AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘777’ ಎಂದು ಟ್ಯಾಟೂ ಹಾಕಿಸಿಕೊಂಡ ಪವಿತ್ರಾ ಗೌಡ; ಇದಕ್ಕಿದೆ ದರ್ಶನ್ ಲಿಂಕ್?

ನೀತು ಟ್ಯಾಟೂ ಸ್ಟುಡಿಯೋಗೆ ಬಂದಿದ್ದು ನಟಿ ಪವಿತ್ರಾ ಗೌಡ. ನಟನೆಯಿಂದ ದೂರವೇ ಇದ್ದು, ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಪವಿತ್ರಾ. ಈಗ ಅವರು ವಿಶೇಷ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 777 ಎಂದು ಟ್ಯಾಟೂ ಬರೆಸಿಕೊಂಡಿದ್ದಾರೆ. ಸಣ್ಣ ಹಾರ್ಟ್ ಮಾರ್ಕ್ ಕೂಡ ಇದೆ.

‘777’ ಎಂದು ಟ್ಯಾಟೂ ಹಾಕಿಸಿಕೊಂಡ ಪವಿತ್ರಾ ಗೌಡ; ಇದಕ್ಕಿದೆ ದರ್ಶನ್ ಲಿಂಕ್?
ಪವಿತ್ರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 13, 2024 | 8:53 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಮೂಲಕ ನೀತು ವನಜಾಕ್ಷಿ ಫೇಮಸ್ ಆಗಿದ್ದಾರೆ. ತೃತೀಯಲಿಂಗಿಗಳ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಬದಲಿಸುವ ರೀತಿಯಲ್ಲಿ ಅವರು ಬದುಕಿ ತೋರಿಸುತ್ತಿದ್ದಾರೆ. ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ ಅವರು ತಮ್ಮದೇ ಆದ ಟ್ಯಾಟೂ ಸ್ಟುಡಿಯೋ ಹೊಂದಿದ್ದಾರೆ. ಜೊತೆಗೆ ಹೋಟೆಲ್ ಉದ್ಯಮ ಕೂಡ ಇದೆ. ಈಗ ಅವರ ಟ್ಯಾಟೂ ಸ್ಟುಡಿಯೋಗೆ ವಿಶೇಷ ಅತಿಥಿಯ ಆಗಮನ ಆಗಿದೆ. ಈ ವಿಡಿಯೋನ ನೀತು ಹಂಚಿಕೊಂಡಿದ್ದಾರೆ.

ನೀತು ಟ್ಯಾಟೂ ಸ್ಟುಡಿಯೋಗೆ ಬಂದಿದ್ದು ನಟಿ ಪವಿತ್ರಾ ಗೌಡ. ನಟನೆಯಿಂದ ದೂರವೇ ಇದ್ದು, ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಪವಿತ್ರಾ. ಈಗ ಅವರು ವಿಶೇಷ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 777 ಎಂದು ಟ್ಯಾಟೂ ಬರೆಸಿಕೊಂಡಿದ್ದಾರೆ. ಸಣ್ಣ ಹಾರ್ಟ್ ಮಾರ್ಕ್ ಕೂಡ ಇದೆ. ಇದಕ್ಕೆ ಫ್ಯಾನ್ಸ್ ನಾನಾ ಅರ್ಥ ಕಲ್ಪಿಸುತ್ತಿದ್ದಾರೆ. ಕಮೆಂಟ್ ಬಾಕ್ಸ್​ನಲ್ಲಿ ಟ್ಯಾಟೂ ಅರ್ಥ ಏನು ಇರಬಹುದು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ವಿಜಯಲಕ್ಷ್ಮಿ ದರ್ಶನ್​ಗೆ ಪ್ರತಿಕ್ರಿಯೆ: ಹಳೆ ವಿಷಯ ಕೆದಕಿದ ಪವಿತ್ರಾ ಗೌಡ

ನಟ ದರ್ಶನ್ ಜೊತೆ ಪವಿತ್ರಾ ಗೌಡ ಅವರು ಆಪ್ತತೆ ಬೆಳೆಸಿಕೊಂಡಿದ್ದಾರೆ. ದರ್ಶನ್ ಅವರ ಹುಟ್ಟಿದ ವರ್ಷ 1977. ಪವಿತ್ರಾ ಮಗಳು ಹುಟ್ಟಿದ್ದು ನವೆಂಬರ್ 7. ಹೀಗಾಗಿ, 777 ಎಂದು ಅವರು ಟ್ಯಾಟೂ ಹಾಕಿಸಿಕೊಂಡಿರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಇನ್ನೂ ಕೆಲವರು ಇದು ‘ದರ್ಶನ್ ಕಾರ್ ನಂಬರ್’ ಎಂದು ಹೇಳಿದ್ದಾರೆ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

ಪವಿತ್ರಾ ಗೌಡ ಅವರು ಇತ್ತೀಚೆಗೆ ದರ್ಶನ್ ಜೊತೆ ಇರೋ ಫೋಟೋಗಳನ್ನು ಸೇರಿಸಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ‘10 ವರ್ಷಗಳ ಸಂಬಂಧ’ ಎಂದು ಇದಕ್ಕೆ ಕ್ಯಾಪ್ಶನ್ ನೀಡಿದ್ದರು. ಇದಾದ ಬಳಿಕ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡಗೆ ವಾರ್ನ್ ಮಾಡಿದ್ದರು.  ಇವರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆದಿತ್ತು. ಆರೋಪ ಪ್ರತ್ಯಾರೋಪಗಳನ್ನು ಇವರು ಮಾಡಿಕೊಂಡಿದ್ದರು. ಈಗ ಪವಿತ್ರಾ ಟ್ಯಾಟೂ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದರ ನಿಜವಾದ ಅರ್ಥವನ್ನು ಅವರೇ ವಿವರಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:47 am, Wed, 13 March 24

ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ