‘ರಾಮಾಯಣ’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳನ್ನೂ ಮೀರಿಸಿ ಸಂಭಾವನೆ ಪಡೆದ ಯಶ್
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಯಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ರೂಪಾಯಿ ಎನ್ನುವ ಕುತೂಹಲ ಮೂಡಿದೆ.
ನಿತೇಶ್ ತಿವಾರಿ ಅವರು ನಿರ್ದೇಶನ ಮಾಡಲಿರುವ ‘ರಾಮಾಯಣ’ ಕುರಿತ ಚರ್ಚೆಗಳು ನಿಲ್ಲುತ್ತಿಲ್ಲ. ಈ ಚಿತ್ರಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಸುದ್ದಿಗಳು ಹೊರಬೀಳುತ್ತಿವೆ. ಸ್ಟಾರ್ ಕಾಸ್ಟ್‌ನಿಂದ ಹಿಡಿದು ಸ್ಟಾರ್‌ಗಳ ಶುಲ್ಕದವರೆಗೆ ಎಲ್ಲವೂ ಚರ್ಚೆ ಆಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಕನ್ನಡದ ಸ್ಟಾರ್ ನಟ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಚಿತ್ರದ ಉಳಿದ ಪಾತ್ರಗಳಿಗಾಗಿ ಭರ್ಜರಿ ತಂಡವನ್ನೇ ಸಿದ್ಧಪಡಿಸಲಾಗುತ್ತಿದೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಅವರು ‘ರಾಮಾಯಣ’ ಚಿತ್ರಕ್ಕೆ ‘ಕೆಜಿಎಫ್ 2’ ಚಿತ್ರಕ್ಕಿಂತ 4 ಪಟ್ಟು ಹೆಚ್ಚು ಸಂಭಾವನೆ ಕೇಳಿದ್ದಾರೆ ಎಂದು ವರದಿ ಆಗಿದೆ.
‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ನಂತರ ಯಶ್ ಫ್ಯಾನ್ ಫಾಲೋಯಿಂಗ್ ಸಾಕಷ್ಟು ಹೆಚ್ಚಾಗಿದೆ. ಈಗ ಅವರ ಚಿತ್ರಕ್ಕಾಗಿ ಇಡೀ ದೇಶ ಕಾತರದಿಂದ ಕಾಯುವಂತಾಗಿದೆ. ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ಯಶ್ ಈಗ ತಮ್ಮ ಶುಲ್ಕವನ್ನು 4 ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ನಟ ತನ್ನ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ. ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾವಣನ ಪಾತ್ರಕ್ಕಾಗಿ ಯಶ್ ಪಡೆಯುತ್ತಿರುವ ಸಂಭಾವನೆ ಅನೇಕರಿಗೆ ಅಚ್ಚರಿ ಮೂಡಿಸಿದೆ.
ಕೆಲವು ವರದಿಯ ಪ್ರಕಾರ ‘ರಾಮಾಯಣ’ ಮೂರು ಕಂತುಗಳಲ್ಲಿ ಮೂಡಿ ಬರಲಿದೆ. ನಿತೇಶ್ ತಿವಾರಿ ಅವರು ಯಶ್ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಯಶ್ ಅವರು ಮೂರು ಸರಣಿಗಳಿಂದ 150 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಆಗಿದೆ. ಯಶ್ ಅವರು ‘ಕೆಜಿಎಫ್ 2’ ಚಿತ್ರಕ್ಕೆ 30 ಕೋಟಿ ರೂಪಾಯಿ ಪಡೆದಿದ್ದರು ಎಂದು ವರದಿ ಆಗಿತ್ತು. ಒಂದೊಮ್ಮೆ ‘ರಾಮಾಯಾಣ’ ಸಂಭಾವನೆ ವಿಚಾರ ನಿಜವೇ ಆದಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಹೀರೋ ಎನ್ನುವ ಖ್ಯಾತಿ ಯಶ್ಗೆ ಸಿಗಲಿದೆ. ಅಲ್ಲದೆ, ಈ ವಿಚಾರದಲ್ಲಿ ಅವರು ಬಾಲಿವುಡ್ ಹೀರೋಗಳನ್ನು ಮೀರಿಸಿದಂತಾಗಲಿದೆ.
ಯಶ್ ಶುಲ್ಕದಲ್ಲಿ ಎರಡು ‘ಗದರ್ 2′ ತಯಾರಾಗಲಿದೆ
ಯಶ್ ಅವರ ಶುಲ್ಕದ ಸುದ್ದಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಬಾಲಿವುಡ್ನ ಬೇಡಿಕೆಯ ಹೀರೋ ಸನ್ನಿ ಡಿಯೋಲ್ ಅವರ ಬ್ಲಾಕ್ ಬಸ್ಟರ್ ‘ಗದರ್ 2’ ಬಜೆಟ್ 60 ಕೋಟಿ ರೂಪಾಯಿ ಇತ್ತು. ಅಂದರೆ ಯಶ್ ಸಂಭಾವನೆ ‘ಗದರ್ 2’ ಚಿತ್ರದ ಬಜೆಟ್‌ಗಿಂತ ಎರಡು ಪಟ್ಟು ಹೆಚ್ಚು ಆಗಿದೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ರಾಧಿಕಾ ಪಂಡಿತ್ ಜನ್ಮದಿನ; ಯಶ್ ಪತ್ನಿಗೆಷ್ಟು ವಯಸ್ಸು?
‘ಟಾಕ್ಸಿಕ್’ ಸಿನಿಮಾ
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಯಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ರೂಪಾಯಿ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ