59ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ಆಮಿರ್ ಖಾನ್; ಇಲ್ಲಿದೆ ಫಿಟ್ನೆಸ್ ಗುಟ್ಟು

Aamir Khan Birthday: ‘ದಂಗಲ್’ ಚಿತ್ರದಲ್ಲಿ ಅವರು ಹೊಟ್ಟೆ ಬಂದು ವಯಸ್ಸಾದವರಂತೆ ಕಾಣಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಅವರು ಸಾಕಷ್ಟು ಜಂಕ್ ಫುಡ್ ತಿಂದರು. ಅವರಿಗೆ ದೊಡ್ಡ ಹೊಟ್ಟೆ ಬಂದಿತ್ತು. ನಂತರದಲ್ಲಿ ಅವರು ಜಿಮ್​ನಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದರು. ಶಾಕಿಂಗ್ ವಿಚಾರ ಏನೆಂದರೆ ಆ ಸಂದರ್ಭದಲ್ಲಿ ನಿತ್ಯ ಅವರು 7 ಗಂಟೆ ಜಿಮ್ ಮಾಡುತ್ತಿದ್ದರು.

59ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ಆಮಿರ್ ಖಾನ್; ಇಲ್ಲಿದೆ ಫಿಟ್ನೆಸ್ ಗುಟ್ಟು
ಆಮಿರ್
Follow us
| Updated By: ರಾಜೇಶ್ ದುಗ್ಗುಮನೆ

Updated on:Mar 14, 2024 | 6:31 AM

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರಿಗೆ ಇಂದು (ಮಾರ್ಚ್ 14) ಜನ್ಮದಿನ. ಅವರು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್ನೊಂದು ವರ್ಷ ಕಳೆದರೆ ಆಮಿರ್ ವಯಸ್ಸು 60 ಆಗಲಿದೆ. ಅವರು ಈ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ. ಇತ್ತೀಚೆಗೆ ಆಮಿರ್ ಸಾಲು ಸಾಲು ಫ್ಲಾಪ್ ಕೊಡುತ್ತಿದ್ದಾರೆ. ಇದು ಅವರಿಗೆ ಹಾಗೂ ಅವರ ಫ್ಯಾನ್ಸ್​ಗೆ ಬೇಸರ ತಂದಿದೆ. ಈ ಕಾರಣದಿಂದಲೇ ಅವರು ನಟನೆಯಿಂದ ಬ್ರೇಕ್ ಪಡೆದು ನಿರ್ಮಾಣದತ್ತ ಗಮನ ಹರಿಸುತ್ತಿದ್ದಾರೆ. ಆಮಿರ್ ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ನಿತ್ಯವೂ ಅವರು ವರ್ಕೌಟ್ ಮಾಡುತ್ತಾರೆ. ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೊಟ್ಟೆ ಬಂದವರಂತೆ ಕಾಣಲು ಸಿಜಿ ಬಳಕೆ ಮಾಡಲಾಗುತ್ತದೆ ಅಥವಾ ಏನಾದರೂ ಕೋಟಿಂಗ್ ಹಾಕಲಾಗುತ್ತದೆ. ಆದರೆ, ಪಾತ್ರಕ್ಕಾಗಿ ಆಮಿರ್ ಖಾನ್ ಅವರು ಬಾಡಿ ಟ್ರಾನ್ಸ್​​ಫಾರ್ಮೇಷನ್ ಮಾಡಿಕೊಂಡಿದ್ದರು. ‘ದಂಗಲ್’ ಚಿತ್ರದಲ್ಲಿ ಅವರು ಹೊಟ್ಟೆ ಬಂದು ವಯಸ್ಸಾದವರಂತೆ ಕಾಣಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಅವರು ಸಾಕಷ್ಟು ಜಂಕ್ ಫುಡ್ ತಿಂದರು. ಅವರಿಗೆ ದೊಡ್ಡ ಹೊಟ್ಟೆ ಬಂದಿತ್ತು. ನಂತರದಲ್ಲಿ ಅವರು ಜಿಮ್​ನಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದರು. ಶಾಕಿಂಗ್ ವಿಚಾರ ಏನೆಂದರೆ ಆ ಸಂದರ್ಭದಲ್ಲಿ ನಿತ್ಯ ಅವರು 7 ಗಂಟೆ ಜಿಮ್ ಮಾಡುತ್ತಿದ್ದರು. ಅವರ ಟ್ರಾನ್ಸ್​ಫಾರ್ಮೇಷನ್ ಮೆಚ್ಚುಗೆ ಪಡೆಯಿತು.

ಒಂದು ವಾರಕ್ಕೆ ಆಮಿರ್ ಖಾನ್ ಅವರು ಆರು ದಿನ ಜಿಮ್ ಮಾಡುತ್ತಾರೆ. ನಿತ್ಯ ಅವರು ಮೂರು ಗಂಟೆ ಜಿಮ್​ನಲ್ಲಿ ಕಳೆಯುತ್ತಾರೆ. ಜಿಮ್​ಗೆ ಹೋದ ತಕ್ಷಣ 10 ನಿಮಿಷ ಸ್ಟ್ರೆಚ್ಚಿಂಗ್ ಮಾಡುತ್ತಾರೆ. 40 ನಿಮಿಷ ಆ್ಯಬ್ಸ್ ಮಾಡುತ್ತಾರೆ. ಹೀಗಾಗಿ ಅವರಿಗೆ ಹೊಟ್ಟೆ ಬಂದಿಲ್ಲ. ಉಳಿದ ಸಮಯ ದೇಹದ ತೂಕಕ್ಕೆ ಸಂಬಂಧಿಸಿದ ವರ್ಕೌಟ್ ಇರುತ್ತದೆ. ಸೋಮವಾರ ಚೆಸ್ಟ್ ವರ್ಕೌಟ್ ಇರುತ್ತದೆ, ಮಂಗಳವಾರ ಭುಜ, ಬುಧವಾರ ಬೆನ್ನಿನ ವರ್ಕೌಟ್, ಗುರುವಾರ ಬೈಸೆಪ್ಸ್, ಶುಕ್ರವಾರ ಟ್ರೈಸೆಪ್ಸ್ ಹಾಗೂ ಶನಿವಾರ ಲೆಗ್ ವರ್ಕೌಟ್ ಮಾಡುತ್ತಾರೆ.

‘ದಂಗಲ್’ ಚಿತ್ರಕ್ಕಾಗಿ ಕಷ್ಟಪಟ್ಟಿದ್ದ ಆಮಿರ್ ಖಾನ್

‘ದಂಗಲ್’ ಚಿತ್ರದ ಕೊನೆಯ ಹಂತದಲ್ಲಿ ದೇಹದ ತೂಕ ಹೆಚ್ಚಿಸಿಕೊಳ್ಳುವ ಪ್ಲ್ಯಾನ್ ಮಾಡಲಾಯಿತು. ಆದರೆ, ಆಮಿರ್ ಖಾನ್ ಹಾಗೆ ಮಾಡಿಲ್ಲ. ಮೊದಲು ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ನಂತರ ಮೋಟಿವೇಶನ್ ಪಡೆದು ಅವರು ತೆಳ್ಳಗಾಗೋಕೆ ಸಾಕಷ್ಟು ಶ್ರಮ ಪಟ್ಟರು. ಪ್ರತಿ ವಾರ ಅವರು ಎರಡು ಕೆಜಿ ದೇಹದ ತೂಕ ಇಳಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: 

ಆಮಿರ್ ಖಾನ್ ಅವರು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಸೆಲೆಬ್ರಿಟಿ ಡಯಟೀಶಿಯನ್ ಡಾ. ವಿನೋದ್ ಧುರಂದರ್ ಅವರು ಆಮಿರ್​ಗೆ ಆಹಾರದ ಬಗ್ಗೆ ಸಲಹೆ ನೀಡುತ್ತಾರೆ. ಆಮಿರ್ ಖಾನ್ ಅವರು ಜಂಕ್ ಫುಡ್​ಗಳಿಂದ ದೂರವೇ ಇದ್ದಾರೆ. ಬೆಳಿಗ್ಗೆ ತಿಂಡಿಗೆ ಆಮಿರ್ ಖಾನ್ ಮೊಟ್ಟೆಯ ಬಿಳಿ ಭಾಗ ಹಾಗೂ ಹಣ್ಣುಗಳನ್ನು ತಿನ್ನುತ್ತಾರೆ. 10 ಗಂಟೆಗೆ ಹಣ್ಣನ್ನು ತಿನ್ನುತ್ತಾರೆ. ಮಧ್ಯಾಹ್ನ ಚಿಕನ್, ತರಕಾರಿ ಸೇವಿಸುತ್ತಾರೆ. ಇದರ ಜೊತೆಗೆ ರೋಟಿ, ಮೀನು, ಮೊಟ್ಟೆ ಇರುತ್ತದೆ. ಹೆಚ್ಚೆಚ್ಚು ನೀರು ಕುಡಿಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:30 am, Thu, 14 March 24

ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು