ಹೊಸ ರಿಯಾಲಿಟಿ ಹೋಸ್ಟ್ ಮಾಡಲು 16 ಕೋಟಿ ರೂಪಾಯಿ ಪಡೆದ ರೋಹಿತ್ ಶೆಟ್ಟಿ; ಇರಲಿದ್ದಾರೆ ಬಿಗ್ ಬಾಸ್ ವಿನ್ನರ್
ರೋಹಿತ್ ಶೆಟ್ಟಿ ಅವರು ಈ ಮೊದಲೂ ‘ಖತ್ರೋ ಕೆ ಖಿಲಾಡಿ’ ಶೋ ನಡೆಸಿಕೊಟ್ಟಿದ್ದಾರೆ. ಅವರು ಪ್ರತಿ ಎಪಿಸೋಡ್ಗೆ 50 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಈಗ ಇದನ್ನು 60-70 ಲಕ್ಷ ರೂಪಾಯಿಗೆ ಏರಿಕೆ ಮಾಡಿಕೊಂಡಿದ್ದಾರೆ. ಇದನ್ನು ಲೆಕ್ಕ ಹಾಕಿದರೆ ಅವರು 14ನೇ ಸೀಸನ್ಗೆ 16 ಕೋಟಿ ರೂಪಾಯಿಗೂ ಅಧಿಕ ಹಣ ಪಡೆಯುತ್ತಿದ್ದಾರೆ.
ಕಲರ್ಸ್ ಟಿವಿಯಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿರುತ್ತವೆ. ಈ ಪೈಕಿ ‘ಖತ್ರೋ ಕೆ ಖಿಲಾಡಿ’ ರಿಯಾಲಿಟಿ ಶೋ ಕೂಡ ಗಮನ ಸೆಳೆದಿದೆ. ಈಗಾಗಲೇ 13 ಸೀಸನ್ಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, 14ನೇ ಸೀಸನ್ಗೆ ದಿನಗಣನೆ ಆರಂಭ ಆಗಿದೆ. ರೋಹಿತ್ ಶೆಟ್ಟಿ (Rohit Shetty) ಅವರು ಇದನ್ನು ನಡೆಸಿಕೊಡಲಿದ್ದಾರೆ. ಸ್ಟಂಟ್ ಆಧರಿಸಿದ ರಿಯಾಲಿಟಿ ಶೋ ಆಗಿರುವುದರಿಂದ ರೋಹಿತ್ ಶೆಟ್ಟಿ ಅವರು ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಅವರ ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಸ್ಟಂಟ್ಗಳು ಇರುತ್ತವೆ. ಅವರು ಈ ಶೋಗಾಗಿ ಬರೋಬ್ಬರಿ 16 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ.
ರೋಹಿತ್ ಶೆಟ್ಟಿ ಅವರು ಈ ಮೊದಲೂ ‘ಖತ್ರೋ ಕೆ ಖಿಲಾಡಿ’ ಶೋ ನಡೆಸಿಕೊಟ್ಟಿದ್ದಾರೆ. ಅವರು ಪ್ರತಿ ಎಪಿಸೋಡ್ಗೆ 50 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಈಗ ಇದನ್ನು 60-70 ಲಕ್ಷ ರೂಪಾಯಿಗೆ ಏರಿಕೆ ಮಾಡಿಕೊಂಡಿದ್ದಾರೆ. ಇದನ್ನು ಲೆಕ್ಕ ಹಾಕಿದರೆ ಅವರು 14ನೇ ಸೀಸನ್ಗೆ 16 ಕೋಟಿ ರೂಪಾಯಿಗೂ ಅಧಿಕ ಹಣ ಪಡೆಯುತ್ತಿದ್ದಾರೆ.
‘ಖತ್ರೋ ಕೆ ಖಿಲಾಡಿ’ ರಿಯಾಲಿಟಿ ಶೋನಲ್ಲಿ ಭರ್ಜರಿ ಸ್ಟಂಟ್ಗಳು ಇರುತ್ತವೆ. ನಾನಾ ರೀತಿಯ ಟಾಸ್ಕ್ ನೀಡಲಾಗುತ್ತದೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸೋ ಸೆಲೆಬ್ರಿಟಿಗಳು ತಮ್ಮ ಫಿಯರ್ ಬಗ್ಗೆ ಹೇಳಿಕೊಳ್ಳುತ್ತಾರೆ. ಕಳೆದ ಸೀಸನ್ನಲ್ಲಿ ರ‍್ಯಾಪರ್ ಡಿನೋ ಜೇಮ್ಸ್ ಅವರು ಗೆದ್ದಿದ್ದರು. ಆ ಸೀಸನ್ ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ನಡೆದಿತ್ತು.
‘ಬಿಗ್ ಬಾಸ್ ಹಿಂದಿ ಸೀಸನ್ 17’ ವಿನ್ ಆಗೋ ಮೂಲಕ ಮುನ್ನಾವರ ಫಾರುಖಿ ಅವರು ಗಮನ ಸೆಳೆದಿದ್ದಾರೆ. ಈ ಸೀಸನ್ನಲ್ಲಿ ಮನ್ನಾರಾ ಚೋಪ್ರಾ ಕೂಡ ಕೂಡ ಇದ್ದರು. ಇವರಿಬ್ಬರೂ ‘ಖತ್ರೊ ಕೆ ಖಿಲಾಡಿ’ ಶೋನಲ್ಲಿ ಭಾಗವಹಿಸೋ ಸಾಧ್ಯತೆ ಇದೆ. ಈಗಾಗಲೇ ಅವರಿಗೆ ಆಫರ್ ಹೋಗಿದ್ದು, ಅವರು ಭಾಗವಹಿಸಲು ನಿರ್ಧರಿಸಿದ್ದಾರೆ. ಈ ಮೊದಲು ಮುನ್ನಾವರ್ ಅವರು ‘ಖತ್ರೋ ಕೆ ಖಿಲಾಡಿ ಸೀಸನ್ 12’ರಲ್ಲಿ ಭಾಗವಹಿಸಬೇಕಿತ್ತು. ಆದರೆ, ವಿಸಾಗೆ ಸಂಬಂಧಿಸಿದ ತೊಂದರೆಯಿಂದ ಅವರಿಗೆ ಹೋಗೋಕೆ ಸಾಧ್ಯವಾಗಿಲ್ಲ. ‘ಖತ್ರೋ ಕೆ ಖಿಲಾಡಿ’ ಪ್ರತಿ ಬಾರಿಯೂ ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆಯುತ್ತದೆ. ಬಹುತೇಕ ಶೋಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದಿವೆ.
ಇದನ್ನೂ ಓದಿ: ಸೆಟ್ನಲ್ಲಿ ಬಸ್ಸು, ಕಾರು ಉಡೀಸ್ ಮಾಡಿದ ರೋಹಿತ್ ಶೆಟ್ಟಿ; ಇಲ್ಲಿದೆ ಝಲಕ್
ರೋಹಿತ್ ಶೆಟ್ಟಿ ಅವರು ‘ಸಿಂಗಂ 3’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ ಸೇರಿ ಸ್ಟಾರ್ಗಳ ದಂಡೇ ಇದೆ. ಈ ಚಿತ್ರ ಆಗಸ್ಟ್ 15ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ನಿರೀಕ್ಷಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ