AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕಂಬಳ ಕೆರೆ ಉದ್ಘಾಟಿಸಿದ ಅಶ್ವಿನಿ ಪುನಿತ್​ ರಾಜ್​​ಕುಮಾರ್

Bengaluru Kambala: ಬೆಂಗಳೂರು ಕಂಬಳ ಕೆರೆಗೆ ಯುವರತ್ನ ಡಾ. ಪುನಿತ್​​ ರಾಜಕುಮಾರ್​ ಪತ್ನಿ ಅಶ್ವಿನಿ ಪುನಿತ್​ ರಾಜಕುಮಾರ್ ಅವರು ಶನಿವಾರ (ನ.25) ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದರು.

ಬೆಂಗಳೂರು ಕಂಬಳ ಕೆರೆ ಉದ್ಘಾಟಿಸಿದ ಅಶ್ವಿನಿ ಪುನಿತ್​ ರಾಜ್​​ಕುಮಾರ್
ಬೆಂಗಳೂರು ಕಂಬಳಕ್ಕೆ ಅಶ್ವಿನಿ ಪುನಿತ್​ ರಾಜಕುಮಾರ್​ ಚಾಲನೆ
Follow us
Poornima Agali Nagaraj
| Updated By: ವಿವೇಕ ಬಿರಾದಾರ

Updated on:Nov 25, 2023 | 11:47 AM

ಬೆಂಗಳೂರು ನ.25: ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ (Bengaluru Kambala) ಪಂದ್ಯ ಆಯೋಜಿಸಲಾಗಿದೆ. ನಮ್ಮ ಕಂಬಳ, ಬೆಂಗಳೂರು ಕಂಬಳ ಎಂಬ ಹೆಸರಿನಲ್ಲಿ ಶನಿವಾರ ಮತ್ತು ಭಾನುವಾರ (ನ.25, 26) ಎರಡು ದಿನಗಳ ಕಾಲ ಪಂದ್ಯ ನಡೆಯಲಿದೆ. ಈ ಕಂಬಳ ಕೆರೆಗೆ ಯುವರತ್ನ ಡಾ. ಪುನಿತ್​​ ರಾಜ್​​ಕುಮಾರ್​ ಪತ್ನಿ ಅಶ್ವಿನಿ ಪುನಿತ್​ ರಾಜ್​​ಕುಮಾರ್ (Ashwini Puneeth Rajkumar)​​ ಅವರು ಶನಿವಾರ (ನ.25) ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಂಸದ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್​ ರೈ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೂ ಮೊದಲು ರಾಜ ಮಹರಾಜ ಹೆಸರಿನ ಕಂಬಳ ಕೆರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವ, ದೇವರ ಪ್ರಸಾದ ಕಂಬಳ ಕೆರೆಯ ನೀರಿಗೆ ಅರ್ಪಣೆ ಮಾಡಿ, ಯಾವುದೇ ಅಡ್ಡಿ-ಆತಂಕ ಎದುರಾಗದಂತೆ ಪ್ರಾರ್ಥನೆ ಸಲ್ಲಿಸಿ, ದೀಪ ಬೆಳಗಿಸಿ ಕಾಯಿ ಒಡೆದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಪಂದ್ಯಾವಳಿಯನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ ಮಾಡಿದ್ದಾರೆ. ಅಲ್ಲದೆ ಸಂಚಾರಿ ಪೊಲೀಸರು ಸಾರ್ವಜನಿಕರು ಕಟ್ಟುನಿಟ್ಟಾಗಿ ಟ್ರಾಫಿಕ್​ ನಿಯಮ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಂಬಳ ವೀಕ್ಷಣೆಗೆ ಬರುವ ಜನರು ಗೇಟ್ ನಂಬರ್ 1, 2, 3 ಹಾಗೂ 4ರ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Bengaluru Kambala: ಕೋಣ ತಾಟೆ ಕಂಬಳದಲ್ಲಿ ಒಂದು ಕೇಜಿಗೂ ಹೆಚ್ಚು ತೂಕದ ಚಿನ್ನದ ಪದಕ ಗೆದ್ದಿದೆ ಅಂದರೆ ನಂಬ್ತೀರಾ?

ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳು ಫನ್ ವರ್ಲ್ಡ್‌ ಕಡೆಯಿಂದ ಪ್ರವೇಶಿಸಬೇಕು. ಯಾವುದೇ ಟಿಕೆಟ್‌ ಇಲ್ಲದೆ ಉಚಿತವಾಗಿ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6:30 ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳ ಮೈದಾನಕ್ಕೆ ಆಗಮಿಸಲಿದ್ದಾರೆ.

ಬೆಂಗಳೂರು ಕಂಬಳದ ವಿಶೇಷತೆ

6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು. ಕಂಬಳದಲ್ಲಿ 200 ಜೋಡಿ ಕೋಣಗಳು ಭಾಗವಹಿಸುವ ಸಾಧ್ಯತೆ ಇದೆ. ಕಂಬಳದ ಮುಖ್ಯ ವೇದಿಕೆಗೆ ಪುನಿತ್ ರಾಜ್​ಕುಮಾರ್ ಹೆಸರು ಇಡಲಾಗಿದೆ. ಕಂಬಳದ ಟ್ರಾಕ್‌ (ಕರೆ)ಗೆ ರಾಜ ಮಹಾರಾಜ ಎಂದು ಹೆಸರು ಇಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ ಇರಲಿದೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ ಕೂಡ ಆಯೋಜಿಸಲಾಗಿದೆ.

ಇದನ್ನೂ ಓದಿ: Bengaluru Kambala: ಬೆಂಗಳೂರು ಕಂಬಳಕ್ಕೆ ತಾಟೆ ಎಂಟ್ರಿ, ಮೆಡಲ್ ಗ್ಯಾರಂಟಿ; ಈ ಕೋಣದ ವಿಶೇಷತೆ ಇಲ್ಲಿದೆ

ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ, ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ. ಇದು ಕಂಬಳದ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ. 228 ಜೋಡಿ ಕೋಣಗಳ ರಿಜಿಸ್ಟ್ರೇಷನ್ ಆಗಿದ್ದು, 200 ಜೋಡಿ‌ ಫೈನಲ್‌ ಆಗಿವೆ. ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ.

ಕೋಣಗಳ ಆರೈಕೆ

ಆಹಾರ, ನೀರಿನ ಬಗ್ಗೆ ಕೋಣಗಳ ಮಾಲೀಕರಿಂದ ವಿಶೇಷ ಕಾಳಜಿ ವಹಿಸಲಾಗುತ್ತದೆ. ಕೋಣಗಳಿಗೆ ಬೈಹುಲ್ಲು, ನೀರನ್ನು ಕೂಡ ಊರಿನಿಂದಲೇ ತರಲಾಗಿದೆ. ನೀರು ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ. ಹೀಗಾಗಿ ಊರಿನಿಂದಲೇ ಟ್ಯಾಂಕರ್ ಮೂಲಕ ನೀರು ತರಲಾಗಿದೆ. ಕಂಬಳದ ಸ್ಥಳಕ್ಕೆ ಪಶುವೈದ್ಯರು, ನಾಟಿ ವೈದ್ಯರೂ ಕೂಡ ಬಂದುದ್ದಾರೆ.

ಗೆದ್ದ ಕೋಣಗಳಿಗೆ ಬಹುಮಾನ

ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು

ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು

ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:42 am, Sat, 25 November 23

ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್