ಒಂದೇ ಒಂದು ಘಟನೆಯಿಂದ ಡಾರ್ಲಿಂಗ್ ಕೃಷ್ಣ ಲವ್ ಪ್ರಪೋಸ್ ಒಪ್ಪಿಕೊಂಡಿದ್ದ ಮಿಲನಾ ನಾಗರಾಜ್
2013ರಲ್ಲಿ ‘ಮದರಂಗಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರು ನಟಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಿಲನಾ ಕೂಡ ನಟಿಸಬೇಕಿತ್ತು. ಆದರೆ, ಈ ಸಿನಿಮಾನ ಅವರು ರಿಜೆಕ್ಟ್ ಮಾಡಿದ್ದರು. 2015ರಲ್ಲಿ ಇಬ್ಬರೂ ‘ಚಾರ್ಲಿ’ ಸಿನಿಮಾದಲ್ಲಿ ತೆರೆ ಹಂಚಿಕೊಂಡರು. ಸೆಟ್ನಲ್ಲಿ ಕೃಷ್ಣ ಅವರಿಗೆ ಪ್ರೀತಿ ಆಗಿತ್ತು.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ (Milana Nagaraj) ಅವರು ಹೊಸ ಸುದ್ದಿ ನೀಡಿದ್ದಾರೆ. ತಮ್ಮ ಮನೆಗೆ ಹೊಸ ಸದಸ್ಯನ ಆಗಮನ ಆಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್ನಲ್ಲಿ ಇಬ್ಬರೂ ತಂದೆ-ತಾಯಿ ಆಗಿ ಪ್ರಮೋಟ್ ಆಗುತ್ತಿದ್ದಾರೆ. ಈ ವಿಚಾರ ಕೇಳಿದ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಅವರು ಶುಭಾಶಯ ತಿಳಿಸುತ್ತಿದ್ದಾರೆ. ಕೃಷ್ಣ ಹಾಗೂ ಮಿಲನಾ ಅವರದ್ದು ಹಲವು ವರ್ಷಗಳ ಲವ್ಸ್ಟೋರಿ. ಇದನ್ನು ಮುಚ್ಚಿಟ್ಟಿದ್ದರು. 2021ರ ಫೆಬ್ರವರಿ 14ರಂದು ಲವರ್ಸ್ಡೇ ದಿನವೇ ಮದುವೆ ಆದರು. ಇವರ ಲವ್ಸ್ಟೋರಿ ಬಗ್ಗೆ ಇಲ್ಲಿದೆ ವಿವರ.
2013ರಲ್ಲಿ ‘ಮದರಂಗಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರು ನಟಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಿಲನಾ ಕೂಡ ನಟಿಸಬೇಕಿತ್ತು. ಆದರೆ, ಈ ಸಿನಿಮಾನ ಅವರು ರಿಜೆಕ್ಟ್ ಮಾಡಿದ್ದರು. 2015ರಲ್ಲಿ ಇಬ್ಬರೂ ‘ಚಾರ್ಲಿ’ ಸಿನಿಮಾದಲ್ಲಿ ತೆರೆ ಹಂಚಿಕೊಂಡರು. ಸೆಟ್ನಲ್ಲಿ ಕೃಷ್ಣ ಅವರಿಗೆ ಪ್ರೀತಿ ಆಗಿತ್ತು. ಹೇಗೆ ಪ್ರಪೋಸ್ ಮಾಡಿದ್ದರು ಎಂಬುದನ್ನು ಅವರು ಹೇಳಿಕೊಂಡಿದ್ದರು.
2015 ಮೇನಲ್ಲೇ ಪ್ರಪೋಸ್ ಮಾಡಿದ್ದರು ಡಾರ್ಲಿಂಗ್ ಕೃಷ್ಣ. ಅದಕ್ಕೂ ಮೊದಲು ಮಿಲನಾ ಅವರಿಗೆ ಮೆಸೇಜ್ ಮಾಡಿ ಪ್ರೀತಿ, ಪ್ರೇಮ ಹಾಗೂ ಮದುವೆ ಬಗ್ಗೆ ಮಾತನಾಡಿದ್ದರು ಕೃಷ್ಣ. ‘ಮಿಲನಾ ಅವರ ಮೇಲೆ ಮನಸ್ಸಾಗಿತ್ತು. ಅವರನ್ನು ಮದುವೆ ಆಗೋದೆ ಎನ್ನುವ ನಿರ್ಧಾರಕ್ಕೆ ಬಂದೆ. 2015ರ ಮೇ 8ಕ್ಕೆ ಪ್ರಪೋಸ್ ಮಾಡಬೇಕು ಎಂದು ನಿರ್ಧರಿಸಿದೆ. ಮೇ 9ಕ್ಕೆ ಪ್ರಪೋಸ್ ಮಾಡಿದೆ. ನನ್ನನ್ನು ಮದುವೆ ಆಗ್ತೀರಾ ಎಂದು ಕೇಳಿದೆ’ ಎಂದಿದ್ದರು ಡಾರ್ಲಿಂಗ್ ಕೃಷ್ಣ.
ಮದುವೆ ಆಗೋ ಹುಡುಗಿ ಬೆಳ್ಳಗೆ ಇರಬೇಕು ಎಂಬುದು ಕೃಷ್ಣ ಅವರ ಆಸೆ ಆಗಿತ್ತು. ಆ ಆಸೆ ಈಡೇರಿದೆ. ‘ಪ್ರೊಫೆಷನಲ್ ಒಂದೇ, ಅರ್ಥ ಮಾಡಿಕೊಳ್ಳುತ್ತಾರೆ, ಒಳ್ಳೆಯ ಫ್ಯಾಮಿಲಿ, ಬೆಳ್ಳಗೆ ಬೇರೆ ಇದೀನಿ ಎಂದು ಕೃಷ್ಣ ನನ್ನನ್ನು ಆಯ್ಕೆ ಮಾಡಿಕೊಂಡಿದ್ದರು’ ಎಂದಿದ್ದರು ಮಿಲನಾ. ಕೃಷ್ಣ ಪ್ರಪೋಸ್ ಮಾಡಿದ ಬಳಿಕ ಮಿಲನಾ ತಮಗೆ ಸಮಯ ಬೇಕು ಎಂದು ಹೇಳಿದ್ದರು. ಇದಕ್ಕೆ ಡಾರ್ಲಿಂಗ್ ಕೃಷ್ಣ ಕೂಡ ಓಕೆ ಎಂದಿದ್ದರು.
ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ಗೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಇಷ್ಟ ಆಯ್ತಾ? ವಿಡಿಯೋ ನೋಡಿ..
ಜಾಹೀರಾತು ಶೂಟಿಂಗ್ಗಾಗಿ ಮಿಲನಾ ನಾಗರಾಜ್ ನಾನಾ ರಾಜ್ಯಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಬಿಡುತ್ತಿದ್ದುದು ಮತ್ತು ಪಿಕ್ ಮಾಡುತ್ತಿದ್ದುದು ಡಾರ್ಲಿಂಗ್ ಕೃಷ್ಣ. ‘ಒಂದು ದಿನ ರಾತ್ರಿ ಎರಡು ಗಂಟೆವರೆಗೆ ನಿಮಗೆ ಶೂಟ್ ಇತ್ತು. ಬೆಳಿಗ್ಗೆ ಮೂರುವರೆಗೆ ನಾನು ವಿಮಾನ ನಿಲ್ದಾಣಕ್ಕೆ ಹೊರಡಬೇಕಿತ್ತು. ಅಂದು ನೀವು ಬಂದ್ರಿ. ಆಗ ನಾನು ಇಂಪ್ರೆಸ್ ಆದೆ. ಇವರ ಬಗ್ಗೆ ಯೋಚನೆ ಮಾಡಬಹುದು ಎಂದುಕೊಂಡೆ. ನೀವು ಕುಡ್ಯಲ್ಲ, ಸಿಗರೇಟ್ ಸೇದಲ್ಲ ಈ ಕಾರಣಕ್ಕೂ ಅವರು ಇಷ್ಟ ಆದರು’ ಎಂದಿದ್ದರು ಮಿಲನಾ. ನಂತರ ಪ್ರಪೋಸ್ ಒಪ್ಪಿದರು ಮಿಲನಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ