ವಿಲನ್ ಆದ ಬಾಲಿವುಡ್ನ ಮತ್ತೊಬ್ಬ ನಾಯಕ ನಟ
Bollywood: ಬಾಲಿವುಡ್ನ ಹಲವು ನಾಯಕ ನಟರು ಈಗ ಒಬ್ಬರ ಹಿಂದೊಬ್ಬರು ವಿಲನ್ಗಳಾಗಿ ಮರುಎಂಟ್ರಿ ನೀಡುತ್ತಿದ್ದಾರೆ. ಸಂಜಯ್ ದತ್, ಸೈಫ್ ಅಲಿ ಖಾನ್, ಬಾಬಿ ಡಿಯೋಲ್, ಇಮ್ರಾನ್ ಹಶ್ಮಿ ಬಳಿಕ ಈಗ ಮತ್ತೊಬ್ಬ ನಾಯಕ ನಟ ವಿಲನ್ ಆಗುತ್ತಿದ್ದಾರೆ.
ಹೀರೋಗಳಾಗಿ ಒಂದು ಸಮಯದಲ್ಲಿ ಯಶಸ್ಸು ಗಳಿಸಿ ಬಳಿಕ ಆರಕ್ಕೇರಲಾಗದೆ, ಮೂರಕ್ಕೂ ಇಳಿಯದೆ ಸಾಗುತ್ತಿರುವ ನಾಯಕ ನಟರು ಈಗ ವಿಲನ್ಗಳಾಗಿ ಎಂಟ್ರಿ ಕೊಡುತ್ತಿದ್ದಾರೆ. ಹಾಗೂ ವಿಲನ್ಗಳಾಗಿ ಯಶಸ್ಸು ಸಹ ಗಳಿಸುತ್ತಿದ್ದಾರೆ. ಅದರಲ್ಲಿಯೂ ಬಾಲಿವುಡ್ನ ನಾಯಕ ನಟರು ಸಾಲಾಗಿ ವಿಲನ್ಗಳಾಗುತ್ತಿದ್ದಾರೆ. ಸಂಜಯ್ ದತ್ (Sanjay Dutt), ಸೈಫ್ ಅಲಿ ಖಾನ್, ಇಮ್ರಾನ್ ಹಶ್ಮಿ, ಬಾಬಿ ಡಿಯೋಲ್ ಅವರುಗಳು ವಿಲನ್ಗಳಾಗಿ ಭಾರಿ ಯಶಸ್ಸು ಇತ್ತೀಚೆಗೆ ಗಳಿಸಿದ್ದಾರೆ. ಇದೀಗ ಇದೇ ಸಾಲಿಗೆ ಹೊಸ ಬಾಲಿವುಡ್ ನಾಯಕ ನಟರೊಬ್ಬರು ಸೇರಿಕೊಂಡಿದ್ದಾರೆ.
ರಿತೇಶ್ ದೇಶ್ಮುಖ್, ಬಾಲಿವುಡ್ನ ಆರಕ್ಕೇರದ-ಮೂರಕ್ಕಿಳಿದ ನಾಯಕ ನಟ. ಕಾಮಿಡಿ, ರೊಮ್ಯಾಂಟಿಕ್, ಅಡಲ್ಟ್ ಕಾಮಿಡಿ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ರಿತೇಶ್ ದೇಶ್ಮುಖ್ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ಇದ್ದಾರಾದರೂ ದೊಡ್ಡ ಯಶಸ್ಸನ್ನು ಈ ವರೆಗೆ ಕಂಡಿಲ್ಲ. ಹಾಗೆಂದು ಅವಕಾಶವನ್ನು ಪೂರ್ಣವಾಗಿ ಕಳೆದುಕೊಂಡಿರಲಿಲ್ಲ. ಆದರೆ ಇದೀಗ ರಿತೇಶ್ ದೇಶ್ಮುಖ್ ವಿಲನ್ ಆಗುವ ಮೂಲಕ ತಾವೂ ಸಹ ಯಶಸ್ಸಿನ ಸವಿ ಸವಿಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್
ರಿತೇಶ್ ದೇಶ್ಮುಖ್, ಬಾಲಿವುಡ್ನ ಸ್ಟಾರ್ ನಟರ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲಿದ್ದಾರೆ. ಇತ್ತೀಚೆಗಷ್ಟೆ ಘೋಷಣೆ ಆಗಿರುವ ‘ರೇಡ್ 2’ ಸಿನಿಮಾದಲ್ಲಿ ರಿತೇಶ್ ದೇಶ್ಮುಖ್ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ. ಸಿನಿಮಾದಲ್ಲಿ ನಾಯಕನಾಗಿ ಅಜಯ್ ದೇವಗನ್ ನಟಿಸಲಿದ್ದಾರೆ. ‘ರೇಡ್’ ಸಿನಿಮಾ ಕೆಲವು ವರ್ಷಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ‘ರೇಡ್’ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅನುಪಮ್ ಖೇರ್ ನಟಿಸಿದ್ದರು. ಈಗ ‘ರೇಡ್ 2’ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ.
ರಿತೇಶ್ ದೇಶ್ಮುಖ್ ಇದೇ ಮೊದಲ ಬಾರಿಗೆ ಖಳನಟನಾಗಿ ನಟಿಸಿರುವುದೇನಲ್ಲ. ಈ ಹಿಂದೆ ‘ವಿಲನ್’ ಹೆಸರಿನ ಸಿನಿಮಾದಲ್ಲಿ ಅವರು ವಿಲನ್ ಆಗಿ ನಟಿಸಿದ್ದರು. ಆದರೆ ಆ ಸಿನಿಮಾದಲ್ಲಿ ಅವರ ಪಾತ್ರ ಸೈಕೋ ರೀತಿಯ ಕೊಲೆಗಡುಕನಾದರೂ ಸಿನಿಮಾದ ಅಂತ್ಯದಲ್ಲಿ ಪ್ರೇಕ್ಷಕರು ಅವರ ಪಾತ್ರದೆಡೆ ಸಿಂಪತಿ ತೋರಿಸುವ ರೀತಿಯ ದೃಶ್ಯಗಳಿದ್ದವು. ಹಾಗಾಗಿ ಅದನ್ನು ಪರಿಪೂರ್ಣ ಖಳನಾಯಕ ಎನ್ನಲಾಗುತ್ತಿರಲಿಲ್ಲ. ಆದರೆ ಈಗ ಪಕ್ಕಾ ವಿಲನ್ ಆಗಲು ರಿತೇಶ್ ಮುಂದಾಗಿದ್ದಾರೆ.
ರಿತೇಶ್ ದೇಶ್ಮುಖ್ ಸುಮಾರು ಎರಡು ದಶಕದ ತಮ್ಮ ಸಿನಿ ಜರ್ನಿಯಲ್ಲಿ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಿಗೆ ಬ್ರ್ಯಾಂಡ್ ಆಗಿದ್ದರೂ ಸಹ ಅವುಗಳ ಹೊರತುಪಡಿಸಿ ಹಲವು ಗಂಭೀರ ಪಾತ್ರಗಳಲ್ಲಿಯೂ ರಿತೇಶ್ ನಟಿಸಿದ್ದಾರೆ. ಈಗ ವಿಲನ್ ಪಾತ್ರದಲ್ಲಿ ಹೇಗೆ ನಟಿಸಲಿದ್ದಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ