AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ: ದಿನೇಶ್ ಗುಂಡೂರಾವ್

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ: ದಿನೇಶ್ ಗುಂಡೂರಾವ್

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 02, 2024 | 12:27 PM

Share

ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಕೂಗಿದ ಪ್ರಕರಣದ ವಿಚಾರವಾಗಿ ವಿರೋಧ ಪಕ್ಷದ ನಾಯಕ ಅರ್ ಅಶೋಕ ನೀಡುತ್ತಿರುವ ಹೇಳಿಕೆಗಳಿಗೆ ಉತ್ತರಿಸಿದ ಸಚಿವ, ಆರೋಪಗಳನ್ನು ಮಾಡೋದು ಬಿಜೆಪಿ ನಾಯಕರಿಗೆ ಅಭ್ಯಾಸವಾಗಿದೆ, ಎಫ್ ಎಸ್ ಎಲ್ ವರದಿ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗುತ್ತದೆ, ಪಾಕ್ ಪರ ಕೂಗಿದ್ದರೆ ಅವರ ಪರ ಯಾರೂ ನಿಲ್ಲಲ್ಲ, ಈಗಾಗಲೇ ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಮಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ರಾಮೇಶ್ವರಂ ಕೆಫೆಯಲ್ಲಿ (Rameshwaram Café) ಬಾಂಬ್ ಸ್ಫೋಟ ಪ್ರಕರಣವನ್ನು ಸರ್ಕಾರ (Karnataka government) ಬಹಳ ಗಂಭೀರವಾಗಿ ಪರಿಗಣಿಸಿದೆ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ತನಿಖೆ ಶುರುವಾಗಿದೆ ಎಂದು ಹೇಳಿದರು. ಬಾಂಬ್ ಇಟ್ಟವರು ಯಾರು ಅವರ ಉದ್ದೇಶ ಏನಾಗಿತ್ತು ಮೊದಲಾದ ಸಂಗತಿಗಳು ಗೊತ್ತಾದ ಮೇಲೆ ವಿಷಯದ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಬಹುದು. ಆದರೆ, ತನಿಖೆ ಪೂರ್ಣಗೊಳ್ಳುವ ಮೊದಲು, ಅಪರಾಧಿ ಯಾರು ಅನ್ನೋದು ಗೊತ್ತಾಗುವ ಮೊದಲೇ ನಮಗೆ ತೋಚಿದ್ದನ್ನು ಹೇಳೋದು, ಬರೆಯೋದು, ಮಾಧ್ಯಮಗಳಲ್ಲಿ ತೋರಿಸುವುದು ಸರಿಯಲ್ಲ ಎಂದು ಗುಂಡೂರಾವ್ ಹೇಳಿದರು.

ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಕೂಗಿದ ಪ್ರಕರಣದ ವಿಚಾರವಾಗಿ ವಿರೋಧ ಪಕ್ಷದ ನಾಯಕ ಅರ್ ಅಶೋಕ ನೀಡುತ್ತಿರುವ ಹೇಳಿಕೆಗಳಿಗೆ ಉತ್ತರಿಸಿದ ಸಚಿವ, ಆರೋಪಗಳನ್ನು ಮಾಡೋದು ಬಿಜೆಪಿ ನಾಯಕರಿಗೆ ಅಭ್ಯಾಸವಾಗಿದೆ, ಎಫ್ ಎಸ್ ಎಲ್ ವರದಿ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗುತ್ತದೆ, ಪಾಕ್ ಪರ ಕೂಗಿದ್ದರೆ ಅವರ ಪರ ಯಾರೂ ನಿಲ್ಲಲ್ಲ, ಈಗಾಗಲೇ ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಪುಲ್ವಾಮಾದಲ್ಲಿ 150 ಕೇಜಿಯಷ್ಟು ಆರ್ ಡಿ ಎಕ್ಸ್ ಹೇಗೆ ಬಂತು ಅಂತ ಬಿಜೆಪಿ ನಾಯಕರು ಹೇಳಲ್ಲ, ಆಗಿನ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಅವರೇ ಅದೊಂದು ದೊಡ್ಡ ಸೆಕ್ಯುರಿಟಿ ಲ್ಯಾಪ್ಸ್ ಅಂತ ಹೇಳಿದ್ದಾರೆ ಎಂದು ಗುಂಡೂರಾವ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್​​

Published on: Mar 02, 2024 12:25 PM