ಹೊಸ ಇಮೇಜ್ ಪಡೆಯಲು ಮುಂದಾದ ಇಮ್ರಾನ್ ಹಷ್ಮಿ; ‘ಡಾನ್ 3’ ಚಿತ್ರದಲ್ಲಿ ನೆಗೆಟಿವ್ ಪಾತ್ರ?

ಹಿಂದೆಂದೂ ಕಾಣಿಸದ ಅವತಾರದಲ್ಲಿ ಇಮ್ರಾನ್ ಹಷ್ಮಿ ನಟಿಸಿದ್ದರು. ಈಗ ‘ಡಾನ್ 3’ ಚಿತ್ರದಲ್ಲೂ ಅವರು ವಿಲನ್ ರೋಲ್ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರೋದು ಒಂದು ಭೇಟಿ.

ಹೊಸ ಇಮೇಜ್ ಪಡೆಯಲು ಮುಂದಾದ ಇಮ್ರಾನ್ ಹಷ್ಮಿ; ‘ಡಾನ್ 3’ ಚಿತ್ರದಲ್ಲಿ ನೆಗೆಟಿವ್ ಪಾತ್ರ?
ಇಮ್ರಾನ್ ಹಷ್ಮಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 10, 2024 | 1:23 PM

ಹಿಂದಿ ಸಿನಿಮಾಗಳಲ್ಲಿ ಬರುವ ರೊಮ್ಯಾಂಟಿಕ್ ದೃಶ್ಯ, ಕಿಸ್ಸಿಂಗ್ ದೃಶ್ಯದ ಚರ್ಚೆ ಬಂದಾಗ ಅಲ್ಲಿ ಇಮ್ರಾನ್ ಹಷ್ಮಿ (Emraan Hashmi) ಹೆಸರು ಇರುತ್ತಿತ್ತು. ಅವರು ಮಾಡುತ್ತಿದ್ದ ಪಾತ್ರಗಳೆಲ್ಲವೂ ಅದೇ ರೀತಿ ಇರುತ್ತಿತ್ತು. ಆದರೆ, ಈಗ ಅವರು ತಮ್ಮ ತಮ್ಮ ಇಮೇಜ್​ ಸಂಪೂರ್ಣವಾಗಿ ಬದಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಚಿತ್ರರಂಗದಲ್ಲಿ ಅವರು ವಿಲನ್ ಪಾತ್ರ ಮಾಡುವತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ‘ಟೈಗರ್ 3’ ಚಿತ್ರದಲ್ಲಿ ವಿಲನ್ ಆಗಿ ಮಿಂಚಿದ್ದ ಇಮ್ರಾನ್, ಈಗ ‘ಡಾನ್ 3’ ಚಿತ್ರದಲ್ಲೂ ನೆಗೆಟಿವ್ ಪಾತ್ರ ಮಾಡಲು ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಇಮ್ರಾನ್ ಅವರು ಮಾಜಿ ಐಎಸ್​ಐ ಏಜೆಂಟ್ ಪಾತ್ರ ಮಾಡಿದ್ದರು. ಅವರ ನಟನೆ ಎಲ್ಲರ ಮೆಚ್ಚುಗೆ ಪಡೆಯಿತು. ಹಿಂದೆಂದೂ ಕಾಣಿಸದ ಅವತಾರದಲ್ಲಿ ಇಮ್ರಾನ್ ಹಷ್ಮಿ ನಟಿಸಿದ್ದರು. ಈಗ ‘ಡಾನ್ 3’ ಚಿತ್ರದಲ್ಲೂ ಅವರು ವಿಲನ್ ರೋಲ್ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರೋದು ಒಂದು ಭೇಟಿ.

‘ಟೈಗರ್ 3’ ಚಿತ್ರವನ್ನು ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ಮನೆಗೆ ಇಮ್ರಾನ್ ಹಷ್ಮಿ ಭೇಟಿ ನೀಡಿದ್ದಾರೆ. ಈ ಭೇಟಿ ವೇಳೆ ‘ಡಾನ್ 3’ ಬಗ್ಗೆ ಚರ್ಚೆಗಳು ನಡೆದಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ‘ಡಾನ್ ಕಡೆಯಿಂದ ಒಂದೊಳ್ಳೆಯ ಸುದ್ದಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಸದ್ಯ ಎಲ್ಲವೂ ಅಂತೆಕಂತೆ ಹಂತದಲ್ಲಿವೆ. ಚಿತ್ರತಂಡದವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ.

ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳಲ್ಲಿ ಶಾರುಖ್ ಖಾನ್ ಅವರು ಡಾನ್ ಪಾತ್ರ ಮಾಡಿದ್ದರು. ಈಗ ಸರಣಿಯ ಮೂರನೇ ಚಿತ್ರಕ್ಕೆ ರಣವೀರ್ ಅವರ ಎಂಟ್ರಿ ಆಗಿದ್ದು, ಶಾರುಖ್ ಹೊರ ನಡೆದಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ಶಾರುಖ್ ಅಭಿಮಾನಿಗಳಿಗೆ ಇದು ಇಷ್ಟ ಆಗಿಲ್ಲ. ಹೀಗಾಗಿ ರಣವೀರ್ ಸಿಂಗ್ ಅವರನ್ನು ಟ್ರೋಲ್ ಮಾಡಿದ್ದರು. ಆದರೆ, ಫರ್ಹಾನ್ ಅವರು ರಣವೀರ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. 2025ರ ವೇಳೆಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಡಾನ್ 3’ ನಿರ್ದೇಶಕ ಫರ್ಹಾನ್ ಅಖ್ತರ್​ ನಿವಾಸಕ್ಕೆ ಕಿಯಾರಾ ಅಡ್ವಾಣಿ ಭೇಟಿ; ಅಭಿಮಾನಿಗಳಲ್ಲಿ ಮೂಡಿತು ಕುತೂಹಲ

‘ಡಾನ್ 3’ ಚಿತ್ರದಲ್ಲಿ ರಣವೀರ್ ಸಿಂಗ್ ಪಾತ್ರ ಮಾತ್ರ ಅಂತಿಮವಾಗಿದೆ. ‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚೋಪ್ರಾ ಈ ಸಿನಿಮಾದಲ್ಲಿ ನಟಿಸೋದು ಅನುಮಾನ ಎನ್ನಲಾಗುತ್ತಿದೆ. ರಿತೇಶ್ ಸಿದ್ವಾನಿ ಹಾಗೂ ಫರ್ಹಾನ್ ಅಖ್ತರ್ ಅವರು ಎಕ್ಸೆಲ್ ಎಂಟರ್​ಟೇನ್​ಮೆಂಟ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್