ ಕೂಡ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಲು ಸೋತಿತ್ತು. ಆ ಬಳಿಕ ನಟನೆಯಿಂದಲೇ ಬ್ರೇಕ್​ ಪಡೆದುಕೊಂಡಿದ್ದ ಆಮಿರ್ ಖಾನ್​ ಅವರು ಈಗ ಮತ್ತೆ ಸಿನಿಮಾ (Aamir Khan New Movie) ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ 180 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣಗೊಂಡಿತ್ತು. ಆದರೆ ಈ ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಸಂಗ್ರಹ ಆಗಿದ್ದು 129 ಕೋಟಿ ರೂಪಾಯಿ ಮಾತ್ರ. ಹೀಗೆ ಪದೇ ಪದೇ ಸೋಲು ಕಂಡಿದ್ದರಿಂದ ಆಮಿರ್​ ಖಾನ್ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆಯಬೇಕು ಎಂದು ಅವರು ತೀರ್ಮಾನಿಸಿದ್ದರು. ಹಾಗಾಗಿ ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವರು ಅವಸರ ತೋರಿಸಿರಲಿಲ್ಲ. ಅದರ ನಡುವೆ ನೇಪಾಳಕ್ಕೂ ತೆರಳಿ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈಗ ಆಮಿರ್​ ಖಾನ್​ ಅವರು ಸಿನಿಮಾದ ವಿಚಾರಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಲಾಲ್ ಸಿಂಗ್ ಚಡ್ಡಾ; ನೋಡಿ ಓವರ್ ಆಕ್ಟಿಂಗ್ ಎಂದಿದ್ದ ರಾಜಮೌಳಿ, ಆಮಿರ್ ಖಾನ್ ಪ್ರತಿಕ್ರಿಯೆ ಏನಿತ್ತು?

ಆಮಿರ್​ ಖಾನ್​ ನಟಿಸಲಿರುವ ಹೊಸ ಚಿತ್ರವು ಶೀಘ್ರದಲ್ಲೇ ಸೆಟ್ಟೇರಿಲಿದೆ ಎಂಬ ಸುದ್ದಿ ಕೇಳಿಬಂದಿದೆ. ಆ ಸಿನಿಮಾ ಮುಂದಿನ ವರ್ಷವೇ ತೆರೆಕಾಣಲಿದೆ ಎಂದು ಕೂಡ ಹೇಳಲಾಗುತ್ತಿದೆ. 2024ರ ಕ್ರಿಸ್​ಮಸ್​ ಹಬ್ಬದ ಸಮಯದಲ್ಲಿ ಆ ಚಿತ್ರ ತೆರೆ ಮೇಲೆ ಬರಲಿದೆ. ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿ ಕೆಲಸಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಆಮಿರ್ ಖಾನ್​ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ಬಯೋಪಿಕ್​ ಮಾಡಲು ತಯಾರಿ ನಡೆಸುತ್ತಿರುವ ಆಮಿರ್​ ಖಾನ್​-ರಾಜ್​ಕುಮಾರ್​ ಹಿರಾನಿ? ಕೇಳಿಬರ್ತಿದೆ ಹೊಸ ಸುದ್ದಿ

2022ರ ನವೆಂಬರ್​ನಲ್ಲಿ ಆಮಿರ್​ ಖಾನ್​ ಅವರು ನಟನೆಯಿಂದ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, ‘ನಾನು 35 ವರ್ಷಗಳಿಂದ ಚಿತ್ರರಂಗದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನ್ನ ಕುಟುಂಬಕ್ಕೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಈಗ ನಟನೆಯಿಂದ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಳ್ಳಲಿದ್ದೇನೆ. ಮೊದಲ ಬಾರಿಗೆ ನಟನೆಯಿಂದ ಒಂದು ಅಥವಾ ಒಂದೂವರೆ ವರ್ಷ ದೂರವಿರುತ್ತಿದ್ದೇನೆ. ಆದರೆ ನಟನೆಯ ಬದಲು ನಿರ್ಮಾಪಕನಾಗಿ ಸಕ್ರಿಯನಾಗಿರುತ್ತೇನೆ’ ಎಂದಿದ್ದರು.

ಇದನ್ನೂ ಓದಿ: ಒಂದಾಗುತ್ತಿದೆ 3 ಇಡಿಯಟ್ಸ್, ಪಿಕೆ ಜೋಡಿ, ಈ ಬಾರಿ ಗೆದ್ದಾರೆಯೇ ಆಮಿರ್ ಖಾನ್?

ಪಬ್ಲಿಕ್ ಪ್ರಾಸಿಕ್ಯೂಟರ್ ಅಜ್ವಲ್ ನಿಕಮ್ ಅವರ ಬಯೋಪಿಕ್ ಮಾಡಲು ದಿನೇಶ್ ವಿಜನ್ ಅವರೊಂದಿಗೆ ಆಮಿರ್​ ಖಾನ್​ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಸಿನಿಮಾದ ಕಥೆಯ ಕುರಿತು ಹಲವು ಬಾರಿ ಚರ್ಚೆಗಳು ನಡೆದಿದ್ದು, ಹಲವು ನಿರ್ಮಾಪಕರು ಹಣ ಹೂಡಲಿದ್ದಾರೆ ಎಂದೂ ಹೇಳಲಾಗಿದೆ. ಸದ್ಯದಲ್ಲೇ ನಟರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಈ ಸಿನಿಮಾ 2024ರಲ್ಲಿ ಸೆಟ್ಟೇರಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಆಮಿರ್​ ಖಾನ್ ಅವರೇ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳತ್ತಾರಾ ಅಥವಾ ಬೇರೆ ಯಾರಾದರೂ ನಟಿಸುತ್ತಾರಾ ಎಂಬುದು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ