ಸಲ್ಮಾನ್ ಖಾನ್ಗೆ ಕತ್ರಿನಾ ಮೇಲಿರೋ ಪ್ರೀತಿ ಎಂಥದ್ದು? ಈ ಘಟನೆಯೇ ಸಾಕ್ಷಿ
ಬಾಲಿವುಡ್ನಲ್ಲಿ ಕತ್ರಿನಾ ಕೈಫ್ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರನ್ನು ಪರಿಚಯಿಸಿದ್ದು ಸಲ್ಮಾನ್ ಖಾನ್ ಆದರೂ ಅವರು ತಮ್ಮ ಟ್ಯಾಲೆಂಟ್ ಮೂಲಕ ಬಣ್ಣದ ಲೋಕದಲ್ಲಿ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಸಲ್ಲುಗೆ ವಿಶೇಷ ಪ್ರೀತಿ ಇದೆ.
ಕತ್ರಿನಾ ಕೈಫ್ (Katrina Kaif) ಹಾಗೂ ಸಲ್ಮಾನ್ ಖಾನ್ ನಡುವೆ ಒಳ್ಳೆಯ ಕೆಮಿಸ್ಟ್ರಿ ಇದೆ. ಕತ್ರಿನಾ ಅವರನ್ನು ಸಲ್ಮಾನ್ ಖಾನ್ ಬೆಂಬಲಿಸುತ್ತಲೇ ಬಂದಿದ್ದಾರೆ. ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ಟೈಗರ್ 3’, ‘ಪಾರ್ಟ್ನರ್’ ಸಿನಿಮಾಗಳಲ್ಲಿ ಸಲ್ಮಾನ್ ಹಾಗೂ ಕತ್ರಿನಾ ಒಟ್ಟಾಗಿ ನಟಿಸಿದ್ದರು. ಆದರೆ ಕತ್ರಿನಾ ಕೈಫ್ ಅವರಿಗೆ ಅವಾರ್ಡ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಲ್ಮಾನ್ ಖಾನ್ ಅವರು ಸಾಕಷ್ಟು ಅಸಮಾಧಾನಗೊಂಡಿದ್ದರು.
ಬಾಲಿವುಡ್ನಲ್ಲಿ ಕತ್ರಿನಾ ಕೈಫ್ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರನ್ನು ಪರಿಚಯಿಸಿದ್ದು ಸಲ್ಮಾನ್ ಖಾನ್ ಆದರೂ ಅವರು ತಮ್ಮ ಟ್ಯಾಲೆಂಟ್ ಮೂಲಕ ಬಣ್ಣದ ಲೋಕದಲ್ಲಿ ಹೆಸರು ಮಾಡಿದ್ದಾರೆ. ಅವರು ‘ಕ್ವಾಬ್ ದೇಖೆ’ ಸಿನಿಮಾದಲ್ಲಿ ಮಾಡಿದ ಡ್ಯಾನ್ಸ್ ಕಾರಣಕ್ಕೆ ಟೀಕೆಗೆ ಒಳಗಾಗಿದ್ದರು. ‘ಚಿಕಿಣಿ ಚಮೇಲಿ..’ ಹಾಗೂ ‘ಕಮಲಿ..’ ಹಾಡುಗಳಲ್ಲಿ ಒಳ್ಳೆಯ ಡ್ಯಾನ್ಸ್ ಸ್ಟೆಪ್ ಹಾಕಿ ಎಲ್ಲರ ಬಾಯಿ ಮುಚ್ಚಿಸಿದ್ದರು. ತಮಗೆ ಗೊತ್ತಿಲದ ವಿಚಾರವನ್ನು ಕಲಿತು ತೋರಿಸುತ್ತಾರೆ ಅವರು.
ಕತ್ರಿನಾ ಕೈಫ್ ಅವರು ಹಲವು ಸಿನಿಮಾಗಳಲ್ಲಿ ನಾಮಿನೇಟ್ ಆಗಿದ್ದರು. ಆದರೆ, ಅವರಿಗೆ ಅವಾರ್ಡ್ ಸಿಕ್ಕಿದ್ದು ಕಡಿಮೆ. ಈ ಬಗ್ಗೆ ಸಲ್ಮಾನ್ ಖಾನ್ಗೆ ಪ್ರಶ್ನೆ ಮಾಡಲಾಗಿತ್ತು. ‘ನಾನು ಈ ಪ್ರಶ್ನೆಗೆ ಉತ್ತರಿಸಲು ಬಯಸುವುದಿಲ್ಲ. ಎಲ್ಲಾ ನಾಮಿನೇಷನ್ಗೆ ಅವರಿಗೆ ಹಣ ಸಿಗಬೇಕು. ಅವರು ಅವಾರ್ಡ್ ಕಾರ್ಯಕ್ರಮಕ್ಕೆ ಬಂದರೆ ಅವರ ಹೆಸರಲ್ಲಿ ಭರ್ಜರಿ ಪ್ರಚಾರಗಳು ನಡೆಯುತ್ತವೆ. ಆಮೇಲೆ ಆ ಪ್ರಶಸ್ತಿ ಬೆರೆ ಯಾರಿಗೋ ಸಿಗುತ್ತದೆ. ಅದು ಸರಿಯಲ್ಲ ಅಲ್ಲವೇ? ಇದು ನ್ಯಾಯೋಚಿತ ಅಲ್ಲ’ ಎಂದಿದ್ದರು ಸಲ್ಮಾನ್ ಖಾನ್.
ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಆದರೆ, ಈ ಚಿತ್ರ ಅಂದುಕೊಂಡಷ್ಟು ಗಳಿಕೆ ಮಾಡೋಕೆ ಸಾಧ್ಯವಾಗಿಲ್ಲ. ಈ ಸಿನಿಮಾ ಸಾಧಾರಾಣ ಗಳಿಕೆ ಮಾಡಿತು. ಕತ್ರಿನಾ ಕೈಫ್ ಅವರ ನಟನೆಯ ‘ಮೇರಿ ಕ್ರಿಸ್ಮಸ್’ ಸಿನಿಮಾ ಜನವರಿ ತಿಂಗಳಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುತಿ ನಟಿಸಿದ್ದರು. ಈ ಸಿನಿಮಾ ಅಂದುಕೊಂಡ ರೀತಿಯಲ್ಲಿ ಕಮಾಲ್ ಮಾಡೋಕೆ ಸಾಧ್ಯವಾಗಿಲ್ಲ. ಈ ಚಿತ್ರ ಶೀಘ್ರವೇ ಒಟಿಟಿಗೆ ಬರಲಿದೆ.
ಇದನ್ನೂ ಓದಿ: ಮತ್ತೆ ಡಿಪ್ಫೇಕ್ ವಿಡಿಯೋದಿಂದ ತೊಂದರೆ ಅನುಭವಿಸಿದ ಕತ್ರಿನಾ ಕೈಫ್
ಕತ್ರಿನಾ ಕೈಫ್ ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಈ ಬಗ್ಗೆ ಅನೇಕರಿಗೆ ಅನುಮಾನ ಇದೆ. ಅವರು ಮದುವೆ ಆಗಿ ಕೆಲವು ಸಮಯ ಕಳೆದಿದೆ. ಅವರ ಕಡೆಯಿಂದ ಹೊಸ ಸುದ್ದಿ ಏನಾದರೂ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ದೀಪಿಕಾ ಪಡುಕೋಣೆ ಅವರು ಪ್ರೆಗ್ನೆಂಟ್ ವಿಚಾರ ಘೋಷಿಸಿದ್ದಾರೆ. ಕತ್ರಿನಾ ಕೂಡ ಈ ಬಗ್ಗೆ ಅನೌನ್ಸ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ