AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ವಿಡಿಯೋ ಲೀಕ್ ಪ್ರಕರಣ: ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು

Rakhi Sawanth: ತಮ್ಮ ಹಾಗೂ ಪತಿ ಆದಿಲ್ ದುರಾನಿಯ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳನ್ನು ಲೀಕ್ ಮಾಡಿರುವ ಪ್ರಕರಣದಲ್ಲಿ ರಾಖಿ ಸಾವಂತ್ ವಿಚಾರಣೆ ಎದುರಿಸುತ್ತಿದ್ದು, ರಾಖಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ರದ್ದು ಗೊಳಿಸಿದೆ.

ಖಾಸಗಿ ವಿಡಿಯೋ ಲೀಕ್ ಪ್ರಕರಣ: ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು
Follow us
ಮಂಜುನಾಥ ಸಿ.
|

Updated on: Jan 13, 2024 | 8:16 PM

ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್ (Rakhi Sawanth) ತಮ್ಮ ಇದೇ ಚಾಳಿಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಖಿ ತಮ್ಮ ಪತಿ ಮೈಸೂರಿನ ಆದಿಲ್ ದುರಾನಿ ವಿರುದ್ಧ ದೌರ್ಜನ್ಯ, ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ರಾಖಿ ಮಾಡಿದ ಆರೋಪಗಳಿಂದಾಗಿ ಆದಿಲ್ ದುರಾನಿ ಜೈಲು ವಾಸವನ್ನೂ ಅನುಭವಿಸಿದ್ದರು. ಇದೀಗ ಆದಿಲ್ ದುರಾನಿ, ರಾಖಿ ಸಾವಂತ್ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದು, ಪ್ರಕರಣ ಸಂಬಂಧ ತಮ್ಮನ್ನು ಬಂಧನಕ್ಕೆ ಒಳಪಡಿಸದಂತೆ ರಾಖಿ ಸಾವಂತ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದ್ದು, ರಾಖಿ ಸಾವಂತ್​ಗೆ ಬಂಧನ ಭೀತಿ ಎದುರಾಗಿದೆ.

ಆದಿಲ್ ದುರಾನಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ರಾಖಿ ಸಾವಂತ್, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್​ಗಳಿಗೆ ಸಂದರ್ಶನ ನೀಡಿದ್ದರು. ಒಂದು ಚಾನೆಲ್​ ಜೊತೆ ಮಾತನಾಡುತ್ತಿರುವಾಗ ತಮ್ಮ ಹಾಗೂ ಆದಿಲ್​ನ ಖಾಸಗಿ ಚಿತ್ರಗಳು, ವಿಡಿಯೋಗಳನ್ನು ಕ್ಯಾಮೆರಾಕ್ಕೆ ರಾಖಿ ಸಾವಂತ್ ತೋರಿಸಿದ್ದರು. ಅಲ್ಲದೆ ತಮ್ಮ ಹಾಗೂ ಆದಿಲ್​ರ ಖಾಸಗಿ ವಿಡಿಯೋಗಳನ್ನು ಕೆಲವು ವಾಟ್ಸ್​ಆಫ್​ ಗ್ರೂಪ್​ಗಳಲ್ಲಿ ಸಹ ಶೇರ್ ಮಾಡಿದ್ದರು.

ಇದನ್ನೂ ಓದಿ:ರಾಖಿ ಸಾವಂತ್​-ಆದಿಲ್​ ಖಾನ್​ಗೆ ನಿಖಾ ಮಾಡಿಸಿದ್ದು ನಕಲಿ ಮೌಲಾನಾ?

ಬಳಿಕ ಆದಿಲ್ ದುರಾನಿ, ತಮ್ಮ ಖಾಸಗಿ ಚಿತ್ರ ಹಾಗೂ ವಿಡಿಯೋಗಳನ್ನು ಲೀಕ್ ಮಾಡಿರುವ ರಾಖಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಖಿ ಸಾವಂತ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಆರೋಪಿ ರಾಖಿ ಸಾವಂತ್ ಅವರಿಂದ ಕಳಿಸಲ್ಪಟ್ಟಿರುವ ಅಥವಾ ಪ್ರಕಟಿಸಲಾಗಿರುವ ವಿಡಿಯೋಗಳು ಕೇವಲ ಅಶ್ಲೀಲವಲ್ಲ ಆದರೆ ಲೈಂಗಿಕವಾಗಿ ದೌರ್ಜನ್ಯವೂ ಆಗಿದೆ. ಘಟನೆಯ ಸತ್ಯಗಳು, ಆರೋಪಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ, ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ತಿಳಿಸಿ ಅರ್ಜಿಯನ್ನು ರದ್ದು ಮಾಡಿದೆ.

ಮೈಸೂರಿನ ಉದ್ಯಮಿ ಆದಿಲ್ ದುರಾನಿ ಹಾಗೂ ರಾಖಿ ಸಾವಂತ್ 2021ರಲ್ಲಿ ವಿವಾಹವಾಗಿದ್ದರು. ವಿವಾಹವಾದಾಗ ಇಬ್ಬರೂ ಆರಾಮವಾಗಿಯೇ ಇದ್ದರು. ಆದರೆ ಬಳಿಕ ರಾಖಿ ಸಾವಂತ್, ತಮ್ಮ ಪತಿ ಆದಿಲ್ ಬಗ್ಗೆ ಹಲವು ಆರೋಪಗಳನ್ನು ಮಾಡಲು ಆರಂಭಿಸಿದರು. ಲೈಂಗಿಕ ದೌರ್ಜನ್ಯ, ಮೋಸ, ಹಣ ವಂಚನೆ, ಹಿಂಸೆ ಇನ್ನೂ ಕೆಲವು ಆರೋಪಗಳನ್ನು ರಾಖಿ ಮಾಡಿದ್ದರು. ಮೈಸೂರಿನ ಆದಿಲ್ ನಿವಾಸದ ಮುಂದೆ ಪ್ರತಿಭಟನೆಯನ್ನು ಸಹ ರಾಖಿ ಸಾವಂತ್ ಮಾಡಿದ್ದರು. ರಾಖಿ ಸಾವಂತ್ ನೀಡಿದ್ದ ದೂರಿನ ಆಧಾರದಲ್ಲಿ ಆದಿಲ್ ಜೈಲು ವಾಸವನ್ನೂ ಅನುಭವಿಸಬೇಕಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು