Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರಣ್​-ಆಶಿಕಾ ನಟನೆಯ ‘ಅವತಾರ ಪುರುಷ 2’ ಚಿತ್ರಕ್ಕೆ ಬಿಡುಗಡೆ ಭಾಗ್ಯ

‘ಅವತಾರ ಪುರುಷ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್​ 22ರಂದು ಈ ಸಿನಿಮಾವನ್ನು ತೆರೆಕಾಣಿಸಲು ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶರಣ್​, ಆಶಿಕಾ ರಂಗನಾಥ್​, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸುಧಾರಾಣಿ, ಭವ್ಯಾ ಮುಂತಾದವರು ನಟಿಸಿದ್ದಾರೆ. 150ರಿಂದ 200 ಚಿತ್ರಮಂದಿರಗಳಲ್ಲಿ ‘ಅವತಾರ ಪುರುಷ 2’ ತೆರೆಕಾಣಲಿದೆ.

ಶರಣ್​-ಆಶಿಕಾ ನಟನೆಯ ‘ಅವತಾರ ಪುರುಷ 2’ ಚಿತ್ರಕ್ಕೆ ಬಿಡುಗಡೆ ಭಾಗ್ಯ
‘ಅವತಾರ ಪುರುಷ 2’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Mar 07, 2024 | 10:48 PM

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkara Mallikarjunaiah) ಅವರು ಮತ್ತೆ ಆ್ಯಕ್ಟೀವ್​ ಆಗಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಅವತಾರ ಪುರುಷ 2’ ಸಿನಿಮಾ ಮಾರ್ಚ್ 22ಕ್ಕೆ ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಶರಣ್ (Sharan) ಅವರು ನಾಯಕನಾಗಿ ಅಭಿನಯಿಸಿದ್ದಾರೆ. ಅವರಿಗೆ ಆಶಿಕಾ ರಂಗನಾಥ್​ ಜೋಡಿ ಆಗಿದ್ದಾರೆ. ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಯಶಸ್ಸಿನಲ್ಲಿ ಇರುವ ಸಿಂಪಲ್​ ಸುನಿ ಅವರು ‘ಅವತಾರ ಪುರುಷ 2’ (Avatara Purusha 2) ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದರು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಯಾಕೆಂದರೆ, 2022ರಲ್ಲೇ ‘ಅವತಾರ ಪುರುಷ’ ರಿಲೀಸ್​ ಆಗಿತ್ತು. ಆಗ ಅದರ ಸೀಕ್ವೆಲ್​ ಬರುತ್ತಿದೆ. ಈ ಬಗ್ಗೆ ನಿರ್ದೇಶಕ ಸಿಂಪಲ್​ ಸುನಿ ಮಾತನಾಡಿದ್ದಾರೆ. ‘2 ವರ್ಷಗಳಿಂದ ಸ್ನೇಹಿತರು ಮತ್ತು ಅಭಿಮಾನಿಗಳು ‘ಅವತಾರ ಪುರುಷ 2’ ಯಾವಾಗ ಬಿಡುಗಡೆ ಆಗತ್ತೆ ಅಂತ ಕೇಳುತ್ತಿದ್ದರು. ಈಗ ನಮ್ಮ ಸಿನಿಮಾದ ರಿಲೀಸ್​ ಡೇಟ್​ ನಿಗದಿ ಆಗಿದೆ. ಚಿತ್ರದ ಮೊದಲ ಭಾಗ ನೋಡಿದವರಿಗೂ ಹಾಗೂ ನೋಡದೇ ಇರುವವರಿಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ಸುನಿ ಹೇಳಿದ್ದಾರೆ.

ಇದನ್ನೂ ಓದಿ: ಕಪ್ಪು ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್

ಕುಮಾರ ಎಂಬ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸಿದ್ದಾರೆ. ಸಾಯಿಕುಮಾರ್, ಸುಧಾರಾಣಿ, ಸಾಧು ಕೋಕಿಲ, ಭವ್ಯ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಕಲಾವಿದರು ಮತ್ತು ತಾಂತ್ರಿಕ ವರ್ಗದವರ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ’ ಎಂದು ಸುನಿ ಹೇಳಿದ್ದಾರೆ. ಈ ಸಿನಿಮಾವನ್ನು ಮೋಹನ್ ಅವರು ವಿತರಣೆ ಮಾಡುತ್ತಿದ್ದಾರೆ. ‘ಪ್ರೇಕ್ಷಕರಿಗೆ ಈ ಸಿನಿಮಾ ಸಖತ್​ ಮನರಂಜನೆ ನೀಡುವುದು ಗ್ಯಾರಂಟಿ. ಶೀಘ್ರದಲ್ಲೇ ಟ್ರೇಲರ್ ಮತ್ತು ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಿದ್ದೇವೆ. ಸಿನಿಮಾ ಉತ್ತಮವಾಗಿ ಮೂಡಿಬರಲು ಸಹಕರಿಸಿದ ನಮ್ಮ ಇಡೀ ತಂಡಕ್ಕೆ ಧನ್ಯವಾದಗಳು’ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 5ಕ್ಕೆ ಬರ್ತಿದೆ ಶರಣ್ ನಟನೆಯ ಹಾರರ್ ಸಿನಿಮಾ ‘ಛೂ‌ ಮಂತರ್’

ನಟ ಶರಣ್​ ಕೂಡ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಡೈರೆಕ್ಟರ್​ ಸಿಂಪಲ್ ಸುನಿ ಮತ್ತು ನಿರ್ಮಾಪಕ ಪುಷ್ಕರ್ ಅವರಿಗೆ ಸಿನಿಮಾ ಮೇಲೆ ಇರುವ ಪ್ರೀತಿ ನೋಡಿ ನನಗೆ ಬಹಳ ಖುಷಿ ಆಯಿತು. ಈ ಸಿನಿಮಾ ಯಾವಾಗ ರಿಲೀಸ್​ ಅಂತ ಅನೇಕರು ನನ್ನ ಬಳಿ ಕೂಡ ಕೇಳಿದ್ದಾರೆ. ಚಿತ್ರದ 2ನೇ ಭಾಗ ಇಷ್ಟು ಕುತೂಹಲ ಮೂಡಿಸಿದೆ ಎಂದರೆ ಮೊದಲ ಭಾಗ ನಿಜಕ್ಕೂ ಜನರಿಗೆ ಇಷ್ಟ ಆಗಿದೆ ಎಂದೇ ಅರ್ಥ. ನಾನು ಕೂಡ ಅಭಿಮಾನಿಗಳ ಜೊತೆ ಈ ಸಿನಿಮಾವನ್ನು ಕಾದಿದ್ದೇನೆ’ ಎಂದು ಶರಣ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?