ವಿನಯ್ ರಾಜ್​ಕುಮಾರ್ ನಟನೆಯ ‘ಗ್ರಾಮಾಯಣ’ ಸೆಟ್​ಗೆ ಭೇಟಿ ನೀಡಿದ ಶಿವಣ್ಣ-ಗೀತಕ್ಕ

ವಿನಯ್ ರಾಜ್​ಕುಮಾರ್ ನಟನೆಯ ‘ಗ್ರಾಮಾಯಣ’ ಸೆಟ್​ಗೆ ಭೇಟಿ ನೀಡಿದ ಶಿವಣ್ಣ-ಗೀತಕ್ಕ

ರಾಜೇಶ್ ದುಗ್ಗುಮನೆ
|

Updated on:Mar 08, 2024 | 8:17 AM

ವಿನಯ್ ರಾಜ್​ಕುಮಾರ್ ಅವರು ‘ಗ್ರಾಮಾಯಣ’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಸೆಟ್​ಗೆ ಶಿವರಾಜ್​ಕುಮಾರ್ ಹಾಗೂ ಗೀತಕ್ಕ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿನಯ್ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟ ನಿರೀಕ್ಷೆ ಇದೆ.

ವಿನಯ್ ರಾಜ್​ಕುಮಾರ್ ಅವರು ಇತ್ತೀಚೆಗೆ ‘ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ಬಳಿಕ ವಿನಯ್ ಸುಮ್ಮನೆ ಕೂತಿಲ್ಲ. ಅವರು ‘ಗ್ರಾಮಾಯಣ’ (Gramayana Movie) ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಸೆಟ್​ಗೆ ಶಿವರಾಜ್​ಕುಮಾರ್ ಹಾಗೂ ಗೀತಕ್ಕ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಗ್ರಾಮಾಯಣ’ ಚಿತ್ರಕ್ಕೆ ನಾಲ್ಕು ವರ್ಷದ ಹಿಂದೆಯೇ ಮುಹೂರ್ತ ನಡೆದಿತ್ತು. ಕೊವಿಡ್​ಗೂ ಮೊದಲು ಶೂಟಿಂಗ್ ಕೂಡ ನಡೆದಿತ್ತು. ಆದರೆ, ಹಲವು ಕಾರಣಗಳಿಂದ ಸಿನಿಮಾ ಅರ್ಧಕ್ಕೆ ನಿಂತಿತ್ತು. ಈಗ ಮತ್ತೆ ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರತಂಡ ಭರ್ಜರಿಯಾಗಿ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 08, 2024 08:16 AM