ಅಂಬಾನಿ ಪುತ್ರನಿಗೆ ಶಾರುಖ್​, ಸಲ್ಮಾನ್​, ದೀಪಿಕಾ ಕೊಟ್ಟ ಉಡುಗೊರೆ ಏನು?

ಬಾಲಿವುಡ್​ ಕಲಾವಿದರು ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ಬಂದು ಮನರಂಜನೆ ನೀಡಿದ್ದು ಮಾತ್ರವಲ್ಲದೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಗಳನ್ನೂ ನೀಡಿದ್ದಾರೆ. ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಸಲ್ಮಾನ್​ ಖಾನ್​ ಮುಂತಾದ ಸೆಲೆಬ್ರಿಟಿಗಳು ದುಬಾರಿ ಗಿಫ್ಟ್​ ನೀಡಿರುವ ಬಗ್ಗೆ ಸುದ್ದಿ ಆಗಿದೆ.

ಅಂಬಾನಿ ಪುತ್ರನಿಗೆ ಶಾರುಖ್​, ಸಲ್ಮಾನ್​, ದೀಪಿಕಾ ಕೊಟ್ಟ ಉಡುಗೊರೆ ಏನು?
ಅನಂತ್​ ಅಂಬಾನಿ, ರಾಧಿಕಾ ಮರ್ಚೆಂಟ್​, ಬಾಲಿವುಡ್​ ಸೆಲೆಬ್ರಿಟಿಗಳು
Follow us
ಮದನ್​ ಕುಮಾರ್​
|

Updated on: Mar 12, 2024 | 3:15 PM

ಕೆಲವೇ ದಿನಗಳ ಹಿಂದೆ ಅನಂತ್​ ಅಂಬಾನಿ (Anant Ambani) ಹಾಗೂ ರಾಧಿಕಾ ಮೆರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭ ನಡೆಯಿತು. ಮುಖೇಶ್​ ಅಂಬಾನಿ (Mukesh Ambani) ಪುತ್ರನ ವಿವಾಹಪೂರ್ವ ಸಮಾರಂಭದ ಅದ್ದೂರಿತನ ಹೇಗಿತ್ತು ಎಂಬುದನ್ನು ಜಗತ್ತು ಈಗಾಗಲೇ ಕಂಡಿದೆ. ಜಾಗತಿಕ ಮಟ್ಟದ ದೊಡ್ಡ ದೊಡ್ಡ ಕಂಪನಿಗಳ ಸಿಇಓಗಳೆಲ್ಲ ಬಂದು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಬಾಲಿವುಡ್​ನ (Bollywood) ಘಟಾನುಘಟಿ ಸೆಲೆಬ್ರಿಟಿಗಳು ಕೂಡ ಅನಂತ್​ ಅಂಬಾನಿಯ ಪ್ರೀ-ವೆಡ್ಡಿಂಗ್​ ಇವೆಂಟ್​ನಲ್ಲಿ ಡ್ಯಾನ್ಸ್​ ಮಾಡಿದರು. ಅಷ್ಟೇ ಅಲ್ಲದೇ ದುಬಾರಿ ಗಿಫ್ಟ್​ಗಳನ್ನು ನೀಡಿದ್ದಾರೆ. ಅದರ ಬಗ್ಗೆ ಗಾಸಿಪ್​ ಹರಿದಾಡುತ್ತಿದೆ.

ಮುಖೇಶ್​ ಅಂಬಾನಿ ಅವರ ಆಸ್ತಿಯನ್ನು ಲೆಕ್ಕ ಹಾಕುವುದು ಕಷ್ಟ. ಅಷ್ಟು ದೊಡ್ಡ ಶ್ರೀಮಂತರ ಎದುರು ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಾಮಾನ್ಯರಂತಾಗಿಬಿಡುತ್ತಾರೆ! ಹಾಗಂತ ಉಡುಗೊರೆ ಕೊಡದೇ ಇರಲು ಸಾಧ್ಯವಿಲ್ಲ. ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಸಲ್ಮಾನ್​ ಖಾನ್​, ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​ ಮುಂತಾದವರು ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಗಿಫ್ಟ್​ ನೀಡಿದ್ದಾರೆ.

ಶಾರುಖ್​ ಖಾನ್​ ಅವರಿಗೆ ಅಂಬಾನಿ ಕುಟುಂಬದ ಜೊತೆ ವಿಶೇಷ ನಂಟಿದೆ. ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರಿಗೆ ಶಾರುಖ್​ ಖಾನ್​ ಅವರು 5 ಕೋಟಿ ರೂಪಾಯಿ ಬೆಲೆ ಬಾಳುವ ಮರ್ಸಿಡಿಸ್​ ಬೆಂಜ್​ 300 ಎಸ್​ಎಲ್​ಆರ್​ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಲ್ಮಾನ್​ ಖಾನ್​ ಅವರು ಅನಂತ್​ ಅಂಬಾನಿಗೆ ಕಸ್ಟಮೈಸ್ಡ್​ ವಾಚ್​ ಉಡುಗೊರೆಯಾಗಿ ನೀಡಿದ್ದಾರೆ. ರಾಧಿಕಾ ಮರ್ಚೆಂಟ್​ಗೆ ಡೈಮಂಡ್​ ಕಿವಿಯೋಲೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಪ್ರೀ-ವೆಡ್ಡಿಂಗ್​ ಸಂಭ್ರಮದಲ್ಲಿ ಜಾನ್ವಿ ಕಪೂರ್​

ರಾಧಿಕಾ ಮರ್ಚೆಂಟ್​ ಮತ್ತು ಕಿಯಾರಾ ಅಡ್ವಾಣಿ ಅವರು ಬಾಲ್ಯದ ಸ್ನೇಹಿತರು. ಪತಿ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ಆಗಮಿಸಿದ ಕಿಯಾರಾ ಅಡ್ವಾಣಿ ಅವರು ಬಂಗಾರ ಮತ್ತು ವಜ್ರ ಖಚಿತವಾದ ಗಣೇಶ ಹಾಗೂ ಲಕ್ಷ್ಮೀ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು 29 ಲಕ್ಷ ರೂಪಾಯಿ ಬೆಲೆ ಬಾಳುವ ಏರ್​ ಜೋರ್ಡನ್​ ಶೋ ನೀಡಿದ್ದಾರೆ ಎಂದು ಸುದ್ದಿಯಾಗಿದೆ.

ಇದನ್ನೂ ಓದಿ: ಅನಂತ್​ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್​

ಬಾಲಿವುಡ್​ನ ಸೆಲೆಬ್ರಿಟಿ ಕಪಲ್​ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ಡೈಮಂಡ್​​ ಬ್ರಾಸ್ಲೆಟ್​ ಹಾಗೂ ನೆಕ್ಲೆಸ್​ ಕೊಟ್ಟಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರು ತಲಾ ಒಂದು ಕೋಟಿ ರೂಪಾಯಿ ಬೆಲೆ ಬಾಳುವ ಎರಡು ವಾಚ್​ಗಳನ್ನು ಗಿಫ್ಟ್​ ಮಾಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕಂತೂ ಇದು ಗಾಸಿಪ್​ ಅಷ್ಟೇ. ಯಾರೂ ಕೂಡ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.