ಸಂಜಯ್ ದತ್ ಮೊದಲ ಮಗಳ ಬಗ್ಗೆ ನಿಮಗೆಷ್ಟು ಗೊತ್ತು? ನಟನೆಯಿಂದ ದೂರವೇ ಇದ್ದಾರೆ ಇವರು..
ಸಂಜಯ್ ದತ್ ಹಾಗೂ ರಿಚಾ ಶರ್ಮಾ 1987ರಲ್ಲಿ ಮದುವೆ ಆದರು. ಒಂದು ವರ್ಷಕ್ಕೆ ತ್ರಿಶಾಲಾ ಜನಿಸಿದರು. 1996ರಲ್ಲಿ ರಿಚಾ ಬ್ರೇನ್ ಟ್ಯೂಮರ್ನಿಂದ ಮೃತಪಟ್ಟರು. ಆಗ ತ್ರಿಶಾಲಾಗೆ 8 ವರ್ಷ ವಯಸ್ಸು.

ನಟ ಸಂಜಯ್ ದತ್ (Sanjay Dutt) ಹಾಗೂ ನಟನ ಮೊದಲ ಪತ್ನಿ ರಿಚಾ ಶರ್ಮಾ ಅವರ ಮಗಳು ತ್ರಿಶಾಲಾ ಅವರು ಸಿನಿಮಾ ರಂಗದಿಂದ ದೂರವೇ ಇದ್ದಾರೆ. ಅವರಿಗೆ ನಟನೆ ಇಷ್ಟ ಇರಲಿಲ್ಲ. ಒಂದೊಮ್ಮೆ ಇಷ್ಟಪಟ್ಟಿದ್ದರೆ ಅವರು ಈಗಾಗಲೇ ಹೀರೋಯಿನ್ ಆಗಿ ಮಿಂಚುತ್ತಿದ್ದರೇನೋ. ಅವರು ಬೇರೆಯದೇ ಕ್ಷೇತ್ರ ಆಯ್ಕೆ ಮಾಡಿಕೊಂಡರು. ತ್ರಿಶಾಲಾ ಅಮೆರಿಕದಲ್ಲಿ ಮನೋವೈದ್ಯೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತ್ರಿಶಾಲಾ ಅಮೆರಿಕದಲ್ಲಿ ತಮ್ಮ ಅಜ್ಜಿಯರೊಂದಿಗೆ ವಾಸಿಸುತ್ತಿದ್ದಾರೆ. ಈಗ ಅವರು ಮಗು ಹೊಂದುವ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.
ಸಂಜಯ್ ದತ್ ಹಾಗೂ ರಿಚಾ ಶರ್ಮಾ 1987ರಲ್ಲಿ ಮದುವೆ ಆದರು. ಒಂದು ವರ್ಷಕ್ಕೆ ತ್ರಿಶಾಲಾ ಜನಿಸಿದರು. 1996ರಲ್ಲಿ ರಿಚಾ ಬ್ರೇನ್ ಟ್ಯೂಮರ್ನಿಂದ ಮೃತಪಟ್ಟರು. ಆಗ ತ್ರಿಶಾಲಾಗೆ 8 ವರ್ಷ ವಯಸ್ಸು. ನಂತರ ತ್ರಿಶಾಲಾ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಿದರು. ಸೈಕಾಲಜಿ ಓದಿ ಮನೋವೈದ್ಯೆ ಆದರು. ಈಗ ಅಮೆರಿಕದಲ್ಲಿ ಅವರು ಸೆಟಲ್ ಆಗಿದ್ದಾರೆ. 2019ರಲ್ಲಿ ತ್ರಿಶಾಲಾ ಅವರ ಬಾಯ್ಫ್ರೆಂಡ್ ಮೃತಪಟ್ಟನಂತೆ. ಇದು ತ್ರಿಶಾಲಾ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಅವರು ಉದ್ಯೋಗವನ್ನು ತೊರೆದರು.
ತ್ರಿಶಾಲಾ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ‘ಆಸ್ಕ್ ಮೀ’ ಸೆಷನ್ ನಡೆಸಿದ್ದರು. ಈ ವೇಳೆ ಅಭಿಮಾನಿಗಳ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಅಭಿಮಾನಿಯೊಬ್ಬರು ತ್ರಿಶಾಲಾ ಬಳಿ ಪ್ರೆಗ್ನೆನ್ಸಿ ವಿಚಾರದ ಬಗ್ಗೆ ಕೇಳಿದ್ದಾರೆ. ‘ನೀವು ಯಾವಾಗ ಮಗುವಿಗೆ ಜನ್ಮ ನೀಡುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.
‘ನನಗೆ ಮಗು ಬೇಕು. ದೇವರಿಗೆ ನನ್ನ ಬಗ್ಗೆ ಏನಾದರೂ ಯೋಜನೆ ಇದ್ದರೆ, ನಾನು ಮುಂದೊಂದು ದಿನ ತಾಯಿಯಾಗಲು ಇಷ್ಟಪಡುತ್ತೇನೆ. ನನ್ನ ಭವಿಷ್ಯದ ಮಕ್ಕಳ ಹೆಸರನ್ನು ಸಹ ನಾನೇ ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ. ತ್ರಿಶಾಲಾಗೆ ಇನ್ನೂ ಮದುವೆ ಆಗಿಲ್ಲ. ‘ಜಂಟಲ್ಮ್ಯಾನ್ ಸಿಕ್ಕಾಗ ನಾನು ಮದುವೆ ಆಗುತ್ತೇನೆ’ ಎಂದು ಅವರು ಹೇಳಿದ್ದರು.
ತ್ರಿಶಾಲಾ ಬಣ್ಣದ ಲೋಕದಿಂದ ದೂರ ಇದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ನಟಿ ಅಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಅವರು ತಮ್ಮ ಜೀವನದ ಹಲವು ಪ್ರಮುಖ ವಿಷಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಹಿಂದಿನ ಜನ್ಮದಲ್ಲಿ ರಾಜನಾಗಿದ್ದ ಸಂಜಯ್ ದತ್ ಪತ್ನಿಯನ್ನು ಕೊಂದಿದ್ದರು
ಸಂಜಯ್ ದತ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ. ‘ಕೆಜಿಎಫ್ 2’ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಅವರಿಗೆ ದಕ್ಷಿಣದಲ್ಲಿ ಖ್ಯಾತಿ ಹೆಚ್ಚಿದೆ. ಅವರು ಕನ್ನಡದ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ ಇದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ