ಶ್ರೇಯಾ ಘೋಷಾಲ್ ಜನ್ಮದಿನ; ನಾಲ್ಕನೇ ವರ್ಷಕ್ಕೆ ಸಂಗೀತ ಲೋಕದ ಜೊತೆ ನಂಟು ಬೆಳೆಸಿಕೊಂಡಿದ್ದ ಗಾಯಕಿ

ಶ್ರೇಯಾ ಘೋಷಾಲ್ ಜನಿಸಿದ್ದು 1984ರ ಮಾರ್ಚ್ 12ರಂದು. ಅವರು ಜನಿಸಿದ್ದು ಬೆಂಗಾಲಿ ಫ್ಯಾಮಿಲಿಯಲ್ಲಿ. ಶ್ರೇಯಾ ಬೆಳೆದಿದ್ದು ರಾಜಸ್ಥಾನದಲ್ಲಿ. ಅವರು ನಾಲ್ಕನೇ ವಯಸ್ಸಿಗೆ ಹಾರ್ಮೋನಿಯಂ ನುಡಿಸಲು ಕಲಿತರು. ಈ ಮೂಲಕ ಸಂಗೀತ ಲೋಕದ ಜೊತೆ ನಂಟು ಬೆಳೆಸಿಕೊಂಡರು. ನಂತರ ಅವರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡರು.

ಶ್ರೇಯಾ ಘೋಷಾಲ್ ಜನ್ಮದಿನ; ನಾಲ್ಕನೇ ವರ್ಷಕ್ಕೆ ಸಂಗೀತ ಲೋಕದ ಜೊತೆ ನಂಟು ಬೆಳೆಸಿಕೊಂಡಿದ್ದ ಗಾಯಕಿ
ಶ್ರೇಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 12, 2024 | 8:02 AM

ಶ್ರೇಯಾ ಘೋಶಾಲ್ (Shreya Ghoshal) ಅವರಿಗೆ ಇಂದು (ಮಾರ್ಚ್ 12) ಬರ್ತ್​ಡೇ. ಅವರ ಧ್ವನಿಗೆ ಫ್ಯಾನ್ ಆಗದವರೇ ಇಲ್ಲ ಎಂದರೂ ತಪ್ಪಿಲ್ಲ. ತಮ್ಮ ಸುಮಧುರ ಗೀತೆಗಳ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಬಹಳ ಸಣ್ಣ ಅವಧಿಯಲ್ಲಿ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಅವರು ಸಾಕಷ್ಟು ಪ್ರಾದೇಶಿಕ ಸಿನಿಮಾ ಹಾಗೂ ಟಿವಿ ಧಾರಾವಾಹಿಗಳಲ್ಲಿ ಹಾಡಿದ್ದಾರೆ. ಕನ್ನಡ, ಹಿಂದಿ, ಬೆಂಗಾಲಿ, ಮಲಯಾಳಂ, ಪಂಜಾಬಿ, ತಮಿಳು, ತೆಲುಗು ಮಂದಿಗೂ ಅವರು ಚಿರಪರಿಚಿತರಾಗಿದ್ದಾರೆ.

ಶ್ರೇಯಾ ಘೋಷಾಲ್ ಅವರು 1984ರ ಮಾರ್ಚ್ 12ರಂದು ಜನಿಸಿದರು. ಅವರು ಜನಿಸಿದ್ದು ಬೆಂಗಾಲಿ ಫ್ಯಾಮಿಲಿಯಲ್ಲಿ. ಅವರು ಬೆಳೆದಿದ್ದು ರಾಜಸ್ಥಾನದಲ್ಲಿ. ಅವರು ನಾಲ್ಕನೇ ವಯಸ್ಸಿಗೆ ಹಾರ್ಮೋನಿಯಂ ನುಡಿಸಲು ಕಲಿತರು. ಈ ಮೂಲಕ ಸಂಗೀತ ಲೋಕದ ಜೊತೆ ನಂಟು ಬೆಳೆಸಿಕೊಂಡರು. ನಂತರ ಅವರು ಗುರು ಮಹೇಶ್ ಚಂದ್ರ ಶರ್ಮಾ ಬಳಿ ಕ್ಲಾಸಿಕ್ ಮ್ಯೂಸಿಕ್ ಕಲಿತರು.

ಶ್ರೇಯಾ ಘೋಷಾಲ್ ಅವರು ಹಿಂದಿಯಲ್ಲಿ ‘ಸರೆಗಮ’ ಶೋನಲ್ಲಿ ಮೊದಲು ಭಾಗವಹಿಸಿದರು. ಈ ರಿಯಾಲಿಟಿ ಶೋ ಮೂಲಕ ಅವರು ಫೇಮಸ್ ಆದರು. 2002ರಲ್ಲಿ ರಿಲೀಸ್ ಆದ ‘ದೇವದಾಸ್’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ಹಾಡಿದರು. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ಶ್ರೇಯಾ ಅವರ ಲವ್​ ಲೈಫ್ ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. 2015ರಲ್ಲಿ ಶ್ರೇಯಾ ಘೋಷಾಲ್ ಅವರು ತಮ್ಮ ಬಾಲ್ಯದ ಗೆಳೆಯ ಶೈಲಾದಿತ್ಯ ಮುಖ್ಯೋಪಾಧ್ಯಾಯ ಅವರನ್ನು ಮದುವೆ ಆದರು. ಅವರು ವೃತ್ತಿಯಲ್ಲಿ ಇಂಜಿನಿಯರ್. ಈ ದಂಪತಿಗೆ ಗಂಡು ಮಗು ಇದೆ. ಅವನಿಗೆ ದೇವಯಾನ್ ಎಂದು ನಾಮಕರಣ ಮಾಡಲಾಗಿದೆ. ಶ್ರೇಯಾ ಹಾಗೂ ಶೈಲಾದಿತ್ಯ ಸ್ಕೂಲ್ ಫ್ರೆಂಡ್ಸ್. ವಿದ್ಯಾರ್ಥಿ ಜೀವನದಲ್ಲೇ ಇವರ ಮಧ್ಯೆ ಪ್ರೀತಿ ಮೂಡಿತ್ತು.

ಶ್ರೇಯಾ ಹಾಗೂ ಶೈಲಾದಿತ್ಯ 10 ವರ್ಷಕ್ಕೂ ಅಧಿಕ ಕಾಲ ಡೇಟ್ ಮಾಡಿದರು. ಶ್ರೇಯಾಗೆ ಶೈಲಾದಿತ್ಯ ಅವರೇ ಮೊದಲು ಪ್ರಪೋಸ್ ಮಾಡಿದ್ದು ಎನ್ನಲಾಗಿದೆ. ಇವರ ಪ್ರೀತಿಗೆ ಕುಟುಂಬದವರು ಒಪ್ಪಿಗೆ ನೀಡಿದರು. ಆ ಬಳಿಕ ಇಬ್ಬರೂ ಮದುವೆ ಆದರು. ಶ್ರೇಯಾ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2003ರಲ್ಲಿ. ‘ಪ್ಯಾರಿಸ್ ಪ್ರಣಯ’ ಚಿತ್ರದ ‘ಕೃಷ್ಣ ನೀ ಬೇಗನೆ ಬಾರೋ..’ ಹಾಡನ್ನು ಅವರು ಹಾಡಿದ್ದರು. ‘ಹೆಬ್ಬುಲಿ’ ಚಿತ್ರದ ‘ಉಸಿರೇ ಉಸಿರೇ..’, ‘ಚಕ್ರವರ್ತಿ’ ಸಿನಿಮಾದ ‘ಒಂದು ಮಳೆಬಿಲ್ಲು..’, ‘ಮುಗುಳು ನಗೆ’ ಚಿತ್ರದ ‘ನಿನ್ನ ಸ್ನೇಹದಿಂದ..’ ಮೊದಲಾದ ಹಾಡುಗಳನ್ನು ಹಾಡಿ ಅವರು ಮನ ಸೆಳೆದಿದ್ದಾರೆ. ಅವರಿಗೆ ಐದು ಬಾರಿ ನ್ಯಾಷನಲ್ ಅವಾರ್ಡ್ ಸಿಕ್ಕಿದೆ.

ಇದನ್ನೂ ಓದಿ: ಎಷ್ಟು ಬಾರಿ ನ್ಯಾಷನಲ್​ ಅವಾರ್ಡ್​ ಪಡೆದಿದ್ದಾರೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್​?

ಶ್ರೇಯಾ ಘೋಷಾಲ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಆರಾಧಿಸುವ ಅನೇಕರಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಗ್ಲಾಮರ್ ಮೂಲಕವೂ ಶ್ರೇಯಾ ಸಾಕಷ್ಟು ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ