ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ತೀವ್ರಗೊಂಡ ತನಿಖೆ, ಸ್ಥಳದಲ್ಲಿ ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ ಕಮಾಂಡೋಗಳು
ಪೊಲೀಸ್ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಬ್ಯಾಗನ್ನು ಕೆಫೆಯಲ್ಲಿಟ್ಟ ಯುವಕನೊಬ್ಬನ ಸಿಸಿಟಿವಿ ಫುಟೇಜ್ ನಿನ್ನೆಯೇ ಲಭ್ಯವಾಗಿದ್ದು ಅವನನ್ನು ಪತ್ತೆಹಚ್ಚುವ ಕೆಲಸ ನಡೆದಿದೆ. ಅವನು ಕೆಫೆಯ ಡಸ್ಟ್ ಬಿನ್ ಒಂದರ ಬಳಿ ಬಾಂಬ್ ಗಳಿದ್ದ ಬ್ಯಾಗನ್ನು ಇಡುವ ಮೊದಲು ತಿಂಡಿ ತಿಂದಿದ್ದಾನೆ. ಏತನ್ಮಧ್ಯೆ, ಸಿಸಿಬಿ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಬೆಂಗಳೂರು: ನಗರದ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram café) ನಿನ್ನೆ ಮಧ್ಯಾಹ್ನ ನಡೆದ ಐಈಡಿ ಬಾಂಬ್ ಸ್ಫೋಟ (IED bomb explosion) ಘಟನೆಗೆ ಸಂಬಂಧಿಸಿದಂತೆ ತೀವ್ರ ಸ್ವರೂಪದ ತನಿಖೆ ಆರಂಭವಾಗಿದೆ. ನಗರದ ಸಿಸಿಬಿ ಅಧಿಕಾರಿಗಳಲ್ಲದೆ ಇತರ ತನಿಖಾ ಸಂಸ್ಥೆಗಳು ಸಹ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿವೆ. ಉಗ್ರರ ಚಟುವಟಿಕೆಗಳನ್ನು ಹತ್ತಿಕ್ಕಲು ರಚನೆಯಾದ ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ (NSG) (ಎನ್ ಎಸ್ ಜಿ ಪಡೆಯ ಸಿಬ್ಬಂದಿಯನ್ನು ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್ ಅಂತಲೂ ಕರೆಯುತ್ತಾರೆ) ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸಿಸಿಬಿ ಶಾಖೆಯ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರಿಂದ ಅವರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಪೊಲೀಸ್ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಬ್ಯಾಗನ್ನು ಕೆಫೆಯಲ್ಲಿಟ್ಟ ಯುವಕನೊಬ್ಬನ ಸಿಸಿಟಿವಿ ಫುಟೇಜ್ ನಿನ್ನೆಯೇ ಲಭ್ಯವಾಗಿದ್ದು ಅವನನ್ನು ಪತ್ತೆಹಚ್ಚುವ ಕೆಲಸ ನಡೆದಿದೆ. ಅವನು ಕೆಫೆಯ ಡಸ್ಟ್ ಬಿನ್ ಒಂದರ ಬಳಿ ಬಾಂಬ್ ಗಳಿದ್ದ ಬ್ಯಾಗನ್ನು ಇಡುವ ಮೊದಲು ತಿಂಡಿ ತಿಂದಿದ್ದಾನೆ. ಏತನ್ಮಧ್ಯೆ, ಸಿಸಿಬಿ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬ್ರೂಕ್ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಕೆಫೆಯ ಇತರ ಶಾಖೆಗಳ ಮೇಲೂ ಪ್ರಭಾವ, ಗ್ರಾಹಕರ ಸಂಖ್ಯೆ ಇಳಿಮುಖ