ಝೈದ್ ಖಾನ್​ಗೆ ಆಕ್ಷನ್-ಕಟ್ ಹೇಳಲಿರುವ ‘ಉಪಾಧ್ಯಕ್ಷ’ ನಿರ್ದೇಶಕ

Zaid Khan: ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್​ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಉಪಾಧ್ಯಕ್ಷ’ ನಿರ್ದೇಶಕರೇ ಝೈದ್ ಖಾನ್​ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.

ಝೈದ್ ಖಾನ್​ಗೆ ಆಕ್ಷನ್-ಕಟ್ ಹೇಳಲಿರುವ ‘ಉಪಾಧ್ಯಕ್ಷ’ ನಿರ್ದೇಶಕ
ಝೈದ್ ಖಾನ್
Follow us
ಮಂಜುನಾಥ ಸಿ.
|

Updated on: Mar 12, 2024 | 10:45 PM

ಸಚಿವ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ (Zaid Khan) ‘ಬನಾರಸ್’ ಸಿನಿಮಾ ಮೂಲಕ ಈಗಾಗಲೇ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಭಿನ್ನ ಕತೆ ಹೊಂದಿದ್ದ ‘ಬನಾರಸ್’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಗಳಿಸಿತ್ತು. ಝೈದ್ ಖಾನ್​ರ ನಟನೆ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಆ ಸಿನಿಮಾದ ಬಳಿಕ ಬೇರೆ ಯಾವುದೇ ಸಿನಿಮಾ ಝೈದ್ ಖಾನ್ ಘೋಷಿಸಿರಲಿಲ್ಲ. ಇದೀಗ ಝೈದ್ ಖಾನ್​ಗೆ ಹೊಸ ಸಿನಿಮಾದ ಆಫರ್ ಬಂದಿದೆ. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಆದ ‘ಉಪಾಧ್ಯಕ್ಷ’ ನಿರ್ದೇಶಕ, ಝೈದ್ ಖಾನ್​ರ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ‘ಉಪಾಧ್ಯಕ್ಷ’ದ ನಿರ್ದೇಶಕ ಅನಿಲ್ ಕುಮಾರ್ ಝೈದ್ ಖಾನ್​ರ ಸಿನಿಮಾಕ್ಕಾಗಿ ಈಗಾಗಲೇ ಕತೆ, ಚಿತ್ರಕತೆಯನ್ನು ಅಂತಿಮಗೊಳಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ “ಕೆಂಪೇಗೌಡ” ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನಿಲ್ ಕುಮಾರ್, ಸುಮಂತ್-ರಾಧಿಕಾ ಪಂಡಿತ್ ಅಭಿನಯದ “ದಿಲ್ ವಾಲ” ಚಿತ್ರದ ಮೂಲಕ ನಿರ್ದೇಶಕರಾದವರು. ಮಾಲಾಶ್ರೀ ಅವರು ನಾಯಕಿಯಾಗಿ ನಟಿಸಿರುವ “ಶಕ್ತಿ ” ಹಾಗೂ ಶರಣ್ ನಟನೆಯ “ರ‍್ಯಾಂಬೊ 2” ಚಿತ್ರದ ನಿರ್ದೇಶಕರು ಸಹ ಅನಿಲ್ ಕುಮಾರ್ ಅವರೆ. ಇತ್ತೀಚಿಗೆ ತೆರೆಕಂಡ ಚಿಕ್ಕಣ್ಣ ಅಭಿನಯದ “ಉಪಾಧ್ಯಕ್ಷ” ಸಹ ದೊಡ್ಡಮಟ್ಟದ ಯಶಸ್ಸು ಕಂಡಿದೆ. “ಉಪಾಧ್ಯಕ್ಷ” ನಂತರ ಅನಿಲ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅನಿಲ್ ಕುಮಾರ್ ಹಾಗೂ ಝೈದ್ ಖಾನ್ ಕಾಂಬಿನೇಶನ್ ನಲ್ಲಿ ನೂತನ ಚಿತ್ರವೊಂದು ಮೂಡಿಬರಲಿದೆ.

ಇದನ್ನೂ ಓದಿ:‘ಉಪಾಧ್ಯಕ್ಷ’ ಯಶಸ್ಸು: ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ಸಿನಿಮಾ ತಂಡ

“ಬನಾರಸ್” ಚಿತ್ರದ ನಂತರ ಸಾಕಷ್ಟು ಕಥೆ ಕೇಳಿರುವ ಝೈದ್ ಖಾನ್ ಅವರು ಈ ಚಿತ್ರದ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಕ್ಲಾಸ್ & ಮಾಸ್ ಇಬ್ಬರು ಆಡಿಯನ್ಸ್ ಇಷ್ಟಪಡುವ ಕಥೆಯಿದು. ಹೆಸರಾಂತ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನುರಿತ ತಂತ್ರಜ್ಞರ ದೊಡ್ಡ ತಂಡವೇ ಈ ಚಿತ್ರದಲ್ಲಿರಲಿದೆ. ತಾಂತ್ರಿಕವರ್ಗ ಹಾಗೂ ತಾರಾಬಳಗದ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.

ಝೈದ್ ಖಾನ್, ಸಕ್ರಿಯ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು, ಸಿನಿಮಾದ ಇತರೆ ಪಾತ್ರಗಳ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್