AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್​ಗೆ ಕಿರಣ್ ರಾವ್ ವಿಚ್ಛೇದನ ನೀಡಿದ್ದೇಕೆ? ಇದಕ್ಕಿದೆ 20 ಕಾರಣ

ಆಮಿರ್ ಖಾನ್ ನೀಡಿದ ಈ ಹೇಳಿಕೆ ಚರ್ಚೆ ಆಗುತ್ತಿದೆ. ‘ಡಿವೋರ್ಸ್ ಪಡೆಯುವ ಮೊದಲೇ ಆಮಿರ್ ಖಾನ್ ಈ ವಿಚಾರದ ಬಗ್ಗೆ ಚರ್ಚೆ ಮಾಡಬಹುದಿತ್ತು. ಇದರಿಂದ ವಿಚ್ಛೇದನ ಆಗುವುದು ತಪ್ಪುತ್ತಿತ್ತು’ ಎಂದು ಕೆಲವರು ಹೇಳಿದ್ದಾರೆ.  ಇನ್ನೂ ಕೆಲವರು ಆಮಿರ್ ಖಾನ್ ಅವರ ಪರ ಬ್ಯಾಟ್ ಬೀಸಿದ್ದಾರೆ.

ಆಮಿರ್ ಖಾನ್​ಗೆ ಕಿರಣ್ ರಾವ್ ವಿಚ್ಛೇದನ ನೀಡಿದ್ದೇಕೆ? ಇದಕ್ಕಿದೆ 20 ಕಾರಣ
ಆಮಿರ್-ಕಿರಣ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Feb 26, 2024 | 3:43 PM

Share

ಆಮಿರ್ ಖಾನ್ (Aamir Khan) ಹಾಗೂ ಕಿರಣ್ ರಾವ್ ಅವರು 15 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು. ಆದರೆ, 2021ರಲ್ಲಿ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಡಿವೋರ್ಸ್ ಬಳಿಕವೂ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ಇಬ್ಬರೂ ಫ್ರೆಂಡ್ಸ್ ಆಗಿದ್ದಾರೆ. ಹಲವು ಸಿನಿಮಾಗಳನ್ನು ಇವರು ಒಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಇವರು ಬೇರೆ ಆಗುವುದಕ್ಕೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿರಲಿಲ್ಲ. ಈಗ ಈ ಬಗ್ಗೆ ಆಮಿರ್ ಖಾನ್ ಅವರು ಮಾತನಾಡಿದ್ದಾರೆ.

‘ಲಾಪತಾ ಲೇಡಿಸ್’ ಸಿನಿಮಾನ ಆಮಿರ್ ಖಾನ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಕಿರಣ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಆಮಿರ್ ಹಾಗೂ ಕಿರಣ್ ಒಟ್ಟಾಗಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ಹಲವು ವಿಚಾರ ರಿವೀಲ್ ಮಾಡಿದ್ದಾರೆ. ವಿಚ್ಛೇದನದ ದಿನದ ನಡೆದ ಚರ್ಚೆ ಏನು ಎಂಬುದನ್ನು ವಿವರಿಸಿದ್ದಾರೆ ಅವರು.

‘ನಾವು ಇತ್ತೀಚೆಗೆ ವಿಚ್ಛೇದನ ಪಡೆದೆವು. ಅದರ ಬಗ್ಗೆ ನಿಮಗೆ ಗೊತ್ತಿದೆ ಎನಿಸುತ್ತದೆ. ನಾನು ವಿಚ್ಛೇದನ ಪಡೆದ ದಿನ ಸಂಜೆ ಕಿರಣ್ ಬಳಿ ಮಾತನಾಡಿದೆ. ಪತಿಯಾಗಿ ನನ್ನಲ್ಲಿ ಏನು ಕೊರತೆ ಇದೆ ಎಂದು ಕೇಳಿದ್ದೆ’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ ಆಮಿರ್ ಖಾನ್. ‘ಕಿರಣ್ ಅವರು ನನ್ನ ಪ್ರಶ್ನೆಗೆ ಉತ್ತರ ನೀಡಿದರು. ನಾನು ಹೇಳುತ್ತೇನೆ, ಬರೆದುಕೊಳ್ಳಿ ಎಂದರು. 15-20 ಪಾಯಿಂಟ್ಸ್ ಹೇಳಿದರು. ನೀವು ಜಾಸ್ತಿ ಮಾತನಾಡುತ್ತೀರಿ. ಬೇರೆಯವರ ಮಾತನ್ನು ಕೇಳುವುದಿಲ್ಲ. ನಿಮ್ಮ ಹೇಳಿಕೆಯೇ ಸರಿ ಎನ್ನುತ್ತೀರಿ.. ಹೀಗೆ 15-20 ಪಾಯಿಂಟ್ಸ್ ಹೇಳಿದರು’ ಎಂದಿದ್ದಾರೆ ಆಮಿರ್ ಖಾನ್.

ಆಮಿರ್ ಖಾನ್ ಅವರು ನೀಡಿದ ಈ ಹೇಳಿಕೆ ಚರ್ಚೆ ಆಗುತ್ತಿದೆ. ‘ಡಿವೋರ್ಸ್ ಪಡೆಯುವ ಮೊದಲೇ ಆಮಿರ್ ಖಾನ್ ಅವರು ಈ ವಿಚಾರದ ಬಗ್ಗೆ ಚರ್ಚೆ ಮಾಡಬಹುದಿತ್ತು. ಇದರಿಂದ ವಿಚ್ಛೇದನ ಆಗುವುದು ತಪ್ಪುತ್ತಿತ್ತು’ ಎಂದು ಕೆಲವರು ಹೇಳಿದ್ದಾರೆ.

‘ಲಾಪತಾ ಲೇಡಿಸ್’ ಚಿತ್ರವನ್ನು ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಹಾಗೂ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿದೆ. 14 ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ ಕಿರಣ್. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರ ಮಾರ್ಚ್​ 1ರಂದು ರಿಲೀಸ್ ಆಗಲಿದೆ.

ಇದನ್ನೂ ಓದಿ: ಆಮಿರ್ ಖಾನ್ ಸಿನಿಮಾ ನಿರ್ಮಾಪಕನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಆಮಿರ್ ಖಾನ್ ಅವರು ‘ಲಾಲ್ ಸಿಂಗ್ ಚಡ್ಡಾ’ ಬಳಿಕ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅವರು ಸಿನಿಮಾ ಕಥೆ ಆಯ್ಕೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ