Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತಾಶರಾಗಿರುವ ವಿ ಸೋಮಣ್ಣ ಕುಟುಂಬದೊಂದಿಗೆ ಸಿದ್ದಗಂಗಾ ಮಠಕ್ಕೆ ಭೇಟಿ, ಶ್ರೀಗಳಿಂದ ಸಾಂತ್ವನ

ಹತಾಶರಾಗಿರುವ ವಿ ಸೋಮಣ್ಣ ಕುಟುಂಬದೊಂದಿಗೆ ಸಿದ್ದಗಂಗಾ ಮಠಕ್ಕೆ ಭೇಟಿ, ಶ್ರೀಗಳಿಂದ ಸಾಂತ್ವನ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 25, 2023 | 11:43 AM

ಸೋಮಣ್ಣ ಈಗ ಕವಲು ರಸ್ತೆಯಲ್ಲಿ ನಿಂತಿರುವಂತಿದೆ. ಬಿವೈ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿದ್ದು ಅವರಲ್ಲಿ ಬಹಳ ಬೇಸರ ಹುಟ್ಟಿಸಿದೆ. ಯಾಕೆಂದರೆ ಅವರು ಬಹಿರಂಗವಾಗೇ ರಾಜ್ಯಾಧ್ಯಕ್ಷನಾಗುವ ಬಯಕೆ ವ್ಯಕ್ತಪಡಿಸಿದ್ದರು. ತಮ್ಮ ಮುಂದಿನ ನಡೆಯ ಬಗ್ಗೆ ಅವರು ಮುಗುಮ್ಮಾಗಿದ್ದಾರೆ. ಜಿ ಪರಮೇಶ್ವರ್ ನಿನ್ನೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಸೋಮಣ್ಣ ಕಾಂಗ್ರೆಸ್ ಸೇರುವ ಸಾಧ್ಯತೆ ಬಗ್ಗೆ ಹೇಳಿದ್ದಾರೆ.

ತುಮಕೂರು: ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ವಿ ಸೋಮಣ್ಣ (V Somanna) ಇಂದು ಪತ್ನಿ ಸೈಲಜಾ ಹಾಗೂ ಮಗನೊಂದಿಗೆ ಸಿದ್ದಗಂಗಾ ಮಠಕ್ಕೆ (Siddaganga Mutt) ಭೇಟಿ ನೀಡಿ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದ ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿ (seer Sri Siddalinga Swamiji) ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮಠದಲ್ಲಿ ಸ್ವಾಮೀಜಿ ಅವರು ಸೋಮಣ್ಣ ಕುಟುಂಬವನ್ನು ಮಾಲೆ ಹಾಕಿ ಶಾಲು ಹೊದೆಸಿ ಸನ್ಮಾನಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಿಧಾನ ಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ ಬಳಿಕ ಸೋಮಣ್ಣ ಬಹಳ ನಿರಾಶರಾಗಿದ್ದರು. ತಮ್ಮ ನೋವನ್ನು ಅವರು ಸಿದ್ದಲಿಂಗ ಸ್ವಾಮೀಜಿ ಅವರಲ್ಲಿ ತೋಡಿಕೊಂಡರು. ಅಸಲಿಗೆ ಅವರಿಗೆ ಕೇವಲ ಬೆಂಗಳೂರಿನ ಗೋವಿಂದರಾಜ ನಗರದಿಂದ ಮಾತ್ರ ಸ್ಪರ್ಧಿಸುವ ಇಚ್ಛೆ ಇತ್ತು. ಆದರೆ ಹೈಕಮಾಂಡ್ ಆಗ್ರಹದ ಮೇರೆಗೆ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಸ್ವಾಮೀಜಿಯವರು ಸೋಮಣ್ಣರನ್ನು ಸಮಾಧಾನಪಡಿಸಿ ಕಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ