ಬ್ರೂಕ್ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಕೆಫೆಯ ಇತರ ಶಾಖೆಗಳ ಮೇಲೂ ಪ್ರಭಾವ, ಗ್ರಾಹಕರ ಸಂಖ್ಯೆ ಇಳಿಮುಖ

ಕೆಫೆಯ ರಾಜಾಜಿನಗರ ಬ್ರ್ಯಾಂಚ್ ಸೇರಿದಂತೆ ಇಂದಿರಾನಗರ ಮತ್ತು ಜೆಪಿ ನಗರದಲ್ಲೂ ಕೆಫೆಯ ಬ್ರ್ಯಾಂಚ್ ಗಳಿವೆ. ಶನಿವಾರಗಳಂದು ರಜಾ ದಿನವಾಗಿರುವುದರಿಂದ ರಾಜಾಜಿನಗರದ ಈ ಕೆಫೆ ಗ್ರಾಹಕರಿಂದ ಗಿಜಿಗುಡುತಿತ್ತು, ಅದರೆ ಇವತ್ತು ಎಂದಿನ ಅರ್ಧದಷ್ಟು ಗ್ರಾಹಕರು ಕೂಡ ಇಲ್ಲಿ ಕಾಣಸಿಗರು. ಅದ್ಕಕ್ಕೇ ನಾವು ಹೇಳಿದ್ದು, ಬಾಂಬ್ ಸ್ಫೋಟ ಜನರಲ್ಲಿ ಸೃಷ್ಟಿಸುವ ಆತಂಕವೇ ಅಂಥದ್ದು. ಬೇರೆ ಬ್ರ್ಯಾಂಚ್ ಗಳಲ್ಲೂ ವ್ಯಾಪಾರ ತಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ರೂಕ್ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಕೆಫೆಯ ಇತರ ಶಾಖೆಗಳ ಮೇಲೂ ಪ್ರಭಾವ, ಗ್ರಾಹಕರ ಸಂಖ್ಯೆ ಇಳಿಮುಖ
|

Updated on: Mar 02, 2024 | 10:51 AM

ಬೆಂಗಳೂರು: ಭಯೋತ್ಪಾದನೆ, ಉಗ್ರರು, ಬಾಂಬು, ಬಾಂಬ್ ಸ್ಪೋಟ (bomb explosion) ಮೊದಲಾದ ಸಂಗತಿಗಳು ಜನರಲ್ಲಿ ಹುಟ್ಟಿಸುವ ಭಯ ಮತ್ತು ಆತಂಕ ಅಂಥದ್ದು. ಇದನ್ನು ನಾವ್ಯಾಕೆ ಹೇಳ್ತಿದ್ದೀವಿ ಅಂದರೆ, ನಿನ್ನೆ ಐಟಿಪಿಲ್ ರಸ್ತೆಯ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram café) ಕಡಿಮೆ ತೀವ್ರತೆಯ ಐಈಡಿ ಬಾಂಬ್ (low intensity bomb) ಸ್ಫೋಟಗೊಂಡು 10 ಜನರು ಗಾಯಗೊಂಡಿದ್ದು ಈಗ ದೇಶದೆಲ್ಲೆಡೆ ಸುದ್ದಿಯಾಗಿದೆ. ಅದಕ್ಕೆ ಸಂಬಂಧಿಸಿದಂತೆ ತನಿಖೆ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಆ ವಿಚಾರ ಬೇರೆ. ನಾವು ಇಲ್ಲಿ ಹೇಳಹೊರಟಿರುವ ವಿಷಯವೆಂದರೆ ಘಟನೆಯು ಬೆಂಗಳೂರಿ ನಿವಾಸಿಗಳಲ್ಲಿ ಸೃಷ್ಟಿಸಿರುವ ಆತಂಕ. ಬ್ಲಾಸ್ಟ್ ನಡೆದಿದ್ದು ರಾಮೇಶ್ವರಂ ಕೆಫೆಯ ಬ್ರೂಕ್ಫೀಲ್ಡ್ ಬ್ರ್ಯಾಂಚ್ನಲ್ಲಿ. ಆದರೆ, ನಗರದಲ್ಲಿ ಈ ಹೋಟೆಲ್ ಮಾಲೀಕರ ಮೂರು ಶಾಖೆಗಳಿದ್ದು ಅವುಗಳಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ತಗ್ಗಿದೆ.

ದೃಶ್ಯಗಳಲ್ಲಿ ಕಾಣುತ್ತಿರುವ ಕೆಫೆಯ ರಾಜಾಜಿನಗರ ಬ್ರ್ಯಾಂಚ್ ಸೇರಿದಂತೆ ಇಂದಿರಾನಗರ ಮತ್ತು ಜೆಪಿ ನಗರದಲ್ಲೂ ಕೆಫೆಯ ಬ್ರ್ಯಾಂಚ್ ಗಳಿವೆ. ಶನಿವಾರಗಳಂದು ರಜಾ ದಿನವಾಗಿರುವುದರಿಂದ ರಾಜಾಜಿನಗರದ ಈ ಕೆಫೆ ಗ್ರಾಹಕರಿಂದ ಗಿಜಿಗುಡುತಿತ್ತು, ಅದರೆ ಇವತ್ತು ಎಂದಿನ ಅರ್ಧದಷ್ಟು ಗ್ರಾಹಕರು ಕೂಡ ಇಲ್ಲಿ ಕಾಣಸಿಗರು. ಅದ್ಕಕ್ಕೇ ನಾವು ಹೇಳಿದ್ದು, ಬಾಂಬ್ ಸ್ಫೋಟ ಜನರಲ್ಲಿ ಸೃಷ್ಟಿಸುವ ಆತಂಕವೇ ಅಂಥದ್ದು. ಬೇರೆ ಬ್ರ್ಯಾಂಚ್ ಗಳಲ್ಲೂ ವ್ಯಾಪಾರ ತಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Rameshwaram Café: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಇದೆ ಸಾಮ್ಯತೆ

Follow us