ರಾಖಿ ಸಾವಂತ್​ಗೆ ಶಾಕ್: ಎರಡನೇ ಮದುವೆಯಾದ ಆದಿಲ್ ಖಾನ್

ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ ಹಿಂದಿ ಸೀಸನ್ 12'ರಲ್ಲಿ ಸೋಮಿ ಮತ್ತು ಸಬಾ ಖಾನ್ ಇಬ್ಬರೂ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಈ ಇಬ್ಬರೂ ಸಹೋದರಿಯರು ಜೈಪುರದವರಾಗಿದ್ದು, ಸಿನಿಮಾದಲ್ಲಿ ಕೆಲಸ ಮಾಡಲು ಮುಂಬೈಗೆ ಬಂದಿದ್ದಾರೆ. ಸಬಾ ಮತ್ತು ಸೋಮಿ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ರಾಖಿ ಸಾವಂತ್​ಗೆ ಶಾಕ್: ಎರಡನೇ ಮದುವೆಯಾದ ಆದಿಲ್ ಖಾನ್
ಸೋಮಿ-ಆದಿಲ್, ರಾಖಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Mar 07, 2024 | 12:37 PM

‘ಡ್ರಾಮಾ ಕ್ವೀನ್’ ಎಂಬ ಪಟ್ಟ ಪಡೆದಿರುವ ನಟಿ ರಾಖಿ ಸಾವಂತ್ ಮತ್ತು ಅವರ ಪತಿ ಆದಿಲ್ ಖಾನ್ ದುರಾನಿ ನಡುವಿನ ಸಂಬಂಧವು ಬಹಳ ದಿನಗಳಿಂದ ಸುದ್ದಿಯಲ್ಲಿದೆ. ಇಬ್ಬರು ಏಕಾಏಕಿ ಮದುವೆಯಾಗಿದ್ದು, ಮದುವೆಯಾದ ಕೆಲವೇ ತಿಂಗಳಲ್ಲಿ ಆದಿಲ್ (Adil Khan) ವಿರುದ್ಧ ರಾಖಿ ಗಂಭೀರ ಆರೋಪ ಮಾಡಿದ್ದು ಸಾಕಷ್ಟು ಸುದ್ದಿ ಆಗಿತ್ತು. ಅಷ್ಟೇ ಅಲ್ಲ ರಾಖಿ ನೀಡಿದ ದೂರಿನಿಂದ ಆದಿಲ್ ಜೈಲಿಗೆ ಹೋಗಬೇಕಾಯಿತು. ಇದೀಗ ಆದಿಲ್ ಅವರು ಜೈಪುರದಲ್ಲಿ ರಹಸ್ಯವಾಗಿ ಮತ್ತೊಂದು ಮದುವೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದಕ್ಕೆ ರಾಖಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.

ಆದಿಲ್ ಮಾರ್ಚ್ 2ರಂದು ಜೈಪುರದಲ್ಲಿ ‘ಬಿಗ್ ಬಾಸ್ ಹಿಂದಿ ಸೀಸನ್ 12′ ಸ್ಪರ್ಧಿ ಸೋಮಿ ಖಾನ್ ಅವರನ್ನು ಮದುವೆ ಆಗಿದ್ದಾರೆ ಎಂದು ತಿಳಿದುಬಂದಿದೆ. ಈ ಮದುವೆಯಲ್ಲಿ ಆಪ್ತರು ಮಾತ್ರ ಹಾಜರಿದ್ದರು. ಸೋಮಿ ಅವರು ಸಬಾ ಖಾನ್ ಅವರ ಸಹೋದರಿ. ಕಳೆದ ಕೆಲವು ತಿಂಗಳುಗಳಿಂದ ಆದಿಲ್ ಹಾಗೂ ಸೋಮಿ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು ಎನ್ನಲಾಗಿದೆ.

ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ ಹಿಂದಿ ಸೀಸನ್ 12’ರಲ್ಲಿ ಸೋಮಿ ಮತ್ತು ಸಬಾ ಖಾನ್ ಇಬ್ಬರೂ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಈ ಇಬ್ಬರೂ ಸಹೋದರಿಯರು ಜೈಪುರದವರಾಗಿದ್ದು, ಸಿನಿಮಾದಲ್ಲಿ ಕೆಲಸ ಮಾಡಲು ಮುಂಬೈಗೆ ಬಂದಿದ್ದಾರೆ. ಸಬಾ ಮತ್ತು ಸೋಮಿ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ನಟಿಸಿದ್ದಾರೆ. ಕಿರುತೆರೆ ನಟಿ ದೀಪಿಕಾ ಕಕ್ಕರ್ ‘ಬಿಗ್ ಬಾಸ್ 12’ ಸೀಸನ್ ವಿಜೇತರಾಗಿದ್ದರು. ಬಿಗ್ ಬಾಸ್​​ನಲ್ಲಿ ಸೋಮಿ ಮತ್ತು ದೀಪಕ್ ಠಾಕೂರ್ ಜಗಳ ಆಗಾಗ ಚರ್ಚೆಗೆ ಗ್ರಾಸವಾಗಿತ್ತು. ಸೋಮಿ ಮತ್ತು ಆದಿಲ್ ಹೇಗೆ ಭೇಟಿಯಾದರು, ಇಬ್ಬರ ಮಧ್ಯೆ ಹೇಗೆ ಮೂಡಿತು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ರಾಖಿ ನೀಡಿದ ದೂರಿನ ಮೇರೆಗೆ ಆದಿಲ್ ಅವರನ್ನು ಪೊಲೀಸರು ಬಂಧಿಸಿದ್ದರು. ‘ನಾನು ಆದಿಲ್‌ನನ್ನು ಕ್ಷಮಿಸಿದ್ದೇನೆ. ಮತ್ತೆ ನನ್ನೊಂದಿಗೆ ವಾಸಿಸುವಂತೆ ಅವನ ಬಳಿ ವಿನಂತಿಸಿದ್ದೆ. ಆದರೆ ಅವನು ಕೇಳಲಿಲ್ಲ’ ಎಂದಿದ್ದರು ರಾಖಿ. ಆದಿಲ್ ಬಂಧನದ ಬಳಿಕ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಇದನ್ನೂ ಓದಿ: ರಾಖಿ ಮಲತಂದೆಯ ಬಗ್ಗೆ ನಿಮಗೆಷ್ಟು ಗೊತ್ತು? ವಿವಾದಗಳ ಕ್ವೀನ್ ಬಗ್ಗೆ ಇಲ್ಲಿದೆ ಮಾಹಿತಿ

ಆದಿಲ್ ಅವರನ್ನು ಮದುವೆಯಾಗಲು ರಾಖಿ ಇಸ್ಲಾಂಗೆ ಮತಾಂತರಗೊಂಡರು. ಮದುವೆಯ ಫೋಟೋಗಳು ವೈರಲ್ ಆದ ನಂತರ, ಆದಿಲ್ ಆರಂಭದಲ್ಲಿ ಅವರನ್ನು ಸ್ವೀಕರಿಸಲು ನಿರಾಕರಿಸಿದರು. ಅಂದಿನಿಂದ ರಾಖಿ ಮಾಧ್ಯಮಗಳ ಮುಂದೆ ಬಂದು ಆದಿಲ್ ವಿರುದ್ಧ ನಾನಾ ಆರೋಪಗಳನ್ನು ಮಾಡತೊಡಗಿದರು. ಆದಿಲ್ ವಿವಾಹೇತರ ಸಂಬಂಧ ಹೊಂದಿರುವುದಾಗಿಯೂ ರಾಖಿ ಹೇಳಿದ್ದಳು. ಹುಡುಗಿಯ ಹೆಸರು ತನು ಚಾಂಡೆಲ್ ಎಂದು ಅವರು ಬಹಿರಂಗಪಡಿಸಿದ್ದರು. ಈಗ ಅವರು ಆದಿಲ್ ಅವರ ಎರಡನೇ ಮದುವೆ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Thu, 7 March 24