Bengaluru Kambala: ಬೆಂಗಳೂರು ಕಂಬಳಕ್ಕೆ ತಾಟೆ ಎಂಟ್ರಿ, ಮೆಡಲ್ ಗ್ಯಾರಂಟಿ; ಈ ಕೋಣದ ವಿಶೇಷತೆ ಇಲ್ಲಿದೆ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕಲರವಕ್ಕೆ ಕ್ಷಣಗಣನೆ ಶುರುವಾಗಿದೆ. ನವೆಂಬರ್ 25 ಮತ್ತು 26 ರಂದು ಕೋಣಗಳ ಓಟದ ಸ್ಪರ್ಧೆ ನಡೆಯಲಿದ್ದು, ಕಂಬಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಾವಳಿ ಭಾಗದಲ್ಲಿ ಪ್ರಸಿದ್ಧಿ ಪಡೆದ ತಾಟೆ ಎಂಬ ಹೆಸರಿನ ಕೋಣ ಕೂಡ ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲು ಎಂಟ್ರಿ ಕೊಟ್ಟಿದ್ದು, ತಾಟೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕಲರವಕ್ಕೆ ಕ್ಷಣಗಣನೆ ಶುರುವಾಗಿದ್ದು, ಕಂಬಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಾವಳಿ ಭಾಗದಲ್ಲಿ ಪ್ರಸಿದ್ಧಿ ಪಡೆದ ತಾಟೆ ಎಂಬ ಹೆಸರಿನ ಕೋಣ ಕೂಡ ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲು ಎಂಟ್ರಿ ಕೊಟ್ಟಿದ್ದು, ತಾಟೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.
1 / 7
ಕಂಬಳ ಕ್ರೀಡೆಗೆ ತಾಟೆ ಬರುತ್ತಾ ಎಂದು ಕೇಳುವವರೂ ಇದ್ದಾರೆ. ಕಂಬಳದ ಕೆರೆಗೆ ತಾಟೆ ಇಳಿದರೆ ಸಾಕು ಅಭಿಮಾನಿಗಳು, ವೀಕ್ಷಕರಲ್ಲಿನ ಉತ್ಸಾಹ ಸಹಜವಾಗಿ ಹೆಚ್ಚಾಗುತ್ತದೆ. ಏಕೆಂದರೆ, ಇದರ ಓಟ ಗತ್ತು, ರೇಂಜ್ ಬೇರೆಯೇ ಇದೆ.
2 / 7
ಇತ್ತೀಚೆಗೆ, ಕಂಬಳ ಕ್ರೀಡಾ ಪಟು ಶ್ರೀನಿವಾಸ್ ಅವರಿಗೆ ಹುಸೇನ್ ಬೋಲ್ಟ್ ಎಂಬ ಹೆಸರನ್ನು ತಂದಿದ್ದು ಕೂಡ ಇದೇ ತಾಟೆ.
3 / 7
ಎದುರಾಳಿಗಳನ್ನ ಓರೆಗಣ್ಣಿನಿಂದಲೇ ಹೆದರಿಸುವ ತಾಟೆ, ಓರೆಗಣ್ಣಿನಿಂದಲೇ ಹೆಸರುವಾಸಿಯಾಗಿದೆ.
4 / 7
ಎಲ್ಲಾ ಕೋಣಗಳು ಮುಂದೆ ಇರುವ ಗುರಿ ನೋಡಿ ಓಡಿದರೆ, ಈ ತಾಟೆ ಮಾತ್ರ ಪಕ್ಕದ ಕೆರೆಯಲ್ಲಿ ಓಡುವ ಪ್ರತಿಸ್ಪರ್ಧಿ ಕೋಣಗಳನ್ನು ನೋಡಿಕೊಂಡು ಓಡುತ್ತದೆ.
5 / 7
ಪಕ್ಕದ ಕೋಣಗಳು ಎಷ್ಟು ವೇಗವಾಗಿ ಓಡುತ್ತೋ ಅದನ್ನು ನೋಡಿಕೊಂಡು ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿ ಗುರಿ ತಲುಪುವುದು ತಾಟೆಯ ವಿಶೇಷತೆ. ಅಂದಹಾಗೆ, ಈ ತಾಟೆಗೆ ಅಭಿಮಾನಿಗಳ ಸಂಖ್ಯೆಗೆ ಏನು ಕಮ್ಮಿ ಇಲ್ಲ. ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ ಪೇಜ್ ಕೂಡ ಇದೆ.
6 / 7
ಕಂಬಳ ಕ್ರೀಡೆಗೆ ತಾಟೆ ಬಂತು ಎಂದರೆ ಸಾಕು, ಮೆಡಲ್ ಗ್ಯಾರಂಟಿ ಎಂದೇ ಹೇಳಲಾಗುತ್ತದೆ. 20 ಕಂಬಳಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ಈ ತಾಟೆಗೆ ಸದ್ಯ ವಯಸ್ಸಾಗಿದ್ದು, ಈ ಬಾರಿ ಮೆಡಲ್ ಹೊಡೆಯುತ್ತಾ ಎಂಬುದನ್ನು ನೋಡಬೇಕಿದೆ.