ಮಣಿಪಾಲ ಪೊಲೀಸ್ ಠಾಣೆಯಲ್ಲಿ 25 ಕೋಳಿಗಳು ಹರಾಜು, ಖರೀದಿಸಲು ಮುಗಿಬಿದ್ದ ಜನ
ಅನುಮತಿ ಇಲ್ಲದೆ ನಡೆಸುತ್ತಿದ್ದ ಕೋಳಿ ಅಂಕ ಬೆಟ್ಟಿಂಗ್ ಅಡ್ಡೆ ಮೇಲೆ ಉಡುಪಿ ತಾಲೂಕಿನ ಮಣಿಪಾಲ ಠಾಣೆ ಪೊಲೀಸರು ದಾಳಿ ಮಾಡಿದ್ದು, ಸುಮಾರು 25 ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕೋಳಿಗಳನ್ನು ಪೊಲೀಸರು ಸೋಮವಾರ ಹರಾಜು ಹಾಕಿದರು. ಅಂಕದ ಕೋಳಿಗಳನ್ನು ಖರೀದಿಸಲು ಜನರು ಮುಗಿಬಿದ್ದರು.
ಉಡುಪಿ, ಫೆಬ್ರವರಿ 05: ಸಾಮಾನ್ಯವಾಗಿ ಪೊಲೀಸ್ ಠಾಣೆಗಳಲ್ಲಿ (Police Station) ವಾರಸುದಾರರಿಲ್ಲದ ವಾಹನಗಳನ್ನು ಹರಾಜು ಹಾಕುವುದನ್ನು ನೋಡಿರುತ್ತೀರಿ. ಆದರೆ ಈ ಪೊಲೀಸ್ ಠಾಣೆಯಲ್ಲಿ ಕೋಳಿಗಳನ್ನು ಹರಾಜು ಹಾಕಲಾಗಿದೆ. ಹೌದು ಉಡುಪಿ (Udupi) ತಾಲೂಕಿನ ಮಣಿಪಾಲ ಠಾಣೆ ಪೊಲೀಸರು (Manipal Police Station) ಕೋಳಿ (Chicken) ಅಂಕದಲ್ಲಿ ಬೆಟ್ಟಿಂಗ್ ನಡೆಯುವ ವೇಳೆ ದಾಳಿ ಮಾಡಿ ಸುಮಾರು 25 ಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಈ ಕೋಳಿಗಳನ್ನು ಇಂದು (ಫೆ.05) ಹರಾಜು ಹಾಕಲಾಗಿದೆ. ಒಂದು ಕೋಳಿಗೆ 400 ರೂ. ಒಂದು ವಾರ್, ಎರಡು ವಾರ್, ಮೂರು ವಾರ್ ಅಂತ ಹರಾಜು ಪ್ರಕ್ರಿಯೆ ನಡೆದಿದೆ. ಈ ಕೋಳಿಗಳನ್ನು ಖರೀದಿಸಲು ಕೋಳಿ ಪ್ರೀಯರು ಮುಗಿಬಿದ್ದಾರೆ.
ಕರಾವಳಿ ಭಾಗದಲ್ಲಿ ಸಂಪ್ರದಾಯ ಹೆಸರಿನಲ್ಲಿ ಕೋಳಿ ಅಂಕ ಬೆಟ್ಟಿಂಗ್ ಜೋರಾಗಿ ನಡೆಯುತ್ತದೆ. ಇದು ಒಂದು ಜೂಜು ಆಗಿದೆ. ಇನ್ನು ಈ ಕೋಳಿ ಅಂಕ ನಡೆಸಲು ಅನುಮತಿ ಪಡೆಯಬೇಕು. ಆದರೆ ಅನುಮತಿ ಪಡೆಯದೆ ಕೋಳಿ ಅಂಕ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
Published on: Feb 05, 2024 12:48 PM
Latest Videos