1800 ಕೋಟಿ ರೂಪಾಯಿ ಒಡೆಯ ಆಮಿರ್ ಖಾನ್ ಬಳಿ ಇದೆ ಐದು ದುಬಾರಿ ವಸ್ತುಗಳು

ಆಮಿರ್ ಖಾನ್ ಅವರು ಬಾಂದ್ರಾದಲ್ಲಿ ಮನೆ ಹೊಂದಿದ್ದಾರೆ. 5000 ಚದರ ಅಡಿ ಹೊಂದಿರುವ ಈ ಮನೆ ಎರಡು ಅಂತಸ್ತನ್ನು ಹೊಂದಿದೆ. ಒಂದು ಅಂತಸ್ತು ಕಚೇರಿ ಕೆಲಸಕ್ಕೆ ಬಳಕೆ ಆದರೆ, ಮತ್ತೊಂದು ಅಂತಸ್ತು ಮನೆ ಆಗಿದೆ. ಇದರ ಬೆಲೆ ಬರೋಬ್ಬರಿ 60 ಕೋಟಿ ರೂಪಾಯಿ.

1800 ಕೋಟಿ ರೂಪಾಯಿ ಒಡೆಯ ಆಮಿರ್ ಖಾನ್ ಬಳಿ ಇದೆ ಐದು ದುಬಾರಿ ವಸ್ತುಗಳು
ಆಮಿರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 13, 2024 | 12:48 PM

ನಟ ಆಮಿರ್ ಖಾನ್ (Amir Khan) ಅವರಿಗೆ ಮಾರ್ಚ್ 14 ಜನ್ಮದಿನದ ಸಂಭ್ರಮ. ಕೆಲವು ದಿನ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯ ತಿಳಿಸಲಾಗುತ್ತಿದೆ. ಈ ವರ್ಷ ಅವರು ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದಾರೆ. ಅವರ ನಿರ್ಮಾಣದ ‘ಲಾಪತಾ ಲೇಡಿಸ್’ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಈ ಚಿತ್ರದಿಂದ ಆಮಿರ್ ಖಾನ್ ಅವರು ದೊಡ್ಡ ಲಾಭ ಕಂಡಿದ್ದಾರೆ. ಆಮಿರ್ ಖಾನ್ ಅವರ ಆಸ್ತಿ ಹಾಗೂ ಅವರ ಬಳಿ ಇರೋ ಐದು ದುಬಾರಿ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆಮಿರ್ ಖಾನ್ ಅವರಿಗೆ 59 ವರ್ಷ ತುಂಬಲಿದೆ. ಈ ವಯಸ್ಸಿನಲ್ಲೂ ಅವರು ಸಖತ್ ಫಿಟ್ ಆಗಿದ್ದಾರೆ. ನಿತ್ಯ ಜಿಮ್​ನಲ್ಲಿ ಅವರು ಸಮಯ ಕಳೆಯುತ್ತಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ಈ ಅವಧಿಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಪರಿಗಣಿಸಿ ಪದ್ಮಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ಸಿಕ್ಕಿದೆ. ಅವರ ಆಸ್ತಿ 1862 ಕೋಟಿ ರೂಪಾಯಿಗೂ ಅಧಿಕವಾಗಿದೆ. ನಟನೆ, ಸಿನಿಮಾ ನಿರ್ಮಾಣ, ಬ್ರ್ಯಾಂಡ್​ಗಳ ಪ್ರಚಾರ ಹಾಗೂ ನಾನಾ ಕಡೆ ಅವರು ಮಾಡಿರುವ ಹೂಡಿಕೆಯಿಂದ ಆಮಿರ್ ಖಾನ್​ಗೆ ಹಣ ಸಿಗುತ್ತದೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಳಿಕ ಆಮಿರ್ ಖಾನ್ ಅವರು ದೊಡ್ಡ ಬ್ರೇಕ್ ಪಡೆದಿದ್ದಾರೆ. ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವರು ಆತುರ ತೋರುತ್ತಿಲ್ಲ.  ಅವರ ಬಳಿ ಇರೋ ಐದು ದುಬಾರಿ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮ್ಯಾನ್ಷನ್ ಹೌಸ್

ಆಮಿರ್ ಖಾನ್ ಅವರು ಲಾಸ್ ಏಂಜಲೀಸ್​ನಲ್ಲಿ 75 ಕೋಟಿ ರೂಪಾಯಿ ಬೆಲೆಯ ಮ್ಯಾನ್ಷನ್ ಹೌಸ್ ಹೊಂದಿದ್ದಾರೆ. ಈ ಭಾಗದಲ್ಲಿ ಅನೇಕ ಸೆಲೆಬ್ರಿಟಿಗಳು ನಿವಾಸಗಳನ್ನು ಹೊಂದಿದ್ದಾರೆ. ಈ ಸಾಲಿನಲ್ಲಿ ಆಮಿರ್ ಖಾನ್ ಕೂಡ ಇದ್ದಾರೆ ಅನ್ನೋದು ವಿಶೇಷ.

ಬಾಂದ್ರಾ ಮನೆ

ಆಮಿರ್ ಖಾನ್ ಅವರು ಬಾಂದ್ರಾದಲ್ಲಿ ಮನೆ ಹೊಂದಿದ್ದಾರೆ. 5000 ಚದರ ಅಡಿ ಹೊಂದಿರುವ ಈ ಮನೆ ಎರಡು ಅಂತಸ್ತನ್ನು ಹೊಂದಿದೆ. ಒಂದು ಅಂತಸ್ತು ಕಚೇರಿ ಕೆಲಸಕ್ಕೆ ಬಳಕೆ ಆದರೆ, ಮತ್ತೊಂದು ಅಂತಸ್ತು ಮನೆ ಆಗಿದೆ. ಇದರ ಬೆಲೆ ಬರೋಬ್ಬರಿ 60 ಕೋಟಿ ರೂಪಾಯಿ.

ರೋಲ್ಸ್ ರಾಯ್ಸ್ ಘೋಸ್ಟ್

ಆಮಿರ್ ಖಾನ್ ಅವರಿಗೆ ಕಾರಿನ ಬಗ್ಗೆ ಕ್ರೇಜ್ ಇದೆ. ಅವರು ಅನೇಕ ಕಾರುಗಳನ್ನು ಹೊಂದಿದ್ದಾರೆ. ಈ ಪೈಕಿ ಅನೇಕ ಐಷಾರಾಮಿ ಕಾರುಗಳು ಇವೆ. ಅವರ ಬಳಿ ರೋಲ್ಸ್ ರಾಯ್ಸ್ ಘೋಸ್ಟ್ ಇದೆ. ಇದರ ಬೆಲೆ 7-8 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಆಮಿರ್ ಖಾನ್ ಸಂಬಂಧ ಹದಗೆಡಲು ಈ ನಿರ್ದೇಶಕಿಯೇ ಕಾರಣ? ರಿವೀಲ್ ಆಯ್ತು ವಿಚಾರ

ಬೆಂಜ್ ಎಸ್​600

ಆಮಿರ್ ಖಾನ್ ಅವರು ಮರ್ಸಿಡೀಸ್ ಬೆಂಜ್ ಎಸ್​ 600 ಕಾರನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 10.50 ಕೋಟಿ ರೂಪಾಯಿ. ಈ ಕಾರು ಸಾಕಷ್ಟು ಐಷಾರಾಮಿ ಆಗಿದೆ.

ಫಾರ್ಮ್​ಹೌಸ್

ಅನೇಕ ಸೆಲೆಬ್ರಿಟಿಗಳಿಗೆ ಫಾರ್ಮ್​ಹೌಸ್ ಹೊಂದೋ ಕ್ರೇಜ್ ಇದೆ. ಅದೇ ರೀತಿ ಆಮಿರ್ ಖಾನ್ ಅವರು ಪೊಂಚಗಣಿಯಲ್ಲಿ 2 ಎಕರೆ ಪ್ರಾಪರ್ಟಿ ಹೊಂದಿದ್ದಾರೆ. ಇದರ ಬೆಲೆ 7 ಕೋಟಿ ರೂಪಾಯಿ. ಅವರು ಸಮಯ ಸಿಕ್ಕಾಗ ಇಲ್ಲಿಗೆ ತೆರಳುತ್ತಾರೆ. ಅವರು ಈ ಜಾಗ ಪಡೆಯವಾಗ 42 ಲಕ್ಷ ಸ್ಟ್ತಾಂಪ್ ಡ್ಯೂಟಿ ಪಾವತಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ