‘ದೂರದಿಂದ ಸೆಲ್ಫಿ ತೆಗೆದುಕೊಳ್ಳೋದು ತಪ್ಪಾ?’; ಸಲ್ಮಾನ್ ಖಾನ್ ನಡೆಗೆ ಫ್ಯಾನ್ಸ್ ಆಕ್ರೋಶ

ಸಲ್ಮಾನ್ ಖಾನ್ ವಿಮಾನ ನಿಲ್ದಾಣದಿಂದ ಎಕ್ಸಿಟ್ ಆಗುತ್ತಿದ್ದರು. ಈ ವೇಳೆ ಅವರ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಸೆಲ್ಫಿ ವಿಡಿಯೋ ತೆಗೆದುಕೊಂಡಿದ್ದಾನೆ. ಕೂಲ್ ಆಗಿಯೇ ಬರುತ್ತಿದ್ದ ಸಲ್ಮಾನ್ ಖಾನ್ ಏಕಾಏಕಿ ಸಿಟ್ಟಾಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳೋದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

‘ದೂರದಿಂದ ಸೆಲ್ಫಿ ತೆಗೆದುಕೊಳ್ಳೋದು ತಪ್ಪಾ?’; ಸಲ್ಮಾನ್ ಖಾನ್ ನಡೆಗೆ ಫ್ಯಾನ್ಸ್ ಆಕ್ರೋಶ
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Mar 08, 2024 | 8:50 AM

ಸಲ್ಮಾನ್ ಖಾನ್ (Salman Khan) ಅವರು ಆಗಾಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ಅವರ ಮೂಡ್ ಹೇಗೆ ಇರುತ್ತದೆ ಎನ್ನುವುದರ ಮೇಲೆ ಅವರ ರಿಯಾಕ್ಷನ್ ಇರುತ್ತದೆ. ಕೆಲವೊಮ್ಮೆ ಫ್ಯಾನ್ಸ್ ಸೆಲ್ಫಿ ಕೇಳಿದಾಗ ಖುಷಿ ಖುಷಿಯಿಂದ ಅವರು ಪೋಸ್ ನೀಡುತ್ತಾರೆ. ಆದರೆ, ಕೆಲವೊಮ್ಮೆ ಆ ರೀತಿ ಇರುವುದಿಲ್ಲ. ಅವರು ಸಖತ್ ಸಿಟ್ಟಲ್ಲೇ ರಿಯಾಕ್ಷನ್ ನೀಡುತ್ತಾರೆ. ಈಗಲೂ ಹಾಗೆಯೇ ಆಗಿದೆ. ದೂರದಿಂದ ಅಭಿಮಾನಿಯೋರ್ವ ಸೆಲ್ಫಿ ತೆಗೆದುಕೊಂಡಿದ್ದಾನೆ. ಇದಕ್ಕೂ ಅವರು ಗರಂ ಆಗಿದ್ದಾರೆ.

ಸಲ್ಮಾನ್ ಖಾನ್ ಅವರು ವಿಮಾನ ನಿಲ್ದಾಣದಿಂದ ಎಕ್ಸಿಟ್ ಆಗುತ್ತಿದ್ದರು. ಈ ವೇಳೆ ಅವರ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಸೆಲ್ಫಿ ವಿಡಿಯೋ ತೆಗೆದುಕೊಂಡಿದ್ದಾನೆ. ಕೂಲ್ ಆಗಿಯೇ ಬರುತ್ತಿದ್ದ ಸಲ್ಮಾನ್ ಖಾನ್ ಏಕಾಏಕಿ ಸಿಟ್ಟಾಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳೋದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಭಿಮಾನಿ ದೂರ ಇದ್ದರೂ ಈ ರೀತಿ ಮಾಡಿದ್ದೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ಇದನ್ನೂ ಓದಿ: ಸೋಲಿನ ಸುಳಿಯಿಂದ ಹೊರಬರಲು ದಕ್ಷಿಣ ಭಾರತ ನಿರ್ದೇಶಕನ ಮೊರೆ ಹೋದ ಸಲ್ಮಾನ್ ಖಾನ್

ಸದ್ಯ ವೈರಲ್ ಆಗುತ್ತಿರುವ ವಿಡಿಯೋನ ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಅವರು ದೂರದಿಂದ ಸೆಲ್ಫಿ ತೆಗೆದುಕೊಳ್ಳೋದು ತಪ್ಪಾ? ಇದೇನಾ ನೀವು ಅಭಿಮಾನಿಗಳಿಗೆ ನೀಡೋ ಗೌರವ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಸಲ್ಲುನ ಬೆಂಬಲಿಸಿದ್ದಾರೆ. ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಇದೆ. ಹಿಗಾಗಿ ಅವರು ಹೆಚ್ಚು ಎಚ್ಚರಿಕೆಯಿಂದ ಇರಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ ಅವರ ಭದ್ರತಾ ಸಿಬ್ಬಂದಿ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

Salman Khan angry at a fan who was trying to take a selfie video with him byu/KramerDwight inBollyBlindsNGossip

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಅಂಬಾನಿ ಮಗ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಲ್ಮಾನ್ ಖಾನ್, ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಒಟ್ಟಿಗೆ ಹಾಜರಿಹಾಕಿದ್ದರು. ಈ ವೇಳೆ ‘ಆರ್​ಆರ್​ಆರ್’ ಚಿತ್ರದ ಆಸ್ಕರ್ ವಿನ್ನಿಂಗ್ ಹಾಡು ‘ನಾಟು ನಾಟು..’ಗೆ ಇವರು ಹೆಜ್ಜೆ ಹಾಕಿ ಗಮನ ಸೆಳೆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ