ಹೆಮ್ಮೆಯ ಕನ್ನಡಿಗ ಹುತಾತ್ಮ ಕ್ಯಾಪ್ಟನ್ ಎಂವಿ ಪ್ರಾಂಜಲ್ ಗೆ ಸಾರ್ವಜನಿಕರಿಂದ ಅಂತಿಮ ನಮನ

ಹೆಮ್ಮೆಯ ಕನ್ನಡಿಗ ಹುತಾತ್ಮ ಕ್ಯಾಪ್ಟನ್ ಎಂವಿ ಪ್ರಾಂಜಲ್ ಗೆ ಸಾರ್ವಜನಿಕರಿಂದ ಅಂತಿಮ ನಮನ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 25, 2023 | 11:00 AM

ರಜೌರಿಯಲ್ಲಿ ನಡೆದ ಎನ್ ಕೌಂಟರ್ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ಒಟ್ಟು ಐವರು ಭಾರತೀಯ ಯೋಧರು ವೀರಮರಣವನ್ನಪ್ಪಿದ್ದಾರೆ. ರಜೌರಿ ಹತ್ತಿರವಿರುವ ಅರಣ್ಯ ಪ್ರದೇಶವೊಂದರಲ್ಲಿ ಗುಂಡಿನ ಕಾಳಗ ನಡೆದಿದ್ದು ಇಬ್ಬರು ಉಗ್ರರನ್ನು ಭಾರತೀಯ ಜವಾನರು ಹೊಡೆದುರುಳಿಸಿದ್ದಾರೆ.

ಬೆಂಗಳೂರು: ಜಮ್ಮುವಿನ ರಜೌರಿಯಲ್ಲಿ ಭಯೋತ್ಪಾದಕರ (terrorists) ಗುಂಪನ್ನು ಸದೆಬಡಿಯುವಾಗ ವೀರಮರಣವನ್ನಪ್ಪಿದ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಎಂವಿ ಪ್ರಾಂಜಲ್ (Captain MV Pranjal) ಅವರಿಗೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು (pay homage) ನಗರದ ಹೊರವಲಯ ಜಿಗಣಿಯಲ್ಲಿನ ನಂದನವನ ಲೇಔಟ್ ನಲ್ಲಿರುವ ಹುತಾತ್ಮ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದ್ದು ಜನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸ್ಥಳದಲ್ಲಿ ಹಾಜರಿದ್ದು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಪ್ರಜ್ವಲ್ ಪಾರ್ಥೀವ ಶರೀರ ಜಿಗಣಿ ರಸ್ತೆಯಿಂದ ಹೊರಟು ಕೊಪ್ಪ ಗೇಟ್, ಬನ್ನೇರುಘಟ್ಟ ಮತ್ತು ಕೂಡ್ಲು ಗೇಟ್ ಮೂಲಕ ಹಾದು ಸೋಮಸುಂದರ ವಿದ್ಯುತ್ ಚಿತಾಗಾರ ತಲುಪಲಿದ್ದು ಸಕಲ ಸರ್ಕಾರೀ ಮತ್ತು ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ. ದೃಶ್ಯಗಳಲ್ಲಿ ಸೇನೆಯ ಅಧಿಕಾರಿಗಳು ಮತ್ತು ಜವಾನರು ಪ್ರಾಂಜಲ್ ಶರೀರವನ್ನು ಪೆಂಡಾಲ್ ನಲ್ಲಿ ತಂದಿರಿಸುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ