AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್​​ನಲ್ಲಿ 4 ಕೋಟಿ ರೂ. ಗಳಿಸಿದ ‘ಲಾಪತಾ ಲೇಡಿಸ್’; ಆಮಿರ್​ಗೆ ಲಾಭವೋ, ನಷ್ಟವೋ?

‘ಲಾಪತಾ ಲೇಡಿಸ್’ ಚಿತ್ರ ಮಾರ್ಚ್ 1ರಂದು 75 ಲಕ್ಷ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ 1.45 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನದ ಗಳಿಕೆ 1.80 ಕೋಟಿ ರೂ. ಆಗಿದೆ. ಈ ಮೂಲಕ ಸಿನಿಮಾದ ಒಟ್ಟೂ ಗಳಿಕೆ 4 ಕೋಟಿ ರೂಪಾಯಿ ಆಗಿದೆ. ಕಡಿಮೆ ಬಜೆಟ್​ನ ಸಿನಿಮಾ ಆಗಿರುವುದರಿಂದ ನಿರ್ಮಾಪಕರಿಗೆ ಇದರಿಂದ ಲಾಭವೇ ಆಗಿರುತ್ತದೆ.

ಬಾಕ್ಸ್ ಆಫೀಸ್​​ನಲ್ಲಿ 4 ಕೋಟಿ ರೂ. ಗಳಿಸಿದ ‘ಲಾಪತಾ ಲೇಡಿಸ್’; ಆಮಿರ್​ಗೆ ಲಾಭವೋ, ನಷ್ಟವೋ?
ಕಿರಣ್-ಆಮಿರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 04, 2024 | 1:03 PM

Share

ಆಮಿರ್ ಖಾನ್ (Aamir Khan) ಅವರು ನಟನೆಗಿಂತ ನಿರ್ಮಾಣದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ‘ಲಾಪತಾ ಲೇಡಿಸ್’ ಸಿನಿಮಾ ನಿರ್ಮಾಣ ಮಾಡಿದ್ದು, ಮಾರ್ಚ್ 1ರಂದು ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಾಲ್ಕು ದಿನಕ್ಕೆ  ಸುಮಾರು ನಾಲ್ಕು ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದಲ್ಲಿ ಒಳ್ಳೆಯ ಮೆಸೇಜ್ ಇದೆ. ಈ ಚಿತ್ರ ನಿಧಾನವಾಗಿ ಜನರಿಗೆ ಇಷ್ಟ ಆಗುತ್ತಿದೆ.

‘ಲಾಪತಾ ಲೇಡಿಸ್’ ಸಿನಿಮಾ ಮಾರ್ಚ್ 1ರಂದು 75 ಲಕ್ಷ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ 1.45 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನದ ಗಳಿಕೆ 1.80 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಸಿನಿಮಾದ ಒಟ್ಟೂ ಗಳಿಕೆ 4 ಕೋಟಿ ರೂಪಾಯಿ ಆಗಿದೆ. ಕಡಿಮೆ ಬಜೆಟ್​ನ ಸಿನಿಮಾ ಆಗಿರುವುದರಿಂದ ನಿರ್ಮಾಪಕರಿಗೆ ಇದರಿಂದ ಲಾಭವೇ ಆಗಿರುತ್ತದೆ.

ಆಮಿರ್ ಖಾನ್ ಅವರು ಕೇವಲ ಲಾಭದ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವುದಿಲ್ಲ. ಒಳ್ಳೆಯ ಕಥೆ ಸಿಕ್ಕರೆ ಅದನ್ನು ನಿರ್ಮಿಸಲು ಆಸಕ್ತಿ ತೋರಿಸುತ್ತಾರೆ. ‘ಲಾಪತಾ ಲೇಡಿಸ್’ ಚಿತ್ರದ ಕಥೆ ಇಷ್ಟವಾಗಿ ಆಮಿರ್ ಅದನ್ನು ಕಿರಣ್ ರಾವ್ ಬಳಿ ಚರ್ಚಿಸಿದರು. ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಖರ್ಚಾಗಿದ್ದು ಕೇವಲ 5 ಕೋಟಿ ರೂಪಾಯಿ. ಬಾಕ್ಸ್ ಆಫೀಸ್ ಜೊತೆ ಟಿವಿ ಹಕ್ಕು ಹಾಗೂ ಒಟಿಟಿ ಹಕ್ಕಿನಿಂದ ಸಿನಿಮಾಗೆ ಹಣ ಬಂದಿರುತ್ತದೆ. ಹೀಗಾಗಿ, ಈ ಚಿತ್ರದಿಂದ ನಿರ್ಮಾಪಕರಿಗೆ ಹಣ ಸಿಗುತ್ತದೆ.

‘ಲಾಪತಾ ಲೇಡಿಸ್’ ಸಿನಿಮಾದ ಕಥೆ ಕಾಲ್ಪನಿಕ ರಾಜ್ಯ ನಿರ್ಮಲ್ ಪ್ರದೇಶ್ ಎಂಬಲ್ಲಿ ನಡೆಯುತ್ತದೆ. ಎರಡು ವಧುಗಳು ರೈಲಿನಲ್ಲಿ ಎಕ್ಸ್​ಚೇಂಜ್ ಆಗಿ ಬಿಡುತ್ತಾರೆ. ಇಲ್ಲಿಂದ ಕಥೆ ಶುರುವಾಗುತ್ತದೆ. ಪ್ರತಿಭಾ ರತ್ನ, ನಿತಾಂಶಿ ಗೋಯಲ್, ಸ್ಪರ್ಷ ಶ್ರೀವಾತ್ಸವ್, ರವಿ ಕಿಶನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ‘ಧೋಬಿ ಘಾಟ್’ ಬಳಿಕ ಕಿರಣ್ ನಿರ್ದೇಶನ ಮಾಡಿದ ಎರಡನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಬಗ್ಗೆ ನಟ ಆಮಿರ್ ಖಾನ್ ಮಾತು, ವಿದ್ಯಾರ್ಥಿಗಳು ಫುಲ್ ಖುಷ್

ಆಮಿರ್ ಖಾನ್ ಹಾಗೂ ಕಿರಣ್ ರಾವ್ ಹಲವು ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದ್ದರು. ಆದರೆ, ಇವರು ಕೆಲವು ವರ್ಷಗಳ ಹಿಂದೆ ವಿಚ್ಛೇದನದ ನಿರ್ಧಾರ ತೆಗೆದುಕೊಂಡರು. ಆದರೆ ಸಿನಿಮಾ ವಿಚಾರ ಎಂಬುದು ಬಂದಾಗ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಈ ಕಾರಣಕ್ಕೆ ಇವರು ಉಳಿದವರಿಗಿಂತ ಭಿನ್ನ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಇರಾ ಖಾನ್ ಮದುವೆಯಲ್ಲಿ ಆಮಿರ್ ಹಾಗೂ ಕಿರಣ್ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು