Anupam Kher Birthday: 69ನೇ ವಯಸ್ಸಲ್ಲೂ ಸಖತ್ ಫಿಟ್ ಅನುಪಮ್ ಖೇರ್; ನಟನ ಆಸ್ತಿ ಎಷ್ಟು?
ಅನುಪಮ್ ಖೇರ್ ಅವರು ಫಿಟಸ್ನೆಸ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಅವರು ಅನೇಕರಿಗೆ ಮಾದರಿ. ಅವರು ನಿತ್ಯವೂ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಹೀಗಾಗಿ ಅವರು ಯಂಗ್ ಆಗಿ ಕಾಣಿಸುತ್ತಾರೆ. ಅವರು ಪೋಷಕ ಪಾತ್ರಗಳ ಮೂಲಕ ಅನೇಕರ ಗಮನ ಸೆಳೆದಿದ್ದಾರೆ. ಅನುಪಮ್ ಖೇರ್ ಅವರು ಪ್ರತಿ ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.
ನಟ ಅನುಪಮ್ ಖೇರ್ (Anupam Kher) ಅವರು ಇಂದು (ಮಾರ್ಚ್ 6) 69ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅನೇಕ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು 69ನೇ ವರ್ಷ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅವರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಟನೆಗಾಗಿ 2022ರಲ್ಲಿ ಸುದ್ದಿಯಲ್ಲಿದ್ದರು. ಇದಲ್ಲದೆ ಅವರು ತಮ್ಮ ಹೇಳಿಕೆಗಳಿಂದಲೂ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಅನುಪಮ್ ಖೇರ್ ಈ ಸ್ಥಾನಕ್ಕೆ ಬರಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಅವರು ಈಗ ಐಷಾರಾಮಿ ಬದುಕನ್ನು ನಡೆಸುತ್ತಿದ್ದಾರೆ.
ಅನುಪಮ್ ಖೇರ್ ಅವರು ಫಿಟಸ್ನೆಸ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಅವರು ಅನೇಕರಿಗೆ ಮಾದರಿ. ಅವರು ನಿತ್ಯವೂ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಹೀಗಾಗಿ ಅವರು ಯಂಗ್ ಆಗಿ ಕಾಣಿಸುತ್ತಾರೆ. ಅವರು ಪೋಷಕ ಪಾತ್ರಗಳ ಮೂಲಕ ಅನೇಕರ ಗಮನ ಸೆಳೆದಿದ್ದಾರೆ. ಅನುಪಮ್ ಖೇರ್ ಅವರು ಪ್ರತಿ ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ಅನುಪಮ್ ಖೇರ್ ಚಿತ್ರರಂಗದಿಂದ ದೊಡ್ಡ ಆದಾಯ ಗಳಿಸಿದ್ದಾರೆ. ತಮ್ಮ ಪ್ರತಿ ಚಿತ್ರಕ್ಕೂ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ಅನುಪಮ್ ಖೇರ್ ಅನೇಕ ಬ್ರಾಂಡ್‌ಗಳ ಪ್ರಚಾರ ಮಾಡಿ ಸಾಕಷ್ಟು ಸಂಪಾದಿಸುತ್ತಾರೆ. ವರದಿಗಳ ಪ್ರಕಾರ, ಅನುಪಮ್ ಖೇರ್ ಅವರ ಆಸ್ತಿ ಮೌಲ್ಯ ಸುಮಾರು 450 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಅನುಪಮ್ ಖೇರ್ ಮುಂಬೈನಲ್ಲಿ ಎರಡು ಬಂಗಲೆಗಳನ್ನು ಹೊಂದಿದ್ದಾರೆ. ಅವರ ಒಂದು ಬಂಗಲೆಯು ಅಂಧೇರಿಯಲ್ಲಿದೆ, ಇನ್ನೊಂದು ಮನೆ ಜುಹುದಲ್ಲಿದೆ. ಈ ಎರಡೂ ಬಂಗಲೆಗಳ ಬೆಲೆ 10 ಕೋಟಿ ರೂಪಾಯಿಗೂ ಹೆಚ್ಚು.
ಅನುಪಮ್ ನಟ ಮಾತ್ರ ಅಲ್ಲ ಅವರು ನಿರ್ಮಾಪಕರು ಮತ್ತು ನಿರ್ದೇಶಕರೂ ಹೌದು. ಇದಲ್ಲದೇ ಅನುಪಮ್ ಖೇರ್ ಹಲವು ವ್ಯವಹಾರ ಹೊಂದಿದ್ದಾರೆ. ಅನುಪಮ್ ಖೇರ್ ಬಳಿ ದುಬಾರಿ ಕಾರುಗಳು ಇವೆ. ಬಿಎಂಡಬ್ಲ್ಯು, ಸ್ಕಾರ್ಪಿಯೊದಂತಹ ಅನೇಕ ಕಾರುಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಅನುಪಮ್ ಒಂದು ಚಿತ್ರಕ್ಕೆ ಸುಮಾರು 3ರಿಂದ 5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ವರ್ಷಕ್ಕೆ ಅವರ ಗಳಿಕೆ 30 ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ.
ಇದನ್ನೂ ಓದಿ: ‘ಘೋಸ್ಟ್ ಸಿನಿಮಾದ ಹಿಂದಿ ರಿಲೀಸ್ ಕಥೆ ಏನು?’; ಶಿವಣ್ಣನಿಗೆ ಅನುಪಮ್ ಖೇರ್ ಪ್ರಶ್ನೆ
ಕೆಲವು ವರ್ಷಗಳಲ್ಲಿ ಅವರ ಗಳಿಕೆಯು ಶೇಕಡಾ 30 ರಷ್ಟು ಹೆಚ್ಚಾಗಿದೆ. ಸಿನಿಮಾಗಳ ಹೊರತಾಗಿ ಅನೇಕ ಬ್ರ್ಯಾಂಡ್‌ಗಳು ಪ್ರಚಾರ ಮತ್ತು ಖಾಸಗಿ ಹೂಡಿಕೆಗಳಿಂದ ಅವರು ಹಣ ಗಳಿಸುತ್ತಾರೆ. 2022ರಲ್ಲಿ ರಿಲೀಸ್ ಆದ ಅನುಪಮ್ ಖೇರ್ ಅವರ ‘ದಿ ಕಾಶ್ಮೀರ್ ಫೈಲ್ಸ್’ 250 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಸದ್ಯ ಅವರು ‘ವಿಜಯ್ 69’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಅವರ ವಯಸ್ಸೂ 69. ಈ ವರ್ಷ ಸಿನಿಮಾ ರಿಲೀಸ್ ಆಗಲಿದೆ ಅನ್ನೋದು ವಿಶೇಷ. ಈ ಬಗ್ಗೆ ನೆಟ್ಫ್ಲಿಕ್ಸ್ ಇತ್ತೀಚೆಗೆ ಘೋಷಣೆ ಮಾಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ