AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಸರ್ಕಾರದ ಉಚಿತ ಯೋಜನೆಗಳ ಪ್ರವರವನ್ನು ಹಂಪಿ ಉತ್ಸವದಲ್ಲೂ ಮುಂದುವರಿಸಿದ ಸಚಿವ ಜಮೀರ್ ಅಹ್ಮದ್ ಖಾನ್!

ಕರ್ನಾಟಕ ಸರ್ಕಾರದ ಉಚಿತ ಯೋಜನೆಗಳ ಪ್ರವರವನ್ನು ಹಂಪಿ ಉತ್ಸವದಲ್ಲೂ ಮುಂದುವರಿಸಿದ ಸಚಿವ ಜಮೀರ್ ಅಹ್ಮದ್ ಖಾನ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 05, 2024 | 11:00 AM

Share

ಕಳೆದ ಬಾರ ನಡೆದ ಹಂಪಿ ಉತ್ಸವ ಮಾಜಿ ಸಚಿವ ಆನಂದ್ ಸಿಂಗ್ ಅವರ ನೇತೃತ್ವದಲ್ಲಿ ನಡೆದಿತ್ತು ಮತ್ತು ಆಗ ತಲೆದೋರಿದ್ದ ಸಮಸ್ಯೆಗಳನ್ನು ಉಲ್ಲೇಖಿಸಿದ ಸಚಿವ ಜಮೀರ್ ನಯವಾಗಿ ಮಾಜಿ ಸಚಿವನ ಕಾಲೆಳೆದರು. ವಾಹನಗಳ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎದುರಾಗಿದ್ದ ಅಡಚಣೆಗಳ ಬಗ್ಗೆ ಸಚಿವ ಮಾತಾಡಿದರು.

ವಿಜಯನಗರ: ಕರ್ನಾಟಕ ರಾಜ್ಯ ಸರ್ಕಾರ (Karnataka government) ತನ್ನ ಉದಾರ ನೀತಿ ಪ್ರದರ್ಶಿಸುವುದನ್ನು ಮುಂದುವರಿಸಿದೆ. ವಸತಿ ಖಾತೆ ಸಚಿವ ಮತ್ತು ಹಂಪಿ ಉತ್ಸವದ ಉಸ್ತುವಾರಿ ಕೂಡ ಆಗಿದ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ತಮ್ಮ ವತಿಯಿಂದಲೂ ಔದಾರ್ಯತೆಯನ್ನು ಪ್ರದರ್ಶಿಸಿದರು. ಹಂಪಿ ಉತ್ಸವದ (Hampi Utsav) ಸಂದರ್ಭದಲ್ಲಿ ಊಟದ ಸ್ವಾಲ್ ಗಳನ್ನು ಹಾಕಿದವರು ಜಮೀರ್ ಅವರ ಆಗ್ರಹದ ಮೇರೆಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದವರಿಗೆ ಕಡಿಮೆ ದರದಲ್ಲಿ ಊಟ ನೀಡಿದ ಕಾರಣ ಅವರೆಲ್ಲ ನಷ್ಟ ಅನುಭವಿಸಬೇಕಾಗಿದೆಯಂತೆ. ಅದನ್ನವರು ಜಮೀರ್ ಬಳಿ ಹೇಳಿಕೊಂಡಿದ್ದು ಸಚಿವ ವೇದಿಕೆಯ ಮೇಲೆ ಭಾಷಣ ಮಾಡುವಾಗ, ಊಟದ ಸ್ಟಾಲ್ ಗಳನ್ನು ಹಾಕಿದವರು ಬಾಡಿಗೆ ಕಟ್ಟಬೇಕಿಲ್ಲ ಅಂತ ಘೋಷಣೆ ಮಾಡಿದರು. ಯಾರಿಂದಲೂ ಬಾಡಿಗೆ ಸಂಗ್ರಹಿಸಬಾರದು ಎಂದು ಅವರು ವಿಜಯನಗರದ ಜಿಲ್ಲಾಧಿಕಾರಿಗಳಿಗೆ ಸೂಚನೆ ಸಹ ನೀಡಿದರು. ಕಳೆದ ಬಾರ ನಡೆದ ಹಂಪಿ ಉತ್ಸವ ಮಾಜಿ ಸಚಿವ ಆನಂದ್ ಸಿಂಗ್ ಅವರ ನೇತೃತ್ವದಲ್ಲಿ ನಡೆದಿತ್ತು ಮತ್ತು ಆಗ ತಲೆದೋರಿದ್ದ ಸಮಸ್ಯೆಗಳನ್ನು ಉಲ್ಲೇಖಿಸಿದ ಸಚಿವ ಜಮೀರ್ ನಯವಾಗಿ ಮಾಜಿ ಸಚಿವನ ಕಾಲೆಳೆದರು. ವಾಹನಗಳ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎದುರಾಗಿದ್ದ ಅಡಚಣೆಗಳ ಬಗ್ಗೆ ಸಚಿವ ಮಾತಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ