ದೇಶಕ್ಕಾಗಿ ಮಣಿದ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ತಂದೆ ಹೇಳಿದ್ದೇನು ಗೊತ್ತಾ?

ಜಮ್ಮುವಿನ ರಜೌರಿಯಲ್ಲಿ ಬೆಂಗಳೂರಿನ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾಗಿದ್ದು, ‘ಇಡೀ ದೇಶವೇ ಹೆಮ್ಮೆ ಪಡುವಂತ ಮಗ ಎನಿಸಿಕೊಂಡಿದ್ದಾನೆ. ಅವನ ಜೀವ ನಮ್ಮ ಜೊತೆ ಇಲ್ಲದೆ ಇರಬಹುದು, ಆತ್ಮ ನಮ್ಮ ಜೊತೆಯಲ್ಲಿದೆ. ನಾಡಿನ ಜೊತೆ, ದೇಶದ ಜೊತೆಗೆ ಆತನ ಆತ್ಮವಿದೆ ಎಂದು ಮೃತ ವೀರಯೋಧನ ತಂದೆ ಭಾವುಕ ನುಡಿಗಳನ್ನಾಡಿದ್ದಾರೆ.

ದೇಶಕ್ಕಾಗಿ ಮಣಿದ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ತಂದೆ ಹೇಳಿದ್ದೇನು ಗೊತ್ತಾ?
ಮೃತ ವೀರಯೋಧನ ತಂದೆಯ ಭಾವುಕ ಮಾತು
Follow us
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 24, 2023 | 2:48 PM

ಬೆಂಗಳೂರು, ನ.24: ‘ರಾಜ್ಯಕ್ಕೆ ಹಾಗೂ ದೇಶಕ್ಕೆ ಕ್ಯಾಪ್ಟನ್ ಎಂವಿ ಪ್ರಾಂಜಲ್(Captain MV Patajal) ಮಾದರಿ ಎಂದು ಭಾರತ ಮಾತೆಗೆ ಪ್ರಾಣವನ್ನು ಅರ್ಪಿಸಿದ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ತಂದೆ ವೆಂಕಟೇಶ್ ಹೇಳಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವಂತ ಮಗ ಎನಿಸಿಕೊಂಡಿದ್ದಾನೆ. ಅವನ ಜೀವ ನಮ್ಮ ಜೊತೆ ಇಲ್ಲದೆ ಇರಬಹುದು, ಆತ್ಮ ನಮ್ಮ ಜೊತೆಯಲ್ಲಿದೆ. ನಾಡಿನ ಜೊತೆ, ದೇಶದ ಜೊತೆಗೆ ಆತನ ಆತ್ಮವಿದೆ ಎಂದು ಮೃತ ವೀರಯೋಧನ ತಂದೆ ಭಾವುಕ ನುಡಿಗಳನ್ನಾಡಿದ್ದಾರೆ.

‘ಜಮ್ಮುವಿನಿಂದ ಫ್ಲೈಟ್ ಈಗಾಗಲೇ ಬಿಟ್ಟಿದೆ. ಡೆಲ್ಲಿ, ನಾಗಪುರ ಮೂಲಕ ಬೆಂಗಳೂರಿಗೆ ಆಗಮಿಸಲಿದೆ. ಆತ್ಮಿಯತೆ, ಪ್ರೀತಿ-ಗೌರವದಿಂದ ಬರಮಾಡಿಕೊಳ್ಳುತ್ತೇವೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನಗೆ ಕರೆದುಕೊಂಡು ಬರುತ್ತೇವೆ. ನಾಳೆ(ನ.25) 9.30 ಕ್ಕೆ ಕ್ಯಾಪ್ಟನ್ ಪ್ರಾಂಜಲ್​ಗೆ ಗಾಡ್ ಅಪ್ ಹಾನರ್ ಸಲ್ಲಿಸಲಾಗುತ್ತದೆ. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನಡೆಸುತ್ತೇವೆ. ಅಂತಿಮಯಾತ್ರೆಯ ಮೂಲಕ ಕರೆದುಕೊಂಡು ಹೋಗುತ್ತೇವೆ. ಪ್ರಾಂಜಲ್ ಆತ್ಮಕ್ಕೆ ಶಾಂತಿ ಸಿಗುವ ಹಾಗೆ ಪಂಚಭೂತಗಳಲ್ಲಿ ಲೀನ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ:ರಾಜೌರಿಯಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್, ನಂದನವನದಲ್ಲಿ ನೀರವ ಮೌನ

ಘಟನೆ ವಿವರ

ಜಮ್ಮುವಿನ ರಜೌರಿಯಲ್ಲಿ ಬುಧವಾರ (ನ.22) ದಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬೆಂಗಳೂರಿನ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾಗಿದ್ದಾರೆ. 66RR ಬೆಟಾಲಿಯನ್ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರು ಬಲಿಯಾಗಿದ್ದು, ಸದ್ಯ ಮನೆಯಲ್ಲಿ ಮಗನನ್ನು ಕಳೆದುಕೊಂಡು ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ನೋವಿನಲ್ಲಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ ಪ್ರಾಂಜಲ್, ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 63 ರಾಷ್ಟ್ರೀಯ ರೈಫಲ್ಸ್​ ಅನ್ನು ಲೀಡ್ ಕೂಡ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಜಮ್ಮು ಕಾಶ್ಮೀರಕ್ಕೆ ತೆರಳುವ ಮೊದಲು ಕ್ಯಾಪ್ಟನ್ ಪ್ರಾಂಜಲ್ ಅವರು ಬೆಂಗಳೂರಿನ ಅದಿತಿ ಎಂಬುವವರ ಜೊತೆ ವಿವಾಹವಾಗಿದ್ದರು. ಇತ್ತೀಚೆಗೆ ತಂದೆ ವೆಂಕಟೇಶ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ನಂದನವನದಲ್ಲಿ ನೆಲೆಸಿದ್ದರು. ಸದ್ಯ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅದಿತಿ, ಪತಿ‌ ನಿಧನ ಹಿನ್ನೆಲೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Fri, 24 November 23