520 ಗಿಡ ನೆಟ್ಟು ಪುಣ್ಯದ ಕೆಲಸ ಮಾಡಿದ ನಟಿ ರಕುಲ್​ ಪ್ರೀತ್​ ಸಿಂಗ್​

ರಕುಲ್​ ಪ್ರೀತ್​ ಸಿಂಗ್​ ಮತ್ತು ಜಾಕಿ ಭಗ್ನಾನಿ ಅವರು 520 ಗಿಡಗಳನ್ನು ನೆಟ್ಟಿದ್ದಾರೆ. ಆ ಮೂಲಕ ಅವರು ಪರಿಸರ ಕಾಳಜಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ನಿಖರವಾಗಿ 520 ಗಿಡಗಳನ್ನು ನೆಡಲು ಕೂಡ ಒಂದು ಕಾರಣ ಇದೆ. ತಮ್ಮ ಮದುವೆಗೆ ಬಂದ ಪ್ರತಿಯೊಬ್ಬ ಅತಿಥಿಗಳ ಹೆಸರಿನಲ್ಲಿ ತಲಾ ಒಂದು ಗಿಡವನ್ನು ನೆಡಲಾಗಿದೆ. ಅವರ ಈ ಕಾರ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

520 ಗಿಡ ನೆಟ್ಟು ಪುಣ್ಯದ ಕೆಲಸ ಮಾಡಿದ ನಟಿ ರಕುಲ್​ ಪ್ರೀತ್​ ಸಿಂಗ್​
ರಕುಲ್​ ಪ್ರೀತ್​ ಸಿಂಗ್​
Follow us
ಮದನ್​ ಕುಮಾರ್​
|

Updated on: Mar 07, 2024 | 6:26 PM

ಜನಪ್ರಿಯ ನಟಿ ರಕುಲ್​ ಪ್ರೀತ್​ ಸಿಂಗ್​ (Rakul Preet Singh) ಅವರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫೆಬ್ರವರಿ 21ರಂದು ನಟ-ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ಅವರ ಮದುವೆ ನಡೆಯಿತು. ಗೋವಾದಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ನೂರಾರು ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವಿಶೇಷ ಏನೆಂದರೆ, ತಮ್ಮ ಮದುವೆಗೆ ಬಂದ ಪ್ರತಿ ಅತಿಥಿಯ ಹೆಸರಿನಲ್ಲಿ ರಕುಲ್​ ಪ್ರೀತ್​ ಸಿಂಗ್​ ಹಾಗೂ ಜಾಕಿ ಭಗ್ನಾನಿ ಅವರು ಒಂದೊಂದು ಗಿಡ ನೆಟ್ಟಿದ್ದಾರೆ. ಆ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ದಂಪತಿ ಮಾಡಿದ ಪುಣ್ಯದ ಕೆಲಸವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.

ರಕುಲ್​ ಪ್ರೀತ್​ ಸಿಂಗ್​ ಮತ್ತು ಜಾಕಿ ಭಗ್ನಾನಿ ಅವರು ಬಹುಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಗೋವಾದಲ್ಲಿ ಫೆ.21ರಂದು ಸಪ್ತಪದಿ ತುಳಿಯುವ ಮೂಲಕ ತಮ್ಮ ಪ್ರೀತಿಯನ್ನು ಅವರು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಈ ಜೋಡಿಯ ಮದುವೆಗೆ 520 ಮಂದಿ ಸಾಕ್ಷಿ ಆಗಿದ್ದರು. ಹಾಗಾಗಿ ತಮ್ಮ ಮದುವೆ ಬಂದ 520 ಜನರ ಹೆಸರಿನಲ್ಲಿ ಅವರು ಸಸಿ ನೆಟ್ಟಿದ್ದಾರೆ.

ಅಷ್ಟಕ್ಕೂ ರಕುಲ್​ ಪ್ರೀತ್​ ಸಿಂಗ್​ ಹಾಗೂ ಜಾಕಿ ಭಗ್ನಾನಿ ಅವರು ಈ ರೀತಿ ಮಾಡಿದ್ದು ಯಾಕೆ? ಅದರ ಹಿಂದೆ ಮಹತ್ವವಾದ ಕಾರಣ ಇದೆ. ದೊಡ್ಡ ದೊಡ್ಡ ಸಮಾರಂಭಗಳು ನಡೆದಾಗ ಪರಿಸರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹಾನಿ ಆಗುತ್ತದೆ. ಸೆಲೆಬ್ರಿಟಿಗಳ ಮದುವೆ ಎಂದರೆ ಅದು ಅದ್ದೂರಿ ಆಗಿರುತ್ತದೆ. ಈ ಸಮಾರಂಭದಿಂದ ಪರಿಸರಕ್ಕೆ ಆದ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಕುಲ್​ ಪ್ರೀತ್​ ಸಿಂಗ್​ ಮತ್ತು ಜಾಕಿ ಭಗ್ನಾನಿ ಅವರು 520 ಗಿಡಗಳನ್ನು ನೆಟ್ಟಿದ್ದಾರೆ.

ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಧರಸಿರುವ ಈ ಹೊಳೆಯುವ ಉಡುಪಿನ ಬೆಲೆ ಎಷ್ಟು ಲಕ್ಷ ಅಂದಾಜಿಸಿ

ಗಿಡ ನೆಟ್ಟ ಬಳಿಕ ಅದರ ಪ್ರಮಾಣ ಪತ್ರವನ್ನು ಪ್ರತಿ ಅತಿಥಿಗೂ ಕಳಿಸಿಕೊಡಲಾಗಿದೆ. ಈ ದಂಪತಿಯ ವಿವಾಹಕ್ಕೆ ಬಂದಿದ್ದ ನಟಿ ಪ್ರಗ್ಯಾ ಜೈಸ್ವಾಲ್​ ಅವರಿಗೂ ಈ ಪ್ರಮಾಣ ಪತ್ರ ತಲುಪಿದೆ. ಅದನ್ನು ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡು ರಕುಲ್​ ಪ್ರೀತ್​ ಸಿಂಗ್​ ಹಾಗೂ ಜಾಕಿ ಭಗ್ನಾನಿ ಅವರನ್ನು ಹೊಗಳಿದ್ದಾರೆ. ‘ಎಂಥಾ ಸುಂದರವಾದ ಮತ್ತು ಸ್ಫೂರ್ತಿದಾಯಕ ಕೆಲಸ’ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಪ್ರಮಾಣಪತ್ರ ವೈರಲ್​ ಆಗಿದೆ. ಇದೇ ರೀತಿ ಎಲ್ಲರೂ ಪರಿಸರದ ಕಾಳಜಿ ತೋರಿಸಲಿ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಜೂಹಿ ಚಾವ್ಲಾ ಅವರು ತಮ್ಮ ಮಗಳ ಹುಟ್ಟುಹಬ್ಬದ ದಿನ 1000 ಗಿಡಗಳನ್ನು ನೆಟ್ಟಿದ್ದು ಕೂಡ ಸುದ್ದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.