ವಿಜಯನಗರದ ಮೃತ ರೈತನಾಯಕ ಕಾರ್ತೀಕ್ ಅವರ ಮಗಳ ಶಿಕ್ಷಣದ ಹೊರೆಹೊತ್ತ ಸಚಿವ ಬಿಜೆಡ್ ಜಮೀರ್ ಅಹ್ಮದ್
ವೈಯಕ್ತಿಕವಾಗಿ ತಾನು ಮತ್ತು ಗವಿಯಪ್ಪ ತಲಾ ಐದೈದು ಲಕ್ಷ ಒಟ್ಟು 10 ಲಕ್ಷ ರೂಪಾಯಿ ಕಾರ್ತೀಕ್ ಅವರ ಮಗಳ ಭವಿಷ್ಯಕ್ಕಾಗಿ ನೀಡುವುದಾಗಿ ಹೇಳಿದರು. ಆ ಹಣವನ್ನು ಬ್ಯಾಂಕೊಂದರಲ್ಲಿ ಫಿಕ್ಸೆಡ್ ಡಿಪಾಸಿಟ್ ಮಾಡಿಸಿ ಅವಳ ಭವಿಷ್ಯಕ್ಕಾಗಿ ಬಳಸುವಂತೆ ಸಲಹೆಯನ್ನು ಕುಟುಂಬಕ್ಕೆ ನೀಡಿದರು.
ವಿಜಯನಗರ: ಇದು ಮೊದಲ ಸಲವೇನಲ್ಲ, ಇದಕ್ಕೂ ಮೊದಲು ಸಹ ಸಚಿವ ಬೆಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmad Khan) ಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಕಳೆದ ವಾರ ಮುನಿರಾಬಾದ್ ಬಳಿ ರಸ್ತೆ ಅಪಘಾತವೊಂದರಲ್ಲಿ ನಿಧನರಾದ ರೈತನಾಯಕ ಜೆ ಕಾರ್ತೀಕ್ (J Karthik) ಅವರ ಮನೆಗೆ ತೆರಳಿದ ಜಮೀರ್ ಅಹ್ಮದ್, ದುಃಖ ತಪ್ತ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ. ಹೊಸಪೇಟೆ (Hospet) ಎಂಪಿ ಪ್ರಕಾಶ್ ನಗರದಲ್ಲಿರುವ ಮನೆಗೆ ವಿಜಯನಗರ ಶಾಸಕ ಹೆಚ್ ಆರ್ ಗವಿಯಪ್ಪರೊಂದಿಗೆ ತೆರಳಿದ ಸಚಿವ, ಕಾರ್ತೀಕ್ ಅವರ 13-ವರ್ಷ ವಯಸ್ಸಿನ ಮಗಳ ಅಭ್ಯಾಸ ಹೊರೆಯನ್ನು ತಾನು ಹೊರುವುದಾಗಿ ಕುಟುಂಬದ ಸದಸ್ಯರಿಗೆ ಹೇಳಿದರು. ಸರ್ಕಾರದ ವತಿಯಿಂದ ಈಗಾಗಲೇ 5 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದ್ದು, ವೈಯಕ್ತಿಕವಾಗಿ ತಾನು ಮತ್ತು ಗವಿಯಪ್ಪ ತಲಾ ಐದೈದು ಲಕ್ಷ ಒಟ್ಟು 10 ಲಕ್ಷ ರೂಪಾಯಿ ಕಾರ್ತೀಕ್ ಅವರ ಮಗಳ ಭವಿಷ್ಯಕ್ಕಾಗಿ ನೀಡುವುದಾಗಿ ಹೇಳಿದರು. ಆ ಹಣವನ್ನು ಬ್ಯಾಂಕೊಂದರಲ್ಲಿ ಫಿಕ್ಸೆಡ್ ಡಿಪಾಸಿಟ್ ಮಾಡಿಸಿ ಅವಳ ಭವಿಷ್ಯಕ್ಕಾಗಿ ಬಳಸುವಂತೆ ಸಲಹೆಯನ್ನು ಕುಟುಂಬಕ್ಕೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ