ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ: ಶಂಕಿತನ ಬಗ್ಗೆ ವಿವರಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಂಕಿತ ವ್ಯಕ್ತಿ ಬಸ್ಸೊಂದರಲ್ಲಿ ಬಂದು ಕೆಫೆಗೆ ಹತ್ತಿರದ ಬಸ್ ಸ್ಟಾಪ್ನಲ್ಲಿ ಇಳಿದು ಹೋಟೆಲ್ ನತ್ತ ಹೋಗಿದ್ದಾನೆ. ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಕೆಫೆಯೊಳಗೆ ಹೋದವನು ಅಲ್ಲಿದ್ದ ಮರವೊಂದರ ಬಳಿ ಕೂತು ಇಡ್ಲಿ ತಿಂದಿದ್ದಾನೆ. ಗಡ್ಡಧಾರಿಯಾಗಿರುವ ಶಂಕಿತ ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ ಮತ್ತು ತಲೆ ಮೇಲೆ ಟೋಪಿ ಇಟ್ಟುಕೊಂಡಿದ್ದಾನೆ. ಅವನು ಪ್ರಯಾಣಿಸಿದ ಬಸ್ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದಿಂದ (Rameshwaram café blast) ಗಾಯಗೊಂಡಿರುವ ಜನರನ್ನು ಆಸ್ಪತ್ರೆಗ ತೆರಳಿ ಮಾತಾಡಿಸಿದ ಹೊರಬಂದು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬಾಂಬನ್ನು (IED bomb) ಬ್ಯಾಗಲ್ಲಿ ತಂದವನ ಬಗ್ಗೆ ಮಾತಾಡಿದ ಅವರು, ಶಂಕಿತ ವ್ಯಕ್ತಿ ಬಸ್ಸೊಂದರಲ್ಲಿ ಬಂದು ಕೆಫೆಗೆ ಹತ್ತಿರದ ಬಸ್ ಸ್ಟಾಪ್ನಲ್ಲಿ ಇಳಿದು ಹೋಟೆಲ್ ನತ್ತ ಹೋಗಿದ್ದಾನೆ. ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಕೆಫೆಯೊಳಗೆ ಹೋದವನು ಅಲ್ಲಿದ್ದ ಮರವೊಂದರ ಬಳಿ ಕೂತು ಇಡ್ಲಿ ತಿಂದಿದ್ದಾನೆ. ಗಡ್ಡಧಾರಿಯಾಗಿರುವ ಶಂಕಿತ ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ ಮತ್ತು ತಲೆ ಮೇಲೆ ಟೋಪಿ ಇಟ್ಟುಕೊಂಡಿದ್ದಾನೆ. ಅವನು ಪ್ರಯಾಣಿಸಿದ ಬಸ್ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು, ಐಬಿ ಮತ್ತು ರಾ ಮತ್ತು ಎನ್ಐಎ ಆಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಒಂದರೆಡು ದಿನಗಳಲ್ಲಿ ಅವನ ಬಗ್ಗೆ ಪತ್ತೆಯಾಗಲಿದೆ ಎಂದ ಸಿದ್ದರಾಮಯ್ಯ ರಾಜ್ಯ ತಮ್ಮ ಸರ್ಕಾರವೂ ತನಿಖೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿದೆ ಎಂದರು. ಬಾಂಬ್ ಸ್ಪೋಟದಲ್ಲಿ ಗಾಯಗೊಂಡವರ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಹು ನಿರೀಕ್ಷಿತ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ