ರಾಖಿ ಮಲತಂದೆಯ ಬಗ್ಗೆ ನಿಮಗೆಷ್ಟು ಗೊತ್ತು? ವಿವಾದಗಳ ಕ್ವೀನ್ ಬಗ್ಗೆ ಇಲ್ಲಿದೆ ಮಾಹಿತಿ

ಪತಿಯ ಮರಣದ ನಂತರ ರಾಖಿ ಸಾವಂತ್ ತಾಯಿ ಜಯಾಗೆ ಒಂಟಿತನ ಕಾಡಿತು. ಹೀಗಾಗಿ, ಅವರು ಮರುಮದುವೆಯಾಗಲು ನಿರ್ಧರಿಸಿದರು. ಜಯಾ ಅವರು ಪೊಲೀಸ್ ಪೇದೆ ಆನಂದ್ ಸಾವಂತ್ ಅವರನ್ನು ವಿವಾಹವಾದರು.

ರಾಖಿ ಮಲತಂದೆಯ ಬಗ್ಗೆ ನಿಮಗೆಷ್ಟು ಗೊತ್ತು? ವಿವಾದಗಳ ಕ್ವೀನ್ ಬಗ್ಗೆ ಇಲ್ಲಿದೆ ಮಾಹಿತಿ
ರಾಖಿ ಸಾವಂತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 25, 2023 | 12:58 PM

ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿದ್ದಾರೆ. ಅವರು ಮಾಡುವ ಎಡವಟ್ಟುಗಳು, ವಿವಾದಗಳು ಒಂದೆರಡಲ್ಲ. ಇದರಿಂದಾಗಿ ರಾಖಿ ಹಲವು ಬಾರಿ ಟ್ರೋಲ್​​ಗೆ ಒಳಗಾಗಿದ್ದಾರೆ. ರಾಖಿ ಅವರ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಕೆಲವು ತಿಂಗಳ ಹಿಂದೆ ರಾಖಿಯ ತಾಯಿ ಜಯಾ ತೀರಿಕೊಂಡರು. ರಾಖಿ ಸಾವಂತ್ ಮಲತಂದೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ರಾಖಿ ಸಾವಂತ್ ತಂದೆ ಮೃತಪಟ್ಟರು. ಇದಾದ ಬಳಿಕ ಜಯಾ ಮರು ಮದುವೆಯಾದರು. ಒಂದು ಮಾಹಿತಿಯ ಪ್ರಕಾರ ರಾಖಿ ಸಾವಂತ್ ಅವರ ತಂದೆ ಸುಮಾರು 15 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಪತಿಯ ಮರಣದ ನಂತರ ಜಯಾಗೆ ಒಂಟಿತನ ಕಾಡಿತು. ಹೀಗಾಗಿ, ಅವರು ಮರುಮದುವೆಯಾಗಲು ನಿರ್ಧರಿಸಿದರು. ಜಯಾ ಅವರು ಪೊಲೀಸ್ ಪೇದೆ ಆನಂದ್ ಸಾವಂತ್ ಅವರನ್ನು ವಿವಾಹವಾದರು.

ರಾಖಿ ತಾಯಿಯ ಎರಡನೇ ಮದುವೆಗೆ ಮೊದಲು, ರಾಖಿಯ ಹೆಸರು ನೀರೂ ಭೇದ ಎಂದಿತ್ತು. ತಾಯಿ ಮರುಮದುವೆಯಾದ ನಂತರ ತಮ್ಮ ಹೆಸರನ್ನು ರಾಖಿ ಬದಲಾಯಿಸಿಕೊಂಡರು. ರಾಖಿಯ ಮಲ ತಂದೆ ಕೂಡ ಹೃದಯಾಘಾತದಿಂದ ನಿಧನರಾದರು. ರಾಖಿ ಸಾವಂತ್ ಅವರ ತಾಯಿ ಜಯಾ ಭೇದಾ ಅವರು 28 ಜನವರಿ 2023ರಂದು ಜುಹುವಿನ ಕ್ರಿಟಿಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ರಾಖಿ ಸಾವಂತ್ ಅವರ ಒಡಹುಟ್ಟಿದವರ ಬಗ್ಗೆಯೂ ಕೆಲವೇ ಜನರಿಗೆ ತಿಳಿದಿದೆ. ರಾಖಿ ಸಾವಂತ್‌ಗೆ ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ ಇದ್ದಾರೆ. ರಾಖಿ ಸಾವಂತ್ ಅವರ ಸಹೋದರನ ಹೆಸರು ರಾಕೇಶ್ ಸಾವಂತ್ ಮತ್ತು ಅವರು ನಿರ್ದೇಶಕರಾಗಿದ್ದಾರೆ. ರಾಖಿಯ ತಂಗಿಯ ಹೆಸರು ಉಷಾ ಸಾವಂತ್. ಅವರು ಕೂಡ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಉಷಾ ಸಾವಂತ್ ಅವರು ಎಂದಿಗೂ ರಾಖಿ ಜೊತೆ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ: ‘ಗಂಡಸರ ಜೊತೆಗೂ ಆದಿಲ್​ ಖಾನ್​ ಲೈಂಗಿಕ ಕ್ರಿಯೆ ನಡೆಸುತ್ತಿದ್ದ’: ಗಂಡನ ಬಗ್ಗೆ ರಾಖಿ ಸಾವಂತ್ ಆರೋಪ

ರಾಖಿ ಸಾವಂತ್ ಮುಂಬೈನಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಇದರ ಬೆಲೆ ಕೋಟ್ಯಂತರ ರೂಪಾಯಿ ಇದೆ. ರಾಖಿ ಸಾವಂತ್ ಅವರ ಒಟ್ಟು ಆಸ್ತಿ 37 ಕೋಟಿ ರೂಪಾಯಿ ಎನ್ನಲಾಗಿದೆ. ರಾಖಿ ಸಾವಂತ್ ಬಳಿ ಒಳ್ಳೆಯ ಕಾರ್ ಕಲೆಕ್ಷನ್ ಕೂಡ ಇದೆ. ವಿವಾದಗಳ ನಡುವೆಯೂ ರಾಖಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಖಿ ಯಾವಾಗಲೂ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:53 pm, Sat, 25 November 23