ಕಂಗನಾ ಜೊತೆ ಇರೋ ಆ ಮಿಸ್ಟರಿ ಮ್ಯಾನ್ ಯಾರು? ಮದುವೆ ಬಗ್ಗೆ ಮೂಡಿದೆ ಚರ್ಚೆ
ಕಳೆದ ವರ್ಷ ಅಂದರೆ 2023ರ ಸಂದರ್ಶನವೊಂದರಲ್ಲಿ ಕಂಗನಾ ಮದುವೆ ಬಗ್ಗೆ ಮಾತನಾಡಿದ್ದರು. ‘ಎಲ್ಲದಕ್ಕೂ ಒಂದು ಸಮಯ ಅನ್ನೋದು ಬರಬೇಕು. ಆ ಸಮಯ ಬರುತ್ತದೆ. ಅದಕ್ಕಾಗಿ ಕಾಯಬೇಕು’ ಎಂದು ಕಂಗನಾ ಹೇಳಿದ್ದರು.
ಕಂಗನಾ ರಣಾವತ್ (Kangana Ranaut) ಮತ್ತು ವಿವಾದಕ್ಕೆ ಎಲ್ಲಿಲ್ಲದ ನಂಟು. ಬೋಲ್ಡ್ ಸ್ಟೇಟ್ಮೆಂಟ್ ಕೊಟ್ಟು ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಈ ಬಾರಿಯೂ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಇದಕ್ಕೆ ಕಾರಣ ಕೊಂಚ ಭಿನ್ನವಾಗಿದೆ. ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಕಂಗನಾ ಮದುವೆ ಯಾವಾಗ? ಅವರ ಬಾಯ್ಫ್ರೆಂಡ್ ಯಾರು ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿದೆ. ಕಂಗನಾ ರಣಾವತ್ ಇತ್ತೀಚೆಗೆ ‘ಮಿಸ್ಟರಿ ಮ್ಯಾನ್’ ಜೊತೆ ಕಾಣಿಸಿಕೊಂಡಿದ್ದಾರೆ. ಸಲೂನ್‌ನಿಂದ ಬರುವಾಗ ಕಂಗನಾ ವ್ಯಕ್ತಿಯೊಬ್ಬರ ಕೈ ಹಿಡಿದುಕೊಂಡು ಹೊರಬರುತ್ತಿರುವ ಫೋಟೋ ವೈರಲ್ ಆಗಿದೆ. ಇಬ್ಬರೂ ಪಾಪರಾಜಿಗಳಿಗೆ ಪೋಸ್ ಕೊಟ್ಟು ಮುಂದೆ ಸಾಗಿದ್ದಾರೆ.
ಆ ಬಳಿಕ ವಿವಿಧ ಚರ್ಚೆಗಳು ಪ್ರಾರಂಭವಾಗಿವೆ. ‘ಕಂಗನಾ ಜೊತೆ ಕಾಣಿಸಿಕೊಂಡಿರುವ ಆ ವ್ಯಕ್ತಿ ಯಾರು’ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಅವರನ್ನು ಕಂಗನಾ ಮದುವೆಯಾಗಲಿದ್ದಾರಾ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ಕೆಲವು ನೆಟ್ಟಿಗರು ಈ ವ್ಯಕ್ತಿಯನ್ನು ನಟ ಹೃತಿಕ್ ರೋಷನ್ ಅವರಿಗೆ ಹೋಲಿಸಿದ್ದಾರೆ. ‘ಕೊನೆಗೂ ಹೃತಿಕ್ ಅವರಂತೆ ಕಾಣುವ ವ್ಯಕ್ತಿ ಕಂಗನಾಗೆ ಸಿಕ್ಕಿದ್ದಾರೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಕಂಗನಾ ಮದುವೆ ಆಗಲಿ ಎಂದು ಕೆಲವರು ಆಶಿಸಿದ್ದಾರೆ.
ಮದುವೆ ಬಗ್ಗೆ ಕಂಗನಾ ಹೇಳಿದ್ದೇನು?
ಕಳೆದ ವರ್ಷ ಅಂದರೆ 2023ರ ಸಂದರ್ಶನವೊಂದರಲ್ಲಿ ಕಂಗನಾ ಮದುವೆ ಬಗ್ಗೆ ಮಾತನಾಡಿದ್ದರು. ‘ಎಲ್ಲದಕ್ಕೂ ಒಂದು ಸಮಯ ಅನ್ನೋದು ಬರಬೇಕು. ಆ ಸಮಯ ಬರುತ್ತದೆ. ಅದಕ್ಕಾಗಿ ಕಾಯಬೇಕು’ ಎಂದು ಕಂಗನಾ ಹೇಳಿದ್ದರು. ಮದುವೆ ಬಗ್ಗೆ ಅವರು ತಮ್ಮದೇ ಆದ ಕನಸು ಹೊಂದಿದ್ದಾರೆ.
ಇದನ್ನೂ ಓದಿ: ‘ಬಿಲ್ಕಿಸ್ ಬಾನು ಬಗ್ಗೆ ಸ್ಕ್ರಿಪ್ಟ್ ಸಿದ್ಧವಿದೆ, ಆದರೆ ಸಿನಿಮಾ ಮಾಡೋಕೆ ಆಗುತ್ತಿಲ್ಲ’: ಕಂಗನಾ ರಣಾವತ್
ಕಂಗನಾ ಸಿನಿಮಾ ಬಗ್ಗೆ ಮಾತನಾಡುವುದಾದರೆ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಕಳೆದ ವರ್ಷ ರಿಲೀಸ್ ಆದ ‘ತೇಜಸ್’ ಹಾಗೂ ‘ಚಂದ್ರಮುಖಿ 2’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹಿನಾಯವಾಗಿ ಸೋತವು. ಆದರೂ ಕಂಗನಾ ದೃತಿಗೆಟ್ಟಿಲ್ಲ. ಪ್ರಸ್ತುತ ತಮ್ಮ ಹೊಸ ಚಿತ್ರ ‘ಎಮರ್ಜೆನ್ಸಿ’ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಟಿಸುವುದು ಮಾತ್ರವಲ್ಲದೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೊದಲು ಚಿತ್ರವನ್ನು ನವೆಂಬರ್ 2023ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಅದು ಮುಂದಕ್ಕೆ ಹೋಗಿತ್ತು. ಈ ವರ್ಷ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಡೆ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಬಗ್ಗೆ ಇದೆ. ಕಂಗನಾ ಇಂದಿರಾ ಗಾಂಧಿ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ