Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ತಲೆ ಮೇಲೆ ಬೆಳ್ಳಿ ಕಿರೀಟವಿಟ್ಟು, ಕೈಗೆ ಬೃಹತ್ ಬೆಳ್ಳಿ ಗದೆ ನೀಡಿ ಸನ್ಮಾನಿಸಿದ ಜಮೀರ್ ಅಹ್ಮದ್

ಸಿದ್ದರಾಮಯ್ಯ ತಲೆ ಮೇಲೆ ಬೆಳ್ಳಿ ಕಿರೀಟವಿಟ್ಟು, ಕೈಗೆ ಬೃಹತ್ ಬೆಳ್ಳಿ ಗದೆ ನೀಡಿ ಸನ್ಮಾನಿಸಿದ ಜಮೀರ್ ಅಹ್ಮದ್

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 02, 2024 | 7:15 PM

ಮುಖ್ಯಮಂತ್ರಿಯರನ್ನು ಬೆಳ್ಳಿಗದೆ ನೀಡಿ ಗೌರವಿಸುತ್ತಿರುವುದು ಇದೇ ಮೊದಲ ಸಲವಲ್ಲ, ಬೇರೆ ಕಾರ್ಯಕ್ರಮಗಳಲ್ಲೂ ನೀಡಲಾಗಿದೆ. ಕನ್ನಡಿಗರು ಗಮನಿಸುತ್ತಿರುವಂತೆ, ಗದೆ ನೀಡಿದಾಗ ಸಿದ್ದರಾಮಯ್ಯ ಬಹಳ ಪ್ರಸನ್ನಚಿತ್ತರಾಗುತ್ತಾರೆ, ಗದೆ ತಮ್ಮ ಹೆಗಲ ಮೇಲಿಟ್ಟಿಕೊಂಡುಬಲಬೀಮಸೇನನಂತೆ ಕೆಮೆರಾಗಳಿಗೆ ಪೋಸು ನೀಡುತ್ತಾರೆ.

ಬೆಂಗಳೂರು: ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ (PMAY U) ರಾಜ್ಯದಲ್ಲಿ ನಿರ್ಮಾಣಗೊಳುತ್ತಿರುವ 1,80,253 ಮನೆಗಳ ಪೈಕಿ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ 36,789 ಮನೆಗಳ ಲೋಕಾರ್ಪಣೆ ಮತ್ತು ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಐದು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು (sale deeds) ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ವಸತಿ ಖಾತೆ ಸಚಿವ ಜಮೀರ್ ಅಹ್ಮದ್ (BZ Zameer Ahmed Khan) ಬೆಳ್ಳಿ ಕಿರೀಟ ತೊಡಿಸಿ ಮತ್ತು ಭಾರಿ ಗಾತ್ರದ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಸಭೆ ಸಮಾರಂಭಗಳಲ್ಲಿ ತಮಗೆ ಹಾರ ತುರಾಯಿಗಳಿಂದ ಸನ್ಮಾನಿಸುವುದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದರೂ ಅವರಿಗೆ ಹಾರಗಳನ್ನು ಹಾಕಲಾಗುತ್ತದೆ.

ಪ್ರಾಯಶಃ ಹಾರ ಹಾಕಲು ಬಂದಾಗ ಬೇಡ ಅಂದರೆ ಬೇಜಾರು ಮಾಡಿಕೊಂಡಾರು ಎಂಬ ಕಾರಣಕ್ಕೆ ಅವರು ವೇದಿಕೆ ಮೇಲೆ ಆಗಾಗ ಹಾರಗಳನ್ನು ಹಾಕಿಸಿಕೊಳ್ಳುತ್ತಿರಬಹುದು. ಇಲ್ಲಿ ಅವರನ್ನು ಗಂಧದ ಹಾರ ಹಾಕಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿಯರನ್ನು ಬೆಳ್ಳಿಗದೆ ನೀಡಿ ಗೌರವಿಸುತ್ತಿರುವುದು ಇದೇ ಮೊದಲ ಸಲವಲ್ಲ, ಬೇರೆ ಕಾರ್ಯಕ್ರಮಗಳಲ್ಲೂ ನೀಡಲಾಗಿದೆ. ಕನ್ನಡಿಗರು ಗಮನಿಸುತ್ತಿರುವಂತೆ, ಗದೆ ನೀಡಿದಾಗ ಸಿದ್ದರಾಮಯ್ಯ ಬಹಳ ಪ್ರಸನ್ನಚಿತ್ತರಾಗುತ್ತಾರೆ, ಗದೆ ತಮ್ಮ ಹೆಗಲ ಮೇಲಿಟ್ಟಿಕೊಂಡುಬಲಬೀಮಸೇನನಂತೆ ಕೆಮೆರಾಗಳಿಗೆ ಪೋಸು ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಿಜಯನಗರದ ಮೃತ ರೈತನಾಯಕ ಕಾರ್ತೀಕ್ ಅವರ ಮಗಳ ಶಿಕ್ಷಣದ ಹೊರೆಹೊತ್ತ ಸಚಿವ ಬಿಜೆಡ್ ಜಮೀರ್ ಅಹ್ಮದ್

Published on: Mar 02, 2024 06:10 PM