Nayanthara: ಒಂದೇ ಒಂದು ಫೋಟೋದಿಂದ ಎಲ್ಲಾ ವದಂತಿಗೆ ಬ್ರೇಕ್ ಎಳೆದ ನಯನತಾರಾ
ನಯಾನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದರು. ಇದರಿಂದ ಇವರ ವಿಚ್ಛೇದನ ವದಂತಿ ಹುಟ್ಟಿತ್ತು. ಇದಾದ ಬಳಿಕ ಅವರು ಮತ್ತೆ ಪತಿಯನ್ನು ಫಾಲೋ ಮಾಡೋಕೆ ಆರಂಭಿಸಿದ್ದರು. ನಂತರ ಅವರು ಹಾಕಿದ್ದ ಸ್ಟೇಟಸ್ ವಿಚ್ಛೇದನ ವದಂತಿಯನ್ನು ಹೆಚ್ಚಿಸಿತ್ತು.

ನಟಿ ನಯನತಾರಾ (Nayanthara) ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿ ಇದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಹಾಗೂ ವಿಘ್ನೇಶ್ ಶಿವನ್ ಮಧ್ಯೆ ಹುಟ್ಟಿರೋ ವಿಚ್ಛೇದನದ ವದಂತಿ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಚರ್ಚೆ ಆಗುತ್ತಲೇ ಇತ್ತು. ಈಗ ಈ ಎಲ್ಲಾ ವದಂತಿಗಳಿಗೆ ನಯನತಾರಾ ಬ್ರೇಕ್ ಎಳೆದಿದ್ದಾರೆ. ಕುಟುಂಬದ ಜೊತೆ ವಿದೇಶ ಪ್ರಯಾಣ ಬೆಳೆಸಿದ್ದಾರೆ ನಯನತಾರಾ. ಈ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. ನಯನತಾರಾ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ವದಂತಿ ಹುಟ್ಟಿದ್ದು ಹೇಗೆ?
ನಯಾನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದರು. ಇದರಿಂದ ಇವರ ವಿಚ್ಛೇದನ ವದಂತಿ ಹುಟ್ಟಿತ್ತು. ಇದಾದ ಬಳಿಕ ಅವರು ಮತ್ತೆ ಪತಿಯನ್ನು ಫಾಲೋ ಮಾಡೋಕೆ ಆರಂಭಿಸಿದ್ದರು. ನಂತರ ಅವರು ಹಾಕಿದ್ದ ಸ್ಟೇಟಸ್ ವಿಚ್ಛೇದನ ವದಂತಿಯನ್ನು ಹೆಚ್ಚಿಸಿತ್ತು. ‘ಹೌದು ನಾನು ಕಳೆದು ಹೋಗಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ವಿಚಾರದಿಂದ ಫ್ಯಾನ್ಸ್ ಆತಂಕಗೊಂಡಿದ್ದರು.
ಕುಟುಂಬದ ಜೊತೆ ಟ್ರಿಪ್
ನಯನತಾರಾ ನಟನೆಯಿಂದ ಒಂದು ಬ್ರೇಕ್ ಪಡೆದಿದ್ದಾರೆ. ಅವರು ವಿದೇಶಕ್ಕೆ ಹಾರಿದ್ದಾರೆ. ಅವರು ತೆರಳಿದ್ದು ಜೆಡ್ಡಾಗೆ ಎನ್ನಲಾಗಿದೆ. ಈ ಫೋಟೋದಲ್ಲಿ ನಯನತಾರಾ ಒಂದು ಮಗುವನ್ನು ಹಿಡಿದುಕೊಂಡರೆ ವಿಘ್ನೇಶ್ ಅವರನ್ನು ಒಂದು ಮಗುವನ್ನು ಹಿಡಿದಿದ್ದಾರೆ. ‘ನನ್ನ ಬಾಯ್ಸ್ ಜೊತೆ ಹಲವು ಸಮಯದ ಬಳಿಕ ಪ್ರಯಾಣಿಸುತ್ತಿದ್ದೇನೆ’ ಎಂದಿದ್ದಾರೆ ನಯನಾತಾರಾ.
ಇದನ್ನೂ ಓದಿ: ‘ಕಳೆದು ಹೋಗಿದ್ದೇನೆ’: ವಿಚ್ಛೇದನ ವದಂತಿ ಮಧ್ಯೆ ನಿಗೂಢಾರ್ಥದಲ್ಲಿ ಪೋಸ್ಟ್ ಮಾಡಿದ ನಯನತಾರಾ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇತ್ತೀಚೆಗೆ ತಮ್ಮದೇ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಈ ಕಾರಣಕ್ಕೆ ಎಲ್ಲಿಯೂ ಸುತ್ತಾಟ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ‘ಎಫ್ 1’ ರೇಸ್ ನೋಡಲು ಅವರು ಜೆಡ್ಡಾಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ ಎನ್ನಲಾಗುತ್ತಿದೆ.
ನಯನತಾರಾ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ‘ಜವಾನ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




