ಇನ್ಮುಂದೆ YRF ಸಿನಿಮಾಗಳಲ್ಲಿ ಇರಲ್ಲ ಸಲ್ಮಾನ್ ಖಾನ್ ಅತಿಥಿ ಪಾತ್ರ; ನಿರ್ಧಾರಕ್ಕೆ ಕಾರಣ ಏನು?

ಕೆಲವು ಪ್ರಮುಖ ಸಂದರ್ಭದಲ್ಲಿ ಮಾತ್ರ ಸಲ್ಮಾನ್ ಖಾನ್ ಅವರನ್ನು ಕರೆತರಲು ಆದಿತ್ಯ ಚೋಪ್ರಾ ನಿರ್ಧರಿಸಿದ್ದಾರೆ. ‘ವಾರ್ 2’ ಹಾಗೂ ‘ಪಠಾಣ್ 2’ ಚಿತ್ರದಲ್ಲಿ ಅವರು ನಟಿಸಿದರೆ ಜನರ ಗಮನ ಸಂಪೂರ್ಣವಾಗಿ ಅವರ ಕಡೆಯೇ ಹೋಗುತ್ತದೆ ಎನ್ನುವ ಭಯ ಅವರನ್ನು ಕಾಡಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ಮುಂದೆ YRF ಸಿನಿಮಾಗಳಲ್ಲಿ ಇರಲ್ಲ ಸಲ್ಮಾನ್ ಖಾನ್ ಅತಿಥಿ ಪಾತ್ರ; ನಿರ್ಧಾರಕ್ಕೆ ಕಾರಣ ಏನು?
ಸಲ್ಮಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 13, 2024 | 11:33 AM

ಸಲ್ಮಾನ್ ಖಾನ್ ಹಾಗೂ ಯಶ್​ ರಾಜ್​ ಫಿಲ್ಮ್ಸ್ (Yash Raj Films) ನಿರ್ಮಾಣ ಸಂಸ್ಥೆ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ನಿರ್ಮಾಣ ಸಂಸ್ಥೆಯಡಿಯಲ್ಲಿ ಸಲ್ಲು ನಟನೆಯ ‘ಟೈಗರ್’ ಸರಣಿ ಮೂಡಿ ಬಂದಿದೆ. ‘ಪಠಾಣ್​ vs ಟೈಗರ್’ ಕೂಡ ಇದೇ ಸಿನಿಮಾ ನಿರ್ಮಾಣ ಸಂಸ್ಥೆ ಸಿದ್ಧಪಡಿಸಲಿದೆ. ಈ ಮಧ್ಯೆ ಒಂದು ವಿಚಾರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಆದಿತ್ಯ ಚೋಪ್ರಾ ಮುನ್ನಡೆಸುತ್ತಿರುವ ಈ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿ ಬರಲಿರುವ ಮುಂದಿನ ಚಿತ್ರಗಳಲ್ಲಿ ಸಲ್ಲು ಅವರ ಅತಿಥಿ ಪಾತ್ರ ಇರುವುದಿಲ್ಲ ಎನ್ನಲಾಗಿದೆ.

‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶಾರುಖ್ ಖಾನ್ ನಟನೆಯ ಈ ಚಿತ್ರದಲ್ಲಿ ಸಲ್ಲು ಅವರ ಅತಿಥಿ ಪಾತ್ರವೂ ಹೈಲೈಟ್ ಆಗಿತ್ತು. ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲು ಅವರ ಕೊಡುಗೆಯೂ ಇತ್ತು. ಸಲ್ಮಾನ್ ಖಾನ್ ಫ್ಯಾನ್ಸ್ ಈ ಚಿತ್ರವನ್ನು ನೋಡಿದ್ದರು. ಆದರೆ, ‘ಪಠಾಣ್ 2’ ಹಾಗೂ ‘ವಾರ್ 2’ ಸಿನಿಮಾಗಳಲ್ಲಿ ಸಲ್ಮಾನ್  ಖಾನ್ ಅವರು ಅತಿಥಿ ಪಾತ್ರ ಮಾಡುತ್ತಿಲ್ಲ. ಇದಕ್ಕೆ ಆದಿತ್ಯ ಚೋಪ್ರಾ ಅವರೇ ಅವಕಾಶ ನೀಡುತ್ತಿಲ್ಲ.

‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ಒಟ್ಟಾಗಿ ನಟಿಸುತ್ತಿದ್ದಾರೆ. ‘ಪಠಾಣ್ 2’ ಚಿತ್ರದಲ್ಲಿ ಶಾರುಖ್ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈಗಾಗಲೇ ಯಶ್ ರಾಜ್ ಸ್ಪೈ ಯೂನಿವರ್ಸ್ ಅಡಿಯಲ್ಲಿ ಐದು ಸಿನಿಮಾಗಳನ್ನು ಮಾಡಲಾಗಿದ್ದು, ಈ ಪೈಕಿ ನಾಲ್ಕರಲ್ಲಿ ಟೈಗರ್ ಪಾತ್ರ ಇದೆ. ಅವರು ಎಲ್ಲಾ ಸಿನಿಮಾಗಳಲ್ಲೂ ಆಗಮಿಸಿದರೆ ಪಾತ್ರಕ್ಕೆ ಹೆಚ್ಚು ತೂಕ ಇರುವುದಿಲ್ಲ ಅನ್ನೋದು ಆದಿತ್ಯ ಚೋಪ್ರಾ ಅವರ ಅಭಿಪ್ರಾಯ.

ಕೆಲವು ಪ್ರಮುಖ ಸಂದರ್ಭದಲ್ಲಿ ಮಾತ್ರ ಸಲ್ಮಾನ್ ಖಾನ್ ಅವರನ್ನು ಕರೆತರಲು ಆದಿತ್ಯ ಚೋಪ್ರಾ ನಿರ್ಧರಿಸಿದ್ದಾರೆ. ‘ವಾರ್ 2’ ಹಾಗೂ ‘ಪಠಾಣ್ 2’ ಚಿತ್ರದಲ್ಲಿ ಅವರು ನಟಿಸಿದರೆ ಜನರ ಗಮನ ಸಂಪೂರ್ಣವಾಗಿ ಅವರ ಕಡೆಯೇ ಹೋಗುತ್ತದೆ ಎನ್ನುವ ಭಯ ಅವರನ್ನು ಕಾಡಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

‘ವಾರ್ 2’ ಚಿತ್ರಕ್ಕೆ ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ನ ವೇಗವಾಗಿ ಪೂರ್ಣಗೊಳಿಸುವ ಆಲೋಚನೆಯಲ್ಲಿ ಅವರಿದ್ದಾರೆ. ಇದಾದ ಬಳಿಕ ಅಯಾನ್ ಮುಖರ್ಜಿ ಅವರು ‘ಬ್ರಹ್ಮಾಸ್ತ್ರ 2’ ಸಿನಿಮಾದಲ್ಲಿ ತೊಡಗಿಕೊಳ್ಳಬೇಕಿದೆ.

ಇದನ್ನೂ ಓದಿ: ‘ರಕ್ಷಿತ್ ಸಿನಿಮಾ ಮಾಡಲು ನಿರ್ಮಾಪಕರಿದ್ದಾರೆ, ಅವರಿಗೆ ಸದ್ಯಕ್ಕಂತೂ ನನ್ನ ಅನಿವಾರ್ಯತೆ ಇಲ್ಲ’; ಪುಷ್ಕರ್

‘ವಾರ್ 2’ ಚಿತ್ರದ ಬಗ್ಗೆ ನಿರೀಕ್ಷೆ ಮೂಡಲು ಕಾರಣ ಜೂನಿಯರ್​ ಎನ್​ಟಿಆರ್​. ‘ಆರ್​ಆರ್​ಆರ್’ ಬಳಿಕ ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಇದಾದ ಬಳಿಕ ಅವರು ‘ವಾರ್ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. 2025ರಲ್ಲಿ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ